ಮಹಿಳಾ ಉದ್ಯಮಿಗಳಿಗಾಗಿ ``ಸ್ಟ್ಯಾಂಡ್‍ಅಪ್ ಇಂಡಿಯಾ''

ಟೀಮ್​ ವೈ.ಎಸ್​. ಕನ್ನಡ

0

ಭಾರತ ಮಹಿಳಾ ಶಕ್ತಿಯನ್ನು ಹೆಚ್ಚಿಸಲು ಅಣಿಯಾಗ್ತಾ ಇದೆ. ಇದಕ್ಕಾಗಿಯೇ ಕೇಂದ್ರ ಸರ್ಕಾರ ಸರ್ವಪ್ರಯತ್ನ ಮಾಡ್ತಿದೆ ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಸ್ಟ್ಯಾಂಡ್‍ಅಪ್ ಇಂಡಿಯಾ ಯೋಜನೆಗೆ ಚಾಲನೆ ನೀಡಿದ್ದಾರೆ. ಅಷ್ಟೇ ಅಲ್ಲ ಉತ್ತರ ಪ್ರದೇಶದ ನೊಯ್ಡಾ ನಗರದಲ್ಲಿ ಸ್ಟ್ಯಾಂಡ್‍ಅಪ್ ಇಂಡಿಯಾದ ವೆಬ್ ಪೋರ್ಟಲ್ ಅನ್ನು ಕೂಡ ಉದ್ಘಾಟಿಸಿದ್ದಾರೆ. ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸುವುದು, ಇನ್ನಷ್ಟು ಮಹಿಳೆಯರು ಉದ್ಯಮ ಕ್ಷೇತ್ರದತ್ತ ಮುಖಮಾಡುವಂತೆ ಮಾಡುವುದು ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯ ಪ್ರಮುಖ ಉದ್ದೇಶ. ಅದರಲ್ಲೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರನ್ನು ಪ್ರೋತ್ಸಾಹಿಸಲು ಈ ಯೋಜನೆಯನ್ನು ಜಾರಿ ಮಾಡಲಾಗಿದೆ. ``ಈ ಯೋಜನೆ ಎಸ್‍ಸಿಎಸ್‍ಟಿ ಮಹಿಳೆಯರಲ್ಲಿ ಉದ್ಯಮಶೀಲತೆಯನ್ನು ಹೆಚ್ಚಿಸಲಿದೆ'' ಅಂತಾ ಪ್ರಧಾನಿ ನರೇಂದ್ರ ಮೋದಿ ಸ್ಟ್ಯಾಂಡ್ ಅಪ್ ಇಂಡಿಯಾ ಉದ್ಘಾಟನೆಯ ಬಳಿಕ ಟ್ವೀಟ್ ಮಾಡಿದ್ದಾರೆ.

ಔದ್ಯಮಿಕ ಚಟುವಟಿಕೆಗಳಿಗಾಗಿ ದಲಿತರು ಮತ್ತು ಬುಡಕಟ್ಟು ಜನಾಂಗದವರಿಗೆ ಸಾಲ ನೀಡುವ ಉದ್ದೇಶದಿಂದಲೂ ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆ ಜಾರಿಗೆ ತಂದಿರುವುದಾಗಿ ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ. ಇದರಿಂಗಾಗಿ ಕೆಲಸ ಅರಸುವ ಜನರು ಕೆಲಸ ಕೊಡುವ ವ್ಯಕ್ತಿಗಳಾಗಿ ಬದಲಾಗಲಿದ್ದಾರೆ ಅನ್ನೋದು ಸರ್ಕಾರದ ನಿರೀಕ್ಷೆ. ಈ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಹಾಗೂ ಕೃಷಿ ವಲಯದ ಹೊರಗೆ ಹೊಸ ಉದ್ಯಮ ಆರಂಬಿಸಲು ಬಯಸುವವರಿಗೆ 10 ಲಕ್ಷ ರೂಪಾಯಿಯಿಂದ 1 ಕೋಟಿ ರೂಪಾಯಿ ಸಾಲ ಸೌಲಭ್ಯ ದೊರೆಯಲಿದೆ.

ಇದನ್ನು ಓದಿ: ಯೋಧರ ರಕ್ಷಣೆಗೆ ಸ್ಪೇಸ್ ಸ್ಯೂಟ್ ..!

ಎಲ್ಲಕ್ಕಿಂತ ಪ್ರಮುಖವಾಗಿ ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆ ಔದ್ಯಮಶೀಲತೆಯನ್ನು ಪ್ರೋತ್ಸಾಹಿಸುತ್ತದೆ. ಶೈಕ್ಷಣಿಕ ಅರ್ಹತೆಗಳನ್ನು ವ್ಯಾಖ್ಯಾನಿಸದೆ ಸೃಜನಶೀಲತೆಯನ್ನು ಸಕ್ರಿಯಗೊಳಿಸುತ್ತದೆ. ಉತ್ಪಾದಕ ಕೆಲಸಕ್ಕೆ ಇದು ಕಾರಣವಾಗಲಿದೆ. ಭೂರಹಿತ ದಲಿತರು ಅನಿವಾರ್ಯವಾಗಿ ಮನೆಗೆಲಸ ಮಾಡಿಕೊಂಡಿರಬೇಕಾದ ಅನಿವಾರ್ಯತೆಯಿದೆ, ಕೃಷಿ ಮಾಡಲು ಅಥವಾ ಶಿಕ್ಷಣದ ಮೂಲಕ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳಲು ಹೋರಾಟ ನಡೆಸಬೇಕಾಗಿದೆ. ಶತಮಾನಗಳಿಂದ ದಲಿತರನ್ನು ಕಾಡುತ್ತಿರುವ ಅಸ್ಪ್ರಶ್ಯರು ಎಂಬ ಕಳಂಕ ತೊಡೆದು ಹಾಕಲು ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆ ಅವಕಾಶದ ಬಾಗಿಲು ತೆರೆದಿದೆ.

ದೇಶದ ಆರ್ಥಿಕತೆಯ ಮುಖ್ಯವಾಹಿನಿಯ ಭಾಗವಾಗಲು ದಲಿತರಿಗೆ ಅವಕಾಶ ಸಿಗಲಿದೆ. ಭಾರತದ ಆರ್ಥಿಕತೆಯ ಮೇಲೆ ಇನ್ನು ಮುಂದೆ ಸರ್ಕಾರ ಹಿಡಿತ ಸಾಧಿಸುವುದು ಸಾಧ್ಯವಿಲ್ಲ, ಬದಲಾಗಿ ಹಿಂದುಳಿದ ವರ್ಗದವರಿಗೂ ಸರ್ಕಾರ ಸಾಮಾಜಿಕ ವ್ಯವಸ್ಥೆಯನ್ನು ಒದಗಿಸಲೇಬೇಕಿದೆ. ಇದಕ್ಕಾಗಿಯೇ ದಲಿತ್ ಚೇಂಬರ್ ಆಫ್ ಇಂಡಿಯಾ ಹಾಗೂ ಇಂಡಸ್ಟ್ರಿ ಆಫ್ ಇಂಡಿಯಾ ಕಾರ್ಯನಿರ್ವಹಿಸುತ್ತಿವೆ. ಇವುಗಳ ಸಂಸ್ಥೆಗಳ ಸದಸ್ಯರ ಸಂಖ್ಯೆ ದುಪ್ಪಟ್ಟಾಗಲೂಬಹುದು, ಇದಕ್ಕಾಗಿ ಸರ್ಕಾರಕ್ಕೆ ಧನ್ಯವಾದ ಹೇಳಬೇಕಿದೆ.

ಯೋಜನೆ ಬಿಡುಗಡೆ ಸಮಾರಂಭದ ಭಾಗವಾಗಿದ್ದ ದಿ ಹಿಂದು ಪತ್ರಿಕೆಯ ಪ್ರಕಾರ `ಮುದ್ರ ಯೋಜನಾ' ಸ್ಕೀಮ್ ಅಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ 5000 ಇ-ರಿಕ್ಷಾಗಳನ್ನು ವಿತರಣೆ ಮಾಡಿದ್ದಾರೆ. ಸೈಕಲ್ ರಿಕ್ಷಾ ಮಾಲೀಕರು, ಮಹಿಳೆಯರು ಹಾಗೂ ಮಂಗಳಮುಖಿಯರಿಗೆ ಇ-ರಿಕ್ಷಾಗಳನ್ನು ನೀಡಲಾಗಿದೆ. ದೆಹಲಿ, ನೊಯ್ಡಾ, ಗಾಜಿಯಾಬಾದ್, ಗುರ್ಗಾಂವ್, ಮತ್ತು ಫರೀದಾಬಾದ್ ಸೇರಿದಂತೆ ದೆಹಲಿ-ಎನ್‍ಸಿಆರ್ ವಲಯದಲ್ಲಿ ಇ-ರಿಕ್ಷಾಗಳು ಚಲಾವಣೆಯಲ್ಲಿರಲಿವೆ. ಓಲಾ ಮೊಬೈಲ್ ಆ್ಯಪ್ ಮೂಲಕ ಗ್ರಾಹಕರು ಇ-ರಿಕ್ಷಾಗಳನ್ನು ಬುಕ್ ಮಾಡಬಹುದು. ಫ್ರೀಚಾರ್ಜ್ ವೇದಿಕೆ ಮೂಲಕ ಆನ್‍ಲೈನ್ ಪೇಮೆಂಟ್ ಸೌಲಭ್ಯ ಕೂಡ ಇದೆ.  

ಇದನ್ನು ಓದಿ

1. ಸದ್ದಿಲ್ಲದೆ ಸುದ್ದಿ ಮಾಡುತ್ತಿದೆ "ಆಸ್ಕ್ ಮಿ ಬಜಾರ್''

2. ಶುದ್ಧ ನೀರು ನೀಡುವ `ಅಮೃತ್' ಎಂಬ ಸಂಜೀವಿನಿ

3. ಬ್ಯಾಲೆ ನೃತ್ಯ ಪ್ರಪಂಚದಲ್ಲಿ ಸಾಹಸೀ ‘ ಯಾನ..!’

Related Stories