ನವರಸ ಸಾಧನಗಳ ಪರಿಣಿತ- ಹಿಂದಿ ಚಿತ್ರರಂಗದಲ್ಲಿ ಮಿಂಚುತ್ತಿರುವ ಕನ್ನಡಿಗ

ಟೀಮ್​ ವೈ.ಎಸ್​. ಕನ್ನಡ

ನವರಸ ಸಾಧನಗಳ ಪರಿಣಿತ- ಹಿಂದಿ ಚಿತ್ರರಂಗದಲ್ಲಿ ಮಿಂಚುತ್ತಿರುವ ಕನ್ನಡಿಗ

Tuesday March 28, 2017,

3 min Read

ಪ್ರತಿಭೆ ಯಾರಲ್ಲಿ, ಹೇಗಿರುತ್ತೆ ಅನ್ನುವುದನ್ನು ಹೇಳುವುದು ಕಷ್ಟ. ಒಬ್ಬರು ಆಟದಲ್ಲಿ ಮಿಂಚಿದ್ರೆ ಮತ್ತೊಬ್ಬರು ಮಾತಿನಲ್ಲಿ ಚಾಣಾಕ್ಷರಾಗಿರುತ್ತಾರೆ. ಇನ್ನೂ ಕೆಲವರು ನಟನೆಯಲ್ಲಿ ಟಾಪ್​ ಕ್ಲಾಸ್​ ಆಗಿರುತ್ತಾರೆ. ಆದ್ರೆ ಆಟದಲ್ಲೂ, ಮಾತಿನಲ್ಲೂ ಮತ್ತು ನಟನೆಯಲ್ಲೂ ಮಿಂಚಬಲ್ಲ ಪ್ರತಿಭೆ ನಮ್ಮ ಕರ್ನಾಟದಲ್ಲಿದೆ. ಅವರೇ ಭಾಸ್ಕರ್​. ಭಾಸ್ಕರ್​ ಬಗ್ಗೆ ಹೆಚ್ಚು ಯಾರಿಗೂ ಗೊತ್ತಿಲ್ಲ. ಆದ್ರೆ ಸಿಸಿಎಲ್​ ಭಾಸ್ಕರ್​ ಅಥವಾ "ಬಾಸಿ" ಅಂದ್ರೆ ಹೆಚ್ಚಿನವರಿಗೆ ನೆನಪಾಗುತ್ತದೆ. ಕೆಲವೊಂದು ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಭಾಸ್ಕರ್​, ಈಗ ಬಾಲಿವುಡ್​ನಲ್ಲಿ ಹೆಜ್ಜೆ ಇಡುತ್ತಿದ್ದಾರೆ. 

image


 ಬಾಲಿವುಡ್‍ನಲ್ಲಿ ಕನ್ನಡಿಗರು ಮಿಂಚುವುದು ಅಂದ್ರೆ ತಮಾಷೆ ಮಾತಲ್ಲ. ಅಷ್ಟೇ ಅಲ್ಲ ಅವಕಾಶ ಗಳಿಸಿಕೊಳ್ಳುವು ಕನ್ನಡದ ನಟರ ಪಾಲಿಗೆ ಸಿಕ್ಕಾಪಟ್ಟೆ ದೊಡ್ಡ ಚಾಲೆಂಜ್​. ಆ ಸಾಲಿಗೆ ಹೊಸ ಸೇರ್ಪಡೆ ಭಾಸ್ಕರ್. ಸಿಸಿಎಲ್ ಕ್ರಿಕೆಟ್‍ನಲ್ಲಿ ಕರ್ನಾಟಕ ಬುಲ್ಡೋಜರ್ ತಂಡಕ್ಕೆ ಹಲವು ಬಾರಿ ಗೆಲುವು ತಂದುಕೊಟ್ಟು ಸಂಭ್ರಮಿಸುವಂತೆ ಮಾಡಿದ ಭಾಸ್ಕರ್ ಮೂಲತಃ ರಂಗಭೂಮಿ ನಟರು. ಹಾಗಾಗಿ ಎಂತಹ ಪಾತ್ರ ಸಿಕ್ಕರೂ ನಿರ್ವಹಿಸುವ ಶಕ್ತಿ ಅವರಲ್ಲಿದೆ. ರಂಗಭೂಮಿಯಲ್ಲಿ ಪರಿಪಕ್ವವಾಗಿ ತಯಾರಾಗಿವ ಇವರು ಎಲ್ಲಾ ಅನುಭವಗಳನ್ನು ಒಟ್ಟಾಗಿಸಿ ಸಿನಿಮಾ ರಂಗದಲ್ಲಿ ನೆಲೆಯೂರುವ ಪ್ರಯತ್ನ ಮಾಡುತ್ತಿದ್ದಾರೆ.

ಭಾಸ್ಕರ್​ ಸಿನಿಮಾ ರಂಗದಲ್ಲಿ ಮಾತ್ರವಲ್ಲ ಕ್ರಿಕೆಟ್‍ನಲ್ಲೂ ಆಸಕ್ತಿ ಹೊಂದಿದ್ದಾರೆ. ಅಂದಹಾಗೇ ಭಾಸ್ಕರ್​ ಒಳಗೊಬ್ಬ ಉತ್ತಮ ಕ್ರಿಕೆಟರ್​ ಅಡಗಿದ್ದಾನೆ. ಇಂಗ್ಲೆಂಡ್ ಕೌಂಟಿಯಲ್ಲಿ ಕ್ರಿಕೆಟ್ ಆಡಿದ ಅನುಭವವೂ ಭಾಸ್ಕರ್​ಗೆ ಇದೆ. ಇವತ್ತಿಗೂ ತಾನು ಕೆಲಸ ಮಾಡುತ್ತಿರುವ ಬ್ಯಾಂಕ್​ ಪರ ಕ್ರಿಕೆಟ್​ ಆಡಲು ನಿಂತರೆ ಭಾಸ್ಕರ್​​ ಉತ್ತಮ ಆಲ್​ರೌಂಡರ್​. ಕೆಲವರ್ಷಗಳ ಹಿಂದೆ ಸೆಲೆಬ್ರಟಿ ಕ್ರಿಕೆಟ್ ಲೀಗ್‍ನಲ್ಲಿ ಆಡಿದ್ದ ಭಾಸ್ಕರ್​​, ಫೈನಲ್ ಪಂದ್ಯದ ಕೊನೆಯ ಸಿಕ್ಸರ್​ ಸಿಡಿಸಿ ತಂಡಕ್ಕೆ ಜಯ ತಂದುಕೊಟ್ಟಿದ್ದನ್ನು ಮರೆಯಲು ಸಾಧ್ಯವಿಲ್ಲ.

ಇದನ್ನು ಓದಿ: 115 ವರ್ಷಗಳ ಸಂಪ್ರದಾಯ ಹೊಂದಿರುವ "ಮದರ್ಸ್ ರೆಸೆಪಿ"ಯ ಕಥೆ ಕೇಳಿ

ಬಾಲಿವುಡ್ ನಂಟು ಹೇಗೆ..?

ಭಾಸ್ಕರ್ ಒಂದು ಉರ್ದು ನಾಟಕದಲ್ಲಿ ನಟಿಸುವ ಸಲುವಾಗಿ ಮುಂಬೈಗೆ ಹೋಗಿದ್ದರು. ಆ ಉರ್ದು ನಾಟಕದಲ್ಲಿ ಇವರ ಅಭಿನಯ ಕಂಡ ನಿರ್ದೇಶಕ ನೀರಜ್‍ ಪಾಂಡೆಯವರ ಸಹಾಯಕರೊಬ್ಬರು ಇವರನ್ನು ಆಡಿಷನ್‍ಗೆ ಕರೆದುಕೊಂಡು ಹೋದರು ಅಲ್ಲಿಗೆ ಹೋದ ಮೇಲೆ ಭಾಸ್ಕರ್ ಅವರ ಅಭಿನಯ ಕಂಡು ಖುಷಿ ಪಟ್ಟರು. ಅಷ್ಟೇ ಅಲ್ಲ ನೀರಜ್​ಪಾಂಡೆ ನಿರ್ದೇಶಿಸುತ್ತಿದ್ದ "ಎಂ.ಎಸ್. ಧೋನಿ ಅನ್​ಟೋಲ್ಡ್​​ ಸ್ಟೋರಿ" ಸಿನಿಮಾಗೆ ಕಾಸ್ಟಿಂಗ್ ಮಾಡಿದರು. ಅಲ್ಲಿಂದ ಅವರ ಬಾಲಿವುಡ್ ಜರ್ನಿ ಆರಂಭವಾಯಿತು. ಈಗ ಬಿಡುಗಡೆಗೆ ಸಿದ್ಧವಾಗಿರುವ "ನಾಮ್ ಶಭಾನಾ" ಸಿನಿಮಾದಲ್ಲಿ ಒಂದು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ "ನಾಮ್ ಶಭಾನಾ" ಸಿನಿಮಾದಲ್ಲಿ ಅಕ್ಷಯ್‍ಕುಮಾರ್ ಮತ್ತು ತಾಪ್ಸಿ ಪನ್ನು ಅಭಿನಯಿಸಿದ್ದಾರೆ.

image


ಆಸ್ಕರ್ ಅಂಗಳಕ್ಕೆ ಕಾಲಿಟ್ಟ ಮೊದಲ ಕನ್ನಡ ನಟ

2016ರ ಆಸ್ಕರ್ ಪ್ರಶಸ್ತಿಗೆ ಭಾರತೀಯ ಚಿತ್ರಗಳ ಪೈಕಿ "ಎಂ.ಎಸ್.ಧೋನಿ" ಆಯ್ಕೆಯಾಗಿತ್ತು. ಆ ಸಿನಿಮಾದಲ್ಲಿ ಭಾಸ್ಕರ್ ನಟಿಸಿದ್ದ ಕಾರಣಕ್ಕೆ ಆಸ್ಕರ್ ಅಂಗಳಕ್ಕೆ ಕಾಲಿಟ್ಟ ಪ್ರಪ್ರಥಮ ಕನ್ನಡಿಗ ಎಂಬ ಹೆಮ್ಮೆಗೆ ಭಾಸ್ಕರ್ ಪಾತ್ರರಾದರು. ತಾಪ್ಸಿ ಪನ್ನು ಮತ್ತು ಅಕ್ಷಯ್ ಕುಮಾರ್ ಮುಖ್ಯ ಭೂಮಿಕೆಯಲ್ಲಿರುವ ಬಹುನಿರೀಕ್ಷಿತ `ನಾಮ್ ಶಭಾನಾ' ಸಿನಿಮಾದಲ್ಲಿ ಭಾಸ್ಕರ್ ನಟನೆಯ ಬಹುತೇಕ ದೃಶ್ಯಗಳು ವಿದೇಶದಲ್ಲಿ ಚಿತ್ರೀಕರಣವಾಗಿವೆ. ಅದೊಂದು ಮಹತ್ವದ ಪಾತ್ರವಾದ ಕಾರಣ, ಎಲ್ಲಿಯೂ ರಿವಿಲ್ ಮಾಡಿಲ್ಲವಂತೆ. ಇಡೀ ಪಾತ್ರವನ್ನು ನಿರ್ದೇಶಕರು ಹೊಸದಾಗಿ ಕಟ್ಟಿಕೊಟ್ಟಿದ್ದರಿಂದ, ಬಾಲಿವುಡ್ ಪ್ರೇಕ್ಷಕರು ತಮ್ಮನ್ನು ಮೆಚ್ಚಿಕೊಳ್ಳುತ್ತಾರೆಂಬ ವಿಶ್ವಾಸ ಭಾಸ್ಕರ್ ಅವರದ್ದು.

" ನಾನು ಹಣ ಮಾಡಬೇಕು ಎಂದು ಚಿತ್ರರಂಗಕ್ಕೆ ಬಂದಿಲ್ಲ. ನನ್ನಲ್ಲಿರುವ ಪ್ರತಿಭೆಯನ್ನು ಹೊರ ಜಗತ್ತಿಗೆ ತಿಳಿಸಲು ನಾನು ಸಿನಮಾವನ್ನು ಮಾಧ್ಯಮವನ್ನಾಗಿಸಿಕೊಂಡಿದ್ದೇನೆ. ಒಬ್ಬ ಒಳ್ಳೆ ಕಲಾವಿದನಾಗಲು ಏನೇನು ಬೇಕೋ ಎಲ್ಲವನ್ನೂ ನಾನು ಕಷ್ಟಪಟ್ಟು ಮಾಡುತ್ತೇನೆ. "ನಾಮ್‍ಶಭಾನ" ಸಿನಿಮಾದ ನಂತರ ಇನ್ನೊಂದು ಹಿಂದಿ ಸಿನಿಮಾದಲ್ಲಿ ನಟಿಸುತ್ತಿಸುತ್ತಿದ್ದೇನೆ. ಉತ್ತಮ ಪಾತ್ರಗಳ ಆಯ್ಕೆ ಕಡೆಗೆ ಹೆಚ್ಚು ಗಮನ ಕೊಡುತ್ತೇನೆ."
- ಭಾಸ್ಕರ್, ನಟ

ಕನ್ನಡದಲ್ಲಿಯೂ ಮಿಂಚು

ಅಂದಹಾಗೇ, ಭಾಸ್ಕರ್​ ಕನ್ನಡಲ್ಲೂ ಕೆಲವೊಂದು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದಲ್ಲಿ ನಿಧಾನವಾಗಿ ಅವಕಾಶಗಳು ಹೆಚ್ಚುತ್ತಿವೆ. ಪಾತ್ರಗಳ ಆಯ್ಕೆಯಲ್ಲಿ ಚ್ಯೂಸಿಯಾಗಿರುವ ಭಾಸ್ಕರ್​ ನೂರು ಸಿನಿಮಾಗಳಲ್ಲಿ ಅಭಿನಯಿಸಲು ಬದಲು ಮೂರು ಸಿನಿಮಾಗಳಲ್ಲಿ ಪ್ರೇಕ್ಷಕರ ಹೃದಯ ಗೆಲ್ಲಬೇಕು ಎಂಬುದನ್ನು ನಂಬಿದ್ದಾರೆ. ಕನ್ನಡದಲ್ಲಿ ಭಾಸ್ಕರ್​ ಈಗಾಗಲೇ "ವೀರ ಪರಂಪರೆ", "ವಾರೇವ್ಹಾ", "ಆನೆ ಪಟಾಕಿ" ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 

image


ನವರಸ ಪ್ರವೀಣ

ಭಾಸ್ಕರ್‍ಗೆ ಅಭಿನಯದ ಮೇಲೆ ಸಾಕಷ್ಟು ಒಲವಿರುವ ಕಾರಣ ಅವರು ಕೇರಳಕ್ಕೆ ಹೋಗಿ ಅಲ್ಲಿನ "ನ್ಯಾಷನಲ್​ ಸ್ಕೂಲ್​ ಆಫ್​ ಡ್ರಾಮಾ"ದ ಸೀನಿಯರ್​ ಮೋಸ್ಟ್​ ಪ್ರೊಫೆಸರ್​, ಜಿ.ವೇಣು ಅವರ ಬಳಿ " ನವರಸ ಸಾಧನ"ಗಳ ಮೇಲೆ ಒಂದು ತಿಂಗಳ ಕೋರ್ಸ್ ಕೂಡ ಮಾಡಿದ್ದಾರೆ. "ಕೋಡಿಯಾಟ್ಟಮ್" ನವರಸ ಸಾಧನ ಎಂಬ ಆ ಕೋರ್ಸ್ ನಿಂದ ಭಾಸ್ಕರ್‍ಗೆ ಸಾಕಷ್ಟು ಸಹಾಯವಾಗಿದೆಯಂತೆ. ಬ್ಯಾಂಕ್‍ನಲ್ಲಿ ಉದ್ಯೋಗಿಯಾಗಿರುವ ಕಾರಣ ಭಾಸ್ಕರ್​ ಸಮಯವನ್ನು ಕೂಡ ನಿಭಾಯಿಸಿಕೊಳ್ಳಬೇಕಿದೆ. ಜನ ಮೆಚ್ಚುವಂತಹ ಕಲಾವಿದನಾಗಬೇಕು ಎಂಬುದಷ್ಟೇ ಅವರ ಆಸೆ. ಕನ್ನಡದ ನಿರ್ದೇಶಕರ ನಿರ್ಲಕ್ಷ್ಯಕ್ಕೆ ಮೈಸೂರಿನ ಈ ಪ್ರತಿಭಾವಂತ ನಟ ಬಾಲಿವುಡ್​ಗೆ ಎಂಟ್ರಿಕೊಟ್ಟು ಉತ್ತರ ನೀಡುತ್ತಿದ್ದಾರೆ. ಪರಭಾಷಾ ನಟರನ್ನು ವೀಳ್ಯದೆಲೆ ನೀಡಿ ಆಹ್ವಾನ ನೀಡುವವರು ಕನ್ನಡದವರನ್ನೇ ಮರೆತ್ರೆ ಎಷ್ಟು ಸರಿ ಅನ್ನುವುದನ್ನು ಪ್ರಶ್ನಿಸಿಕೊಳ್ಳಬೇಕಿದೆ...?  

ಇದನ್ನು ಓದಿ:

1. ಜಾನಪದ ಕಲೆಯ ರಾಯಭಾರಿ ದೀಪಶ್ರೀ...

2. ಹುಬ್ಬಳ್ಳಿಯಿಂದ ದೆಹಲಿ ತನಕ- ಇದು ಬಣ್ಣದ ಕ್ಯಾನ್ವಾಸ್​​ನಲ್ಲಿ ಸಾಧನೆ ಕಥೆ

3. "ಆಧಾರ್"ಎಲ್ಲದಕ್ಕೂ ಆಧಾರ