ಮೇಕ್​ ಇನ್​ ಇಂಡಿಯಾ ಕಥೆಗೆ ಹೊಸ ಸೇರ್ಪಡೆ- ಚೆನ್ನೈನಲ್ಲಿ ತಲೆ ಎತ್ತಲಿದೆ "ಮೆಡಿಪಾರ್ಕ್​"

ಟೀಮ್​ ವೈ.ಎಸ್​. ಕನ್ನಡ

3

ಭಾರತದಲ್ಲಿ ಹಸಿರು ಕ್ರಾಂತಿ ನಡೆದಿದೆ. ಅಭಿವೃದ್ಧಿಗೆ ಅಡಿಪಾಯ ಹಾಕಿ ಆಗಿದೆ. ರಾಜಕೀಯ ಕ್ರಾಂತಿಗಳು ಕೂಡ ನಡೆದಿವೆ. ಶೈಕ್ಷಣಿಕ ವಲಯದಲ್ಲೂ ಕ್ರಾಂತಿ ನಡೆದು ಬಿಟ್ಟಿದೆ. ಆದ್ರೆ  ಮೆಡಿ ಕ್ರಾಂತಿ ಬಗ್ಗೆ ಭಾರತ ಯೋಚನೆ ಕೂಡ ಮಾಡಿಲ್ಲ. ಆದ್ರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಭಾರತದಲ್ಲಿ ಮೆಡಿಕಲ್​ ಕ್ರಾಂತಿ ಮಾಡಲು ಮುಂದಾಗಿದೆ. ಮೇಕ್​ ಇನ್​ ಯೋಜನೆ ಅಡಿಯಲ್ಲಿ ಹೊಸ ಕ್ರಾಂತಿ ಮಾಡಲು ಪ್ಲಾನ್​ ಮಾಡಿಕೊಂಡಿದೆ.

ಮೊಟ್ಟ ಮೊದಲ ಬಾರಿಗೆ ದೇಶದಲ್ಲಿ ಮೆಡಿ ಪಾರ್ಕ್ ಸ್ಥಾಪನೆಗೆ ಕೇಂದ್ರ ಸರಕಾರ ಮುಂದಾಗಿದೆ. ಈ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಮಹಾನ್ ಕ್ರಾಂತಿಗೆ ಮುಂದಾಗಿದೆ. ಈ ಮೂಲಕ ಕಡಿಮೆ ಬೆಲೆಯಲ್ಲಿ ವಿಶ್ವಶ್ರೇಷ್ಠ ಗುಣಮಟ್ಟದ ವೈದ್ಯಕೀಯ ಉಪಕರಣಗಳು ತಯಾರಾಗಲಿದ್ದು, ಭಾರತ, ಮುಂದುವರೆದ ದೇಶಗಳಿಗೂ ಈ ವೈದ್ಯಕೀಯ ಉಪಕರಣಗಳನ್ನು ರಫ್ತು ಮಾಡುವಂತಹ ಮಟ್ಟಕ್ಕೆ ಬೆಳೆಯಲ್ಲಿದೆ.

ಇದನ್ನು ಓದಿ: ಬಡ ಮಹಿಳೆಯೊಳಗಿನ ಉದ್ಯಮಿಗಳನ್ನು ಪ್ರೋತ್ಸಾಹಿಸುವ “ಶಾಂತಾ”

ದೇಶದ ಮೊದಲ ವೈದ್ಯಕೀಯ ಉಪಕರಣಗಳ ತಯಾರಿಕಾ ಪಾರ್ಕ್ ಸ್ಥಾಪನೆಗಾಗಿ ಚೆನ್ನೈ ಸಮೀಪದ ಚೆಂಗಲ್ಪಟ್ಟು ಎಂಬಲ್ಲಿ 330.10 ಎಕರೆ ಭೂಮಿಯನ್ನು ಉಪಗುತ್ತಿಗೆ ಆಧಾರದಲ್ಲಿ ನೀಡಲು ಆರೋಗ್ಯ ಸಚಿವಾಲಯದ ಅಧೀನದಲ್ಲಿರುವ ಸಾರ್ವಜನಿಕ ಕ್ಷೇತ್ರದ ಉದ್ಯಮ ಎಚ್‌ಎಲ್‌ಎಲ್ ಲೈಫ್ ಕೇರ್​ಗೆ ಸರಕಾರವು ಹಸಿರು ನಿಶಾನೆಯನ್ನು ತೋರಿಸಿದೆ. ತನ್ಮೂಲಕ ದುಬಾರಿ ವೈದ್ಯಕೀಯ ಉಪಕರಣಗಳ ದೇಶಿಯ ತಯಾರಿಕೆಗೆ ಒತ್ತು ನೀಡಿದೆ. ‘ಮೇಕ್ ಇನ್ ಇಂಡಿಯಾ’ ಕಲ್ಪನೆಯಡಿ, ಈ ಯೋಜನೆಗೆ ಸರಕಾರ ಮುಂದಾಗಿದ್ದು. ವೈದ್ಯಕೀಯ ಉಪಕರಣಗಳು ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗಲಿವೆ.

ಎಚ್‌ಎಲ್‌ಎಲ್​ನ  ಶೇಕಡಾ 50ರಷ್ಟು ಪಾಲು ಬಂಡವಾಳದೊಂದಿಗೆ ಅಸ್ತಿತ್ವಕ್ಕೆ ಬರಲಿರುವ ಹೊಸ ಕಂಪನಿಯೊಂದರ ಮೂಲಕ ಮೆಡಿಕಲ್ ಪಾರ್ಕ್ ತಲೆಯೆತ್ತಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯು ಹೂಡಿಕೆದಾರರಿಗೆ ಭೂಮಿಯನ್ನು ಉಪಗುತ್ತಿಗೆ ಆಧಾರದಲ್ಲಿ ನೀಡುವ ಪ್ರಸ್ತಾವನೆಗೆ ಒಪ್ಪಿಗೆ ನೀಡಿದ್ದು, ಹಲವು ರೀತಿಯ ವೈದ್ಯಕೀಯ ಉಪಕರಣಗಳ ಬೆಲೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲಿದೆ. ಅವಶ್ಯಕ, ವಿದೇಶಗಳಿಂದ ಆಮದು ಮಾಡಿಕೊಳ್ಳುವ ದುಬಾರಿ ವೈದ್ಯಕೀಯ ಉಪಕರಣಗಳನ್ನು ಇಲ್ಲೇ ತಯಾರಿಸುವುದು ಭಾರತದ ಮುಖ್ಯ ಗುರಿಯಾಗಿದೆ.

ಮೆಡಿಪಾರ್ಕ್ ಯೋಜನೆಯು ದೇಶದ ವೈದ್ಯಕೀಯ ತಂತ್ರಜ್ಞಾನ ಕ್ಷೇತ್ರದಲ್ಲಿ ಮೊದಲ ತಯಾರಿಕಾ ಘಟಕಗಳ ಸಮೂಹವಾಗಲಿದೆ. ಭಾರತದ ಪ್ರತಿ ನಾಗರಿಕನು ಅತ್ಯಂತ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಸೌಲಭ್ಯಗಳ ಲಾಭವನ್ನು ಪಡೆಯಬಹುದಾಗಿದೆ. ಜೊತೆಗೆ ಹಲವು ಜನರಿಗೆ ಉದ್ಯೋಗ ಲಭ್ಯವಾಗಲಿದೆ. ವಿಶ್ವಶ್ರೇಷ್ಠ ವೈದ್ಯಕೀಯ ಸೌಲಭ್ಯ ಎಲ್ಲರಿಗೂ ಎಲ್ಲೇಡೆ ಸಿಗಲು ಈ ಮೆಡಿಪಾರ್ಕ್ ಯೋಜನೆ ಸಹಾಯವಾಗಲಿದೆ.

ಇದನ್ನು ಓದಿ:

1. ಆನ್​ಲೈನ್​ ಉದ್ಯಮದಲ್ಲಿ ಲಾಭಕ್ಕಾಗಿ ಪೈಪೋಟಿ- ಗ್ರಾಹಕರಿಗೆ "ಹಬ್ಬದೂಟ"ದ ಸಂಭ್ರಮ..!

2. ಮೈಸೂರಿನಿಂದ ಮುಂಬೈವರೆಗೆ- ಸ್ಯಾಂಡಲ್​ವುಡ್​ಗಿಂತಲೂ ಬಾಲಿವುಡ್​ನಲ್ಲಿ ಡಿಮ್ಯಾಂಡ್

3. ದಿಟ್ಟ ಧೀರೆ ಈ ಪುಟ್ಟ ದಿಯಾ..!

Related Stories