ಇಲ್ಲಿ ಗೃಹಣಿಯರಿಂದ ತಯಾರಾಗುತ್ತೆ ವೆರೈಟಿ ವೆರೈಟಿ ಚಾಕಲೇಟ್...!

ನಿನಾದ

ಇಲ್ಲಿ ಗೃಹಣಿಯರಿಂದ ತಯಾರಾಗುತ್ತೆ ವೆರೈಟಿ ವೆರೈಟಿ ಚಾಕಲೇಟ್...!

Tuesday March 22, 2016,

2 min Read

ವಿದೇಶಿದಿಂದ ಒಂದು ಪುಟ್ಟ ಚಾಕಲೇಟ್ ತಂದ್ರೆ ಸಾಕು ನಮ್ ಜನಕ್ಕೆ ಅದೇನೋ ಖುಷಿ. ಫಾರೀನ್ ಚಾಕಲೇಟ್ ಫಾರಿನ್ ಚಾಕಲೇಟ್ ಅನ್ನೋ ಉದ್ಘಾರ ಬೇರೇ. ಆದ್ರೆ ಇಂತಹ ಫಾರಿನ್ ಚಾಕಲೇಟ್ ಗಳಿಗೆ ಸೆಡ್ಡು ಹೊಡೆಯುವಂತಹ ಚಾಕಲೇಟ್ ಗಳನ್ನು ಬೆಂಗಳೂರಿನಲ್ಲೂ ತಯಾರಿಸಬಹುದು ಅಂತಾ ಸಾಧಿಸಿ ತೋರಿಸಿದ್ದಾರೆ ಐವರು ಮಹಿಳೆಯರು.

image


ಬೆಂಗಳೂರಿನ ಚಾಮರಾಜಪೇಟಿ ನಿವಾಸಿಯಾದ ಕಲ್ಪನಾ ರಂಗನಾಥ್ ಅವರಿಗೆ ಹಿಂದಿನಿಂದಲೂ ತಾನು ತನ್ನ ಕಾಲ ಮೇಲೆ ನಿಲ್ಲಬೇಕು. ನಾನು ನನ್ನ ಆದ ಬ್ಯುಸಿನೆಸ್ ಆರಂಭಿಸಬೇಕು ಅನ್ನೋ ತುಡಿತ. ವಿವಾಹವಾದ ಬಳಿಕ ಮನೆ ಸಂಸಾರ ಮಕ್ಕಳು ಅಂತಾ ಅವರಿಗೆ ಸಾಧ್ಯವಾಗಲಿಲ್ಲ. ಮಕ್ಕಳು ದೊಡ್ಡವರಾಗುತ್ತಿದ್ದಂತೆ ಏನಾದ್ರೂ ಮಾಡಲೇ ಬೇಕು ಅಂತಾ ನಿರ್ಧರಿಸಿದ ಅವರು ಒಂದು ಬಾರಿ ತಮ್ಮ ಸ್ನೇಹಿತೆಯೊಬ್ಬರಿಂದ ಚಾಕಲೇಟ್ ಮಾಡೋದನ್ನು ಕಲಿತುಕೊಂಡ್ರು. ಮನೆಯಲ್ಲಿ ಟ್ರೈ ಕೂಡ ಮಾಡಿದ್ರು. ಉತ್ತಮ ಫಲಿತಾಂಶ ಕೂಡ ಬಂತು. ಇದನ್ನೇ ಯಾಕೆ ಗಂಭೀರವಾಗಿ ತೆಗೆದುಕೊಳ್ಳಬಾರದು ಅಂತಾ ನಿರ್ಧರಿಸಿದ ಅವರು ಬಳಿಕ ಸ್ನೇಹಿತೆಯರೊಂದಿಗೆ ಚರ್ಚಿಸಿದ್ರು. ಅವರಿಂದ ಲೂ ಗ್ರೀನ್ ಸಿಗ್ನಲ್ ಸಿಕ್ಕಿತ್ತು. ಕೊನೆಗೆ ಐವರು ಸೇರಿ Sweetbonhuer ಪುಟ್ಟ ಸಂಸ್ಥೆ ಆರಂಭಿಸಿದ್ರು. ಸ್ವೀಟ್ ಬೋನ್ಯುರ್ ಗೆ ಈಗ 6 ವರ್ಷದ ಹೊಸ್ತಿಲಿಲ್ಲಿದೆ. ಆರು ವರ್ಷಗಳಲ್ಲಿ ಸಾಕಷ್ಟು ಬೆಳೆದಿದೆ ಕೂಡ.

image


ಸ್ವೀಟ್ ಬೋನ್ಯುರ್ ನಲ್ಲಿ ಇವತ್ತು ಎಲ್ಲಾ ರೀತಿಯ ಚಾಕಲೇಟ್ ಗಳು ದೊರೆಯುತ್ತೆ. ಆದ್ರಲ್ಲೂ ನಮ್ಮಲ್ಲಿ ಸಿಗುವಂತಹ ಚಾಕಲೇಟ್ ಗಳು ಎಲ್ಲೂ ಸಿಗಲ್ಲ ಅನ್ನುವ ಕಲ್ಪನಾ, ನಾವು ಪಕ್ಕಾ ಹೋಮ್ ಮೇಡ್ ಚಾಕಲೇಟ್ ಗಳನ್ನು ತಯಾರಿಸುತ್ತೇವೆ ಅಂತಾರೆ. ಇಲ್ಲಿ ಡ್ರೈ ಪ್ರೂಟ್ಸ್ ಹಾಗೂ ವಿವಿಧ ಹಣ್ಣುಗಳ ಫ್ಲೇವರ್ ಗಳ ಚಾಕಲೇಟ್ ಗಳನ್ನು ತಯಾರಿಸುತ್ತಾರೆ. ಮ್ಯಾಂಗೋ, ಗ್ರೀನ್ ಆಪಲ್, ಫೈನಾಫಲ್, ಗುವಾ, ರೋಸ್ ಗುಲ್ಕನ್, ಕಿವಿ, ಆರೇಂಜ್, ಬಟರ್ ಸ್ಕಾಚ್ , ರಾಗಿ ಹೀಗೆ ವೆರೈಟಿ ವೆರೈಟಿ ಚಾಕಲೇಟ್ ಗಳು ಸ್ವೀಟ್ ಬೋನ್ಯುರ್ ನಲ್ಲಿ ಲಭ್ಯವಿದೆ. ಇನ್ನು ಅನೇಕ ಹೊಸ ರುಚಿಗಳನ್ನು ಕಂಡು ಹಿಡಿಯುವ ಪ್ರಯತ್ನದಲ್ಲಿದ್ದಾರೆ ಸ್ವೀಟ್ ಬೋನ್ಯುರ್ ನ ಸದಸ್ಯರು.

image


ಈಗಾಗಲೇ ಸ್ವೀಟ್ ಬೋನ್ಯುರ್ ತಂಡ 50 ಕ್ಕೂ ಹೆಚ್ಚು ವಸ್ತುಪ್ರದರ್ಶನಗಳಲ್ಲಿ ಭಾಗವಹಿಸಿ ಸಾರ್ವಜನಿಕರಿಂದ ಮೆಚ್ಚುಗೆ ಗಳಿಸಿಕೊಂಡಿದೆ. Sweetbonhuer.blogspot.in ಅನ್ನೋ ಬ್ಲಾಗ್ ಹೊಂದಿರುವ ಈ ತಂಡ ಬ್ಲಾಗ್ ಮೂಲಕವೇ ಆರ್ಡರ್ ಗಳನ್ನು ಪಡೆಯುತ್ತೆ. ಯಾವುದೇ ರೀತಿಯ ಶುಭ ಸಮಾರಂಭಕ್ಕೂ ಚಾಕಲೇಟ್ ಗಳನ್ನು ತಯಾರಿಸಿಕೊಡಲಾಗುತ್ತೆ. ಅಲ್ಲದೇ ನೇರವಾಗಿ ಭೇಟಿ ಮಾಡಿಯೂ ಆರ್ಡರ್ ಪಡೆಯಬಹುದು.

ಇದನ್ನು ಓದಿ: 

1. ಈ ಕಾರ್​ ತಗೊಂಡ್ರೆ ಡ್ರೈವರ್​ ಬೇಡ್ವೇ ಬೇಡ..!

2. ಕಾಲುಗಳಿಲ್ಲದ ಈಕೆ ವಿಶ್ವದ ಶ್ರೇಷ್ಠ ಈಜುಗಾರ್ತಿ..!

3. ತೂಗುವ ತೊಟ್ಟಿಲಿಗೆ ಲಕ್ಷ ಲಕ್ಷ ರೂಪಾಯಿ..!