ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಹೊಸ ಕನಸು- ಬಜೆಟ್​ನಲ್ಲಿ ನಿಮ್ಮ ಐಡಿಯಾಗಳಿಗೂ ಇದೆ ಬೆಲೆ

ಟೀಮ್​ ವೈ.ಎಸ್​. ಕನ್ನಡ

1

ದೇಶದ ಅಭಿವೃದ್ಧಿಯನ್ನು ಮತ್ತು ಆರ್ಥಿಕ ಸ್ಥಿತಿಯನ್ನು ನಿರ್ಧರಿಸಬಲ್ಲ ಶಕ್ತಿ ಬಜೆಟ್​ಗಿದೆ. ವಾರ್ಷಿಕ ಲೆಕ್ಕಾಚಾರ ಎಲ್ಲಾ ಕಡೆಯೂ ನಡೆಯುತ್ತದೆ. ಕೇಂದ್ರ ಸರ್ಕಾರ ದೇಶದ ಬಜೆಟ್​ನ್ನು ಪ್ಲಾನ್ ಮಾಡಿದ್ರೆ, ರಾಜ್ಯದ ಅಭಿವೃದ್ಧಿ ಮತ್ತು ಖರ್ಚು ವೆಚ್ಚಗಳನ್ನು ನೋಡಿಕೊಳ್ಳುವುದು ರಾಜ್ಯ ಬಜೆಟ್. ಆದ್ರೆ ಬೆಂಗಳೂರಿನಂತಹ ಮಹಾನಗರಗಳಲ್ಲಿ ಮಹಾನಗರ ಪಾಲಿಕೆಗಳು ಇದರ ನಿರ್ವಾಹಣೆ ಮಾಡುತ್ತದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಬಜೆಟ್ ಅಂತೂ ಪ್ರತೀ ಬಾರಿಯೂ ಗಮನ ಸೆಳೆಯುತ್ತದೆ.

ಬಿಬಿಎಂಪಿಯ ಬಜೆಟ್ ಪ್ರತೀಬಾರಿಯೂ ವಿವಾದದ ಕೇಂದ್ರಬಿಂದುವಾಗಿರುತ್ತದೆ. ಆಡಳಿತ ಪಕ್ಷಗಳು ಒಂದು ಯೋಚನೆಯಂತೆ ಯೋಜನೆಗಳನ್ನು ರೂಪಿಸಿ ಬಜೆಟ್ ಪ್ಲಾನ್ ಮಾಡಿದ್ರೆ, ವಿಪಕ್ಷಗಳದ್ದು ಇನ್ನೊಂದು ಯೋಚನೆ ಆಗಿರುತ್ತದೆ. ಮತ್ತೊಂದು ಕಡೆಯಲ್ಲಿ ನಾಗರೀಕರು ಕೂಡ ಒಂದೊಂದು ಐಡಿಯಾಗಳನ್ನು ಇಟ್ಟುಕೊಂಡಿರುತ್ತಾರೆ.

ಬಜೆಟ್​ನಲ್ಲಿ ವಾರ್ಷಿಕವಾಗಿ ಸಂಗ್ರಹವಾಗುವ ಟ್ಯಾಕ್ಸ್, ಖರ್ಚಾಗುವ ಹಣ, ಹೊಸ ಯೋಜನೆಗಳು ಸೇರಿದಂತೆ ಹಲವು ಅಂಶಗಳಿರುತ್ತವೆ. ಅದರಲ್ಲೂ ಬಿಬಿಎಂಪಿ ರಚಿಸುವ ಬಜೆಟ್​ನಲ್ಲಿ ರಾಜಕೀಯದ ಭವಿಷ್ಯವೇ ಅಡಗಿರುತ್ತದೆ. ಬಿಬಿಎಂಪಿ ನೀಡುವ ಅನುದಾನ ಅಭಿವೃದ್ಧಿ ಫಥದ ಬ್ಲೂ ಪ್ರಿಂಟ್​ನ್ನು ಕೂಡ ಮಾಡಲಿದೆ. ಅಭ್ಯರ್ಥಿಗಳ ಸೋಲು, ಗೆಲುವುಗಳು ಕೂಡ ಬಜೆಟ್ ರಚನೆಯಲ್ಲೇ ಅಡಗಿರುತ್ತದೆ.

ರಾಜಕೀಯದ ಲಾಭದ ನಡುವೆಯವೆಯೂ ಬಿಬಿಎಂಪಿ ಈ ಬಾರಿ ವಿಭಿನ್ನ ಬಜೆಟ್ ರೂಪಿಸಲು ಸಿದ್ಧತೆ ಮಾಡಿಕೊಂಡಿದೆ. ಅಷ್ಟೇ ಅಲ್ಲ ಬಿಬಿಎಂಪಿ ಬಜೆಟ್ ಈ ಬಾರಿ ವಿಶೇಷವಾಗಿ ರೂಪುಗೊಳ್ಳಲಿದೆ. ನಾಗರೀಕರು ನೇರವಾಗಿ ಬಜೆಟ್ ರಚನೆಯಲ್ಲಿ ಭಾಗವಹಿಸಬಹುದು. ಹಾಗಂತ ನೀವೇನು ಪಾಲಿಕೆ ಕಚೇರಿಗೆ ಬಂದು ಮೇಯರ್,ಕಮಿಷನರ್ ಜತೆ ಮೀಟಿಂಗ್ ಮಾಡೊ ಅವಶ್ಯಕತೆ ಇಲ್ಲ. ಬದಲಾಗಿ ಮನೆಯಿಂದಲೇ , ನಿಮ್ಮ ಏರಿಯಾದಲ್ಲೇ ಕುಳಿತು ಬಜೆಟ್​ನ ಭಾಗವಾಗಬಹುದು. ನಿಮ್ಮ ಅವಶ್ಯಕತೆಯ ಕನಸಿನ ಜೊತೆಗೆ ನಿಮ್ಮ ಏರಿಯಾಕ್ಕೆ ಆಗಬೇಕಾದ ಒಳಿತಿನ ಕುರಿತು ಅಭಿಪ್ರಾಯ ಹೇಳುವಂತಹ ಅವಕಾಶ ಬೆಂಗಳೂರು ನಾಗರಿಕರಿಗಿದೆ.

ಇದನ್ನು ಓದಿ: ಒತ್ತಡವಿಲ್ಲದ ಕೆಲಸ- ಕೈ ತುಂಬಾ ಸಂಬಳ- ನೆಮ್ಮದಿಯಾಗಿ ಸಮಯ ಕಳೆಯುವ ಬಗ್ಗೆ ಯೋಚನೆ ಮಾಡಿ

ಬೃಹತ್ ಬೆಂಗಳೂರು ಅಭಿವೃದ್ಧಿಗೆ ಈ ಬಾರಿಗೆ ಎಂತಹ ಬಜೆಟ್ ಮಂಡಿಸಬೇಕು..?  ಬೆಂಗಳೂರಿಗರಾಗಿ ನೀವೇ ಹೇಳಿ. ಹೀಗೆ ನಿಮ್ಮ ಅಭಿಪ್ರಾಯ ಸಂಗ್ರಹಕ್ಕೆ ಬಿಬಿಎಂಪಿ ಮುಂದಾಗಿದೆ. ನಗರದ ಎಲ್ಲಾ ನಾಗರೀಕರು ಸಕ್ರೀಯರಾಗಿ ಭಾಗವಹಿಸಲು ಬಿಬಿಎಂಪಿ ಅವಕಾಶ ನೀಡಿದೆ.

2017-18ನೇ ಸಾಲಿನ ಬಜೆಟ್ ಹೇಗಿರಬೇಕು, ಬಜೆಟ್​ನಲ್ಲಿ ಯಾವ ವಿಷಯಕ್ಕೆ ಆದ್ಯತೆ, ಯಾವ ಸಮಸ್ಯೆ ಪರಿಹಾರಕ್ಕೆ ಹೆಚ್ಚು ಹಣ ಮೀಸಲಿಡಬೇಕು ಎಂದು ನಾಗರೀಕರ ಸಲಹೆ ಪಡೆಯಲು ಮುಂದಾಗಿದ್ದು ಜನಾಗ್ರಹ ಸಂಸ್ಥೆ ಜೊತೆಗೂಡಿ ಮೈ ಸಿಟಿ ಮೈ ಬಜೆಟ್ ಅಭಿಯಾನಕ್ಕೆ ಚಾಲನೆ ನೀಡಿದೆ.

ಏನಿದು ಮೈ ಸಿಟಿ.. ಮೈ ಬಜೆಟ್..?

ಅಂದಹಾಗೇ, ಏನಿದು ಮೈ ಸಿಟಿ.. ಮೈ ಬಜೆಟ್..? ಅನ್ನೋ ಕುತೂಹಲಕ್ಕೆ ಉತ್ತರವೂ ಇಲ್ಲಿದೆ. ವಾಹನವೊಂದು ನಿಮ್ಮ ಬೇಡಿಕೆ ಕೇಳೋದಕ್ಕೆ ನಿಮ್ಮ ಏರಿಯಾಗೆ ಬರುತ್ತದೆ. ಬಿಬಿಎಂಪಿಯ 2017-18ರ ಸಾಲಿನಲ್ಲಿ ಬಜೆಟ್​ನಲ್ಲಿ ನಿಮ್ಮ ಪಾಲೂ ಇರಲಿದೆ. ಬಜೆಟ್ ಇನ್​ಪುಟ್, ಬಜೆಟ್ ಕ್ರೋಢೀಕರಣ ,ಬಜೆಟ್ ವಿಶ್ಲೇಷಣೆ, ನಾಗರೀಕರ ಜೊತೆ ಸಂದರ್ಶನ, ವಿಮರ್ಶೆಗಾಗಿ, ವಾಹನ ನಿಮ್ಮ ಮನೆ ಬಾಗಿಲಿಗೆ ಬರಲಿದೆ. ಈ ವಾಹನ ನಗರದಲ್ಲಿ 60 ದಿನಗಳ ಕಾಲ ಸಂಚಾರಿಸಲಿದ್ದು , 2400 ಕಿಲೋಮೀಟರ್​ನ 250 ಸ್ಥಳಗಳಲ್ಲಿ ಈ ವಾಹನ ಸಂಚಾರಿಸಿ ನಾಗರೀಕರ ಅಭಿಪ್ರಾಯ ಪಡೆಯಲಿದೆ. 5 ಲಕ್ಷ ನಾಗರೀಕರಿಂದ ಮಾಹಿತಿ ಸಂಗ್ರಹಿಸುವ ಉದ್ಧೇಶ ಬಿಬಿಎಂಪಿಯದ್ದು.

"ಬಿಬಿಎಂಪಿ ಈ ಬಾರಿ ಬಜೆಟ್​ನಲ್ಲಿ ನಾಗರೀಕರ ಅಭಿಪ್ರಾಯ ಸಮಗ್ರಹಿಸಲು ಪ್ಲಾನ್​ ಮಾಡಿರುವುದು ನಿಜಕ್ಕೂ ಉತ್ತಮ ಬೆಳವಣಿಗೆ. ಆಡಳಿತ ನಡೆಸುವವರಿಗೆ ಜನರು ಬಯಸುವ ಯೋಚನೆಗಳು ಮತ್ತು ಅಭಿವೃದ್ಧಿಗಳ ಬಗ್ಗೆ ಈ ಮೂಲಕ ಒಂದು ಐಡಿಯಾ ಸಿಗುತ್ತದೆ. ಬಜೆಟ್​ನಲ್ಲಿ ಪೋಲಾಗುವ ಹಣವನ್ನು ಎಲ್ಲಿ ಬಳಸಬೇಕು ಅನ್ನುವ ಬಗ್ಗೆ ಸೂಕ್ಷ್ಮವಾಗಿ ತಿಳಿಯಲಿದೆ. ಹಣ ದುರುಪಯೋಗವಾಗುವುದನ್ನು ಕೂಡ ಈ ಮೂಲಕ ತಡೆಯಬಹುದು."
- ಸುರೇಶ್​ ರೆಡ್ಡಿ, ಬೆಂಗಳೂರು ನಾಗರೀಕರು

ಈ ಬಾರಿ ಪಾಲಿಕೆ ಜನಾಭಿಪ್ರಾಯದ ಮೂಲಕ ಜನ ಸ್ನೇಹಿ ಬಜೆಟ್ ತಯಾರಿಗೆ ಮುಂದಾಗಿದೆ. ಜನರ ಇಚ್ಛೆಯಂತೆ ಅವರ ಸಮಸ್ಯೆಗೆ ಸ್ಪಂದಿಸಲು ಬಿಬಿಎಂಪಿ ಮುಂದಾಗಿದೆ. ಆದರೆ ಬಿಬಿಎಂ ಎಷ್ಟರ ಮಟ್ಟಿಗೆ ಇದನ್ನು ಅನುಸರಿಸಲಿದೆ ಎಂಬುದು ಮುಂದಿನ ದಿನಗಳಲ್ಲಿ ನೋಡಬೇಕು.

ಇದನ್ನು ಓದಿ:

1. ಸಕಲ ಕಲಾ ವಲ್ಲಭನಿಗಿಲ್ಲ ಸಾಟಿ- ಸೂಪರ್​ ಆರ್ಟಿಸ್ಟ್​, ಖಡಕ್​ ವಿಲನ್​..!

2. ಅಮ್ಮನದ್ದೇ ಕೈರುಚಿ- ಅನಾರೋಗ್ಯದ ಬಗ್ಗೆಯೂ ಬೇಡ ಭೀತಿ

3. ಮೇಕ್​ ಇನ್​ ಇಂಡಿಯಾ ಕಥೆಗೆ ಹೊಸ ಸೇರ್ಪಡೆ- ಚೆನ್ನೈನಲ್ಲಿ ತಲೆ ಎತ್ತಲಿದೆ "ಮೆಡಿಪಾರ್ಕ್​"

Related Stories