ಸಾಫ್ಟ್​ವೇರ್ ಬೋರಾಯ್ತು, ಫೋಟೋಗ್ರಫಿ ಇಷ್ಟವಾಯ್ತು

ಆರಾಭಿ ಭಟ್ಟಾಚಾರ್ಯ

0

ಸಾಫ್ಟ್​ವೇರ್ ಹಾಗೂ ಸಿನಿಮಾರಂಗಕ್ಕೂ ಒಂಥರಾ ನಂಟು. ಅಲ್ಲಿ ಇದ್ದವರು ಇಲ್ಲಿಗೆ,ಇಲ್ಲಿದ್ದವರು ಅಲ್ಲಿಗೆ ಹೋಗಿ ಬರೋದು ಕಾಮನ್. ಇನ್ನೂ ಟೆಕ್ಕಿಗಳಿಗೆ ಇರೋ ಸಿನಿಮಾ ಪ್ರೀತಿ ಅಂತಿಂತದಲ್ಲ. ಸಾಮಾನ್ಯ ಜನಕ್ಕಿಂತ ಒಂದು ಕೈ ಹೆಚ್ಚಾಗಿ ಸಿನಿಮಾವನ್ನ ಪ್ರೀತಿ ಮಾಡ್ತಾರೆ. ಇಂತಹ ಸಿನಿಮಾ ಪ್ರೇಮಿಗಳು ಚಿತ್ರರಂಗದಲ್ಲಿ ಸಾಕಷ್ಟು ಜನರು ಸಿಕ್ತಾರೆ. ಚಿತ್ರರಂಗಕ್ಕೆ ಬಂದ ಸಣ್ಣ ಸಮಯದಲ್ಲೇ ತನ್ನ ಕೆಲಸದ ಮೂಲಕ ಎಲ್ಲರ ಮನಸ್ಸಿನಲ್ಲೂ ಯಾರೀತ ಅನ್ನೋ ಪ್ರಶ್ನೆ ಮೂಡುವಂತೆ ಮಾಡಿರೋ ವ್ಯಕ್ತಿ ಚಂದನ್ ಗೌಡ.

ಅಂದು ಇಂಜಿನಿಯರ್ ಇಂದು ಫೋಟೋಗ್ರಫರ್

ಚಂದನ್​ಗೌಡ ಐಬಿಎಂನಲ್ಲಿ ಸಾಫ್ಟ್​​ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದವರು. ಇಂದು ಚಂದನವನದಲ್ಲಿ ಯಂಗ್ ಅಂಡ್ ಮೋಸ್ಟ್ ಕ್ರಿಯೇಟಿವ್ ಫೊಟೋಗ್ರಫರ್. ಫೋಟೋಗ್ರಫಿ ಮೇಲಿದ್ದ ಫ್ಯಾಷನ್ ಇಂದು ಚಂದನ್ ಗೌಡ ಅವ್ರಿಗೆ ಸಾಫ್ಟ್​ವೇರ್ ಕೆಲಸಕ್ಕೆ ವಿದಾಯ ಹೇಳುವಂತೆ ಮಾಡಿದೆ. ಐದು ವರ್ಷದಿಂದ ಸಾಫ್ಟ್​ವೇರ್ ಎಂಜಿನಿಯರ್ ಆಗಿ ಕೆಲಸ ಮಾಡಿಕೊಂಡು ಅದರ ಮಧ್ಯೆ ಫ್ರೀ ಟೈಂ ನಲ್ಲಿ ಚಂದನ್ ತನ್ನ ಕ್ರಿಯೇಟಿವಿಟಿಯನ್ನ ಫೋಟೋಗ್ರಫಿಯಲ್ಲಿ ಉಪಯೋಗ ಮಾಡಿಕೊಳ್ತಿದ್ರು. ಎಲ್ಲರಂತೆ ಸಿನಿಮಾ ಮೇಲಿನ ಪ್ರೀತಿ ಹಾಗೂ ಫೋಟೋಗ್ರಫಿ ಮೇಲಿನ ಒಲವು ಚಂದನ್ ಇಂದು ಸಿನಿಮಾಗಳಲ್ಲಿ ಫೋಟೋಗ್ರಫರ್ ಆಗಿ ಕೆಲಸ ಮಾಡುವಂತೆ ಮಾಡಿದೆ.

ಇದನ್ನು ಓದಿ

ಕನ್ನಡ ಪುಸ್ತಕಗಳಿಗೊಂದು ಶಾಪಿಂಗ್ ಸೈಟ್

ಒಂದು ಕ್ಲಿಕ್​ನಿಂದ ಸಿನಿಮಾ ಪ್ರಯಾಣ ಶುರು

ಕೆಲಸದ ಮಧ್ಯೆಯಲ್ಲಿ ಫ್ರೀ ಇದ್ದಾಗ ಈವೆಂಟ್​​ಗಳಲ್ಲಿ ಫೋಟೋಗ್ರಫಿ ಮಾಡುತ್ತಿದ್ದ ಚಂದನ್ ಗೆ ಚಿತ್ರರಂಗಕ್ಕೆ ಬರುವಂತೆ ಮಾಡಿದ್ದು ಅವರೇ ಕ್ಲಿಕ್ ಮಾಡಿದ್ದ ಒಂದು ಫೋಟೋ. ಕಳೆದ ವರ್ಷ ತೆರೆಗೆ ಬಂದ ವಿನಯ್ ರಾಜ್​ಕುಮಾರ್ ಅಭಿನಯದ ಸಿದ್ದಾರ್ಥ ಸಿನಿಮಾದ ಆಡಿಯೋ ರಿಲೀಸ್​​ನಲ್ಲಿ ತೆಗೆದ ಫೋಟೋ ನೋಡಿ ನಟ ,ನಿರ್ಮಾಪಕ ರಾಘವೇಂದ್ರ ರಾಜ್​ಕು ಮಾರ್ ಹಾಗೂ ನಿರ್ದೇಶಕ ಪ್ರಕಾಶ್ ಚಂದನ್ ಸಿನಿಮಾದಲ್ಲಿ ಕೆಲಸ ಮಾಡುವಂತೆ ಆಫರ್ ನೀಡಿದ್ರು. ಅದನ್ನ ಸರಿಯಾಗಿ ಉಪಯೋಗಿಸಿಕೊಂಡ ಚಂದನ್ ಗೌಡ ಇಂದು ಸ್ಯಾಂಡಲ್​ವುಡ್​​ನಲ್ಲಿ ಎಲ್ಲಾ ನಟ-ನಟಿಯರಿಗೂ ಚಿರಪರಿಚಿತ ಫೋಟೋಗ್ರಫರ್. ಸಿದ್ದಾರ್ಥ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಎಂಜಿನಿಯರಿಂಗ್ ಕೆಲಸ ಹಾಗೂ ಸಿನಿಮಾ ಫೋಟೋಗ್ರಫಿ ಎರಡನ್ನೂ ಮಾಡಿಕೊಂಡಿದ್ದ ಚಂದನ್ ಆರು ತಿಂಗಳ ಹಿಂದೆ ಸಾಫ್ಟ್​ವೇರ್ ಕೆಲಸಕ್ಕೆ ವಿದಾಯವನ್ನ ಹೇಳಬೇಕು ಅಂತ ನಿರ್ಧಾರ ಮಾಡಿದ್ರು.

ಚಂದನವನದಲ್ಲಿ ಚಂದನ್ ಚಮತ್ಕಾರ

ಮದುವೆಯಲ್ಲಿ ಕ್ಯಾಂಡಿಡ್ ಫೋಟೋಗ್ರಫಿ ,ಸ್ಟಾರ್ಸ್​ಗಳ ಸ್ಪೆಷಲ್ ಈವೆಂಟ್ ಹಾಗೂ ಮ್ಯಾರೆಜ್ ಕವರೆಜ್​ನಲ್ಲಿ ಚಂದನ್ ಕ್ರಿಯೇಟಿವಿಟಿ ಇದ್ದೇ ಇರುತ್ತೆ. ಚಂದನ್ ಮತ್ತಷ್ಟು ಫೇಮಸ್ ಆಗಿದ್ದು ಕಳೆದ ವರ್ಷದಲ್ಲಿ ನಡೆದ ಚಿತ್ರರಂಗದ ದೊಡ್ಡಮನೆ ಅಂತಾನೇ ಕರೆಸಿಕೊಳ್ಳೋ ಡಾ.ರಾಜ್​ಕುಮಾರ್ ಅವ್ರ ಮೊಮ್ಮಗಳ ಮದುವೆಯಲ್ಲಿ. ಡಾ. ಶಿವರಾಜ್​ಕುಮಾರ್ ಮಗಳ ಮದುವೆಯಲ್ಲಿ ಚಂದನ್ ಗೌಡ ತನ್ನ ಫೋಟೋಗ್ರಫಿ ಕೈಚಳಕವನ್ನ ತೋರಿದ್ರು. ಇದಾದ ನಂತ್ರ ಫೋಟೋಗ್ರಫಿಯನ್ನೇ ತನ್ನ ಫುಲ್ ಟೈಂ ಕೆಲಸವನ್ನಾಗಿ ಮಾಡಿಕೊಂಡ ಚಂದನ್ ಮತ್ತೆ ಚಿತ್ರರಂಗದಲ್ಲಿ ಮನೆ ಮಾತಾಗಿದ್ದು ವಿನಯ್ ರಾಜ್​ಕುಮಾರ್ ಅಭಿನಯದ ರನ್ ಆಂಟನಿ ಸಿನಿಮಾದಿಂದ.

ಪೋಸ್ಟರ್ ಶೂಟ್​​ನಲ್ಲಿ ಚಂದನ್ ಕಮಾಲ್

ಎಂಜಿನಿಯರಿಂಗ್ ಕೆಲಸಕ್ಕೆ ವಿದಾಯ ಹೇಳಿದ ಚಂದನ್ ಗೌಡ ಫುಲ್ ಟೈಮ್​ ಫೊಟೋಗ್ರಫಿಯನ್ನ ಕೆಲಸವನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಅದಕ್ಕೆ ತಕ್ಕಂತೆ ಒಳ್ಳೆ ಅವಕಾಶ ಸಿಕ್ಕಿದ್ದು ರನ್ ಆಂಟನಿ ಸಿನಿಮಾದ ಮೂಲಕ. ಸ್ಯಾಂಡಲ್​ವುಡ್​ಗೆ ಡಿಫರೆಂಟ್ ಕಾನ್ಸೆಪ್ಟ್ ಅನ್ನಿಸುವ ಹಾಗೆ ರನ್ ಆಂಟನಿ ಚಿತ್ರದ ಫೋಟೋ ಶೂಟ್ ಮಾಡಲಾಯ್ತು. ಸಿನಿಮಾದ ನಿರ್ದೇಶಕ ರಘುಶಾಸ್ತ್ರಿ ಕ್ರಿಯೇಟಿವ್ ಯೋಚನೆಗಳಿಗೆ ಕ್ಯಾಮೆರಾ ಮೂಲಕ ರೂಪವನ್ನ ಕೊಟ್ಟಿದ್ದು ಚಂದನ್. ನಿರ್ದೇಶಕರಿಗೆ ಬೇಕಾಗುವಂತೆ ಇಷ್ಟವಾಗುವಂತೆ ಚಂದನ್ ತಮ್ಮ ಕೆಲಸವನ್ನ ಮಾಡಿಕೊಟ್ಟಿದ್ರು. ಇಂದು ರನ್ ಆಂಟನಿ ಪೋಸ್ಟರ್​ಗಳು ಎಷ್ಟರ ಮಟ್ಟಿಗೆ ಫೇಮಸ್ ಆಗಿವೆ ಅಂದ್ರೆ ಸೋಷಿಯಲ್ ಮಿಡಿಯಾದಲ್ಲಿ ಹೊಸ ಅದ್ಯಾಯವನ್ನ ಕ್ರಿಯೇಟ್ ಮಾಡಿದೆ. ಆ ಪೋಸ್ಟರ್​ನಲ್ಲಿ ನಾಯಕನನ್ನ ಹೊಸ ಲುಕ್ ಅನ್ನ ಸೆರೆ ಹಿಡಿದಿದ್ದು ಇದೇ ಚಂದನ್ ಗೌಡ. ಸಿನಿಮಾ ರಂಗಕ್ಕೆ ಬರೋ ಮುಂಚೆ ಚಂದನ್ ಕೆಲಸವನ್ನ ಮೆಚ್ಚಿ ಇಸ್ಕಾನ್​ನಿಂದ ಕ್ಯಾಪ್ಚರ್ ಕೃಷ್ಣ ಅನ್ನೋ ಅವಾರ್ಡ್ ಕೂಡ ಪಡೆದಿದ್ದರು. ಇನ್ನು ಇತ್ತೀಚಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಗೋಲ್ಡನ್ ಗರ್ಲ್ ರಮ್ಯ ಜೊತೆಗೆ ಅಭಿನಯಿಸಿರೋ ಸರ್ಕಾರಿ ಜಾಹೀರಾತುವಿನಲ್ಲೂ ಚಂದನ್ ತಮ್ಮ ಕಿಯೇಟಿವಿಟಿ ಮೆರೆದಿದ್ರು. ಸದ್ಯ ಸ್ಟಾರ್ ಫೋಟೋಗ್ರಫರ್ ಆಗಿರೋ ಚಂದನ್ ಮುಂದಿನ ದಿನಗಳಲ್ಲಿ ಕ್ಯಾಮೆರಾ ವರ್ಕ್ ಕಲಿತು ಚಿತ್ರರಂಗದಲ್ಲಿ ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡ್ಬೇಕು ಅನ್ನೋ ಆಸೆಯನ್ನಿಟ್ಟುಕೊಂಡಿದ್ದಾರೆ. ಕಡಿಮೆ ಸಮಯದಲ್ಲಿ ತನ್ನ ಕೆಲಸದ ಮೂಲಕವೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿರೋ ಚಂದನ್ ಗೌಡ ಆದಷ್ಟು ಸಿನಿಮಾಗಳಲ್ಲಿ ತಮ್ಮ ಕೆಲಸದ ಮೂಲಕ ಗುರುತಿಸಿಕೊಳ್ಳಲಿ.

ಇದನ್ನು ಓದಿ

ಮಗಳ ಶಾಲಾ ಚಟುವಟಿಕೆಯಿಂದ ವ್ಯಕ್ತವಾಯಿತು ತಾಯಿಯ ಸೃಜನಶೀಲ ಕಲಾ ಕುಸುರಿ ಕೆಲಸ-ಬೆಂಗಳೂರಿನ ಗೃಹಣಿ ಮೃದುಲಾ ಹೆಗಡೆಯ ಕಲಾಸಾಧನೆಯ ಕಥೆಯಿದು

ಪ್ರವಾಸಪ್ರಿಯರಿಗೆ ಪ್ರಿಯವಾದ ವೆಬ್‍ಸೈಟ್ ಇಕ್ಸಿಗೊ (ixigo)

ಟೇಸ್ಟಿ..ಟೇಸ್ಟಿ.. ರುಚಿ ರುಚಿ... ನಾಗಪುರದ ಆರೇಂಜ್​​ಗೆ ಸಿಲಿಕಾನ್​ ಸಿಟಿಯಲ್ಲಿ ಡಿಮ್ಯಾಂಡ್​​​..!


Related Stories