ಕೆಲಸ, ಶ್ರಮ, ಹಠ ಮತ್ತು ಗುರಿ= ಅನ್ನಾಚಾಂಡಿ..!

ಟೀಮ್​ ವೈ.ಎಸ್​. ಕನ್ನಡ

1

ಸಾಧನೆಗೆ ಸಾವಿರ ದಾರಿ ಅನ್ನೋ ಮಾತಿದೆ. ಸಾಧನೆಯ ಹಾದಿಯಲ್ಲಿ ಅನೇಕ ಸವಾಲುಗಳು ಎದುರಾಗುತ್ತವೆ. ಅವಮಾನಗಳು, ಕೇಳುವುದಕ್ಕೆ ಕಷ್ಟವಾಗಬಲ್ಲ ಮಾತುಗಳು ಬರಬಹುದು. ಆದ್ರೆ ಯೋಚಿಸುವ ಶಕ್ತಿ ಮತ್ತು ಸಾಧನೆಯ ಕನಸಿದ್ದರೆ ಏನು ಬೇಕಾದ್ರೂ ಸಾಧಿಸಬಹುದು ಅನ್ನುವುದನ್ನು ಮಾಡಿ ತೋರಿಸಿದವರು ಅನ್ನಾ ಚಾಂಡಿ. ಅಂದಹಾಗೇ ಅನ್ನಾ ಚಾಂಡಿ ಯಾರು..? ಅವರೇನು ಮಾಡಿದ್ರು ಅನ್ನೋ ಇಂಟರೆಸ್ಟಿಂಗ್ ಸ್ಟೋರಿ ಎಲ್ಲರಿಗೂ ಮಾದರಿ ಆಗುತ್ತೆ ಅನ್ನುವ ಬಗ್ಗೆ ಎರಡು ಮಾತಿಲ್ಲ.

ಬಾಲಿವುಡ್​​ನಲ್ಲಿ ಕನ್ನಡದ ಹುಡುಗಿ ದೀಪಿಕಾ ಪಡುಕೋಣೆ ದೊಡ್ಡ ಸುದ್ದಿ ಮಾಡುತ್ತಿದ್ದಾರೆ. ನಟನೆಯಲ್ಲಂತೂ ದೀಪಿಕಾಗೆ ಭಾರಿ ಆಫರ್​ಗಳಿವೆ. ಆದ್ರೆ ದೀಪಿಕಾ ಈಗ ಬೆಂಗಳೂರಿನ ಇಂದಿರಾ ನಗರದಲ್ಲಿ “ದಿ ಲೀವ್ ಲವ್ ಲಾಫ್” ಪೌಂಡೇಷನ್ ಆರಂಭಿಸಿದ್ದಾರೆ. ಬೆಂಗಳೂರು ಈ ಫೌಂಡೇಷನ್​ಗೆ ಮೈನ್​ ಬ್ರಾಂಚ್​ ಕೂಡ ಆಗಿದೆ . ದೀಪಿಕಾ ಫೌಂಡೇಷನ್​ಗೆ ಮುಖ್ಯಸ್ಥೆ ಅನ್ನಾ ಚಾಂಡಿ.

ಅನ್ನಾ ಚಾಂಡಿ ಅಂತರಾಷ್ಟ್ರೀಯ ಟ್ರಾನ್ಸ್ ಆ್ಯಕ್ಷನಲ್ ಅನಾಲಿಸಿಸ್ ಅಸೋಸಿಯೇಶನ್​​ನಿಂದ ಮಾನ್ಯತೆ ಪಡೆದ ವ್ಯವಹಾರ ವಿಶ್ಲೇಷಕಿ. ಆದ್ರೆ ಕೌನ್ಸೆಲಿಂಗ್​ನಲ್ಲಿ ಪಾಂಡಿತ್ಯವನ್ನು ಪಡೆದಿದ್ದಾರೆ. ಆರ್ಟ್ ಥೆರಪಿ ಮತ್ತು ನ್ಯೂರೋ ಲಿಂಗ್ವಿಸ್ಟಿಕ್ ಪ್ರೋಗ್ರಾಂನಲ್ಲೂ ಪಾಂಡಿತ್ಯ ಸಾಧಿಸಿದ್ದಾರೆ. ಅನ್ನಾ ಚೆನ್ನೈ ಮೂಲದವರಾದ್ರೂ ಬೆಂಗಳೂರಿನಲ್ಲಿ ಸಾಕಷ್ಟು ವರ್ಷಗಳಿಂದ ವಾಸವಾಗಿದ್ದಾರೆ. ತನ್ನ ಫೀಲ್ಡ್​​ನಲ್ಲಿ ಅನ್ನಾಗೆ 30 ವರ್ಷಗಳ ಅನುಭವ ಇದೆ. ವಿವಿಧ ರೀತಿಯ ಜನರನ್ನು ಭೇಟಿ ಮಾಡಿದ್ದಾರೆ. ಅಷ್ಟೇ ಅಲ್ಲ ಅವರುಗಳಿಗೆ ಪರಿಹಾರವನ್ನೂ ಸೂಚಿಸಿದ್ದಾರೆ. ಅನ್ನಾ ಈಗ ಇಬ್ಬರು ಮಕ್ಕಳ ತಾಯಿ ಮತ್ತು ಖುಷಿಯಿಂದ ಬದುಕು ನಡೆಸುತ್ತಿದ್ದಾರೆ.

ಇದನ್ನು ಓದಿ: ಅಡುಗೆ ಬರಲ್ಲ ಅನ್ನುವ ಟೆನ್ಷನ್​ ಬಿಟ್ಟುಬಿಡಿ- ಆ್ಯಪ್ ಡೌನ್​ಲೋಡಿ ಮಾಡಿ ಅಡುಗೆ ಕಲಿಯಿರಿ..!

ಅವಕಾಶವನ್ನು ಹುಡುಕಿದ ಕಥೆ.!

ಅನ್ನಾ ಹುಟ್ಟಿದ್ದು ಅಪ್ಪಟ ದಕ್ಷಿಣ ಭಾರತೀಯ ಸಂಸ್ಕೃತಿ ಹೊಂದಿದ್ದ ಕುಟುಂಬದಲ್ಲಿ. ಬೆಂಗಳೂರಿನ ಬಿಷಪ್ ಕಾಟನ್ ಗರ್ಲ್ಸ್ ಸ್ಕೂಲ್​​ನಲ್ಲಿ ವಿದ್ಯಾರ್ಥಿ ಜೀವನ ಆರಂಭಿಸಿದ್ದರು. ಮೌಂಟ್ ಕಾರ್ಮೆಲ್ ಕಾಲೇಜ್​ನಿಂದ ಪದವಿ ಪಡೆದುಕೊಂಡಿದ್ದರು. ಇಷ್ಟ ಪಟ್ಟವರ ಜೊತೆ ಮದುವೆ ಕೂಡ ಆಯಿತು. ಮದುವೆ ಆದ ಕೆಲವೇ ತಿಂಗಳಲ್ಲಿ ತನ್ನ ಗಂಡನ ಸಹೋದರ ಸ್ಕಿಜೋಫ್ರೇನಿಯಾದಿಂದ ಬಳಲುತ್ತಿರುವುದು ಗೊತ್ತಾಗಿತ್ತು.

“ ಒಂದು ಕುಟುಂಬದಲ್ಲಿ, ಇದು ನಮಗೆ ಅನ್ಯಲೋಕದಂತೆ ಭಾಸವಾಗಿತ್ತು. ಅವರ ಸೈಕೋ ಥೆರಪಿಸ್ಟ್ ಗಂಡನ ಸಹೋದರನನ್ನು ಹೇಗೆ ಮ್ಯಾನೇಜ್​ಮಾಡಬೇಕು ಅನ್ನುವುದರ ಬಗ್ಗೆ ಸಲಹೆ ನೀಡಿದ್ದರು. ಅವರ ವಿಚಾರದಲ್ಲಿ ಕುಟುಂಬ ನಿಷ್ಕ್ರೀಯವಾಗಿತ್ತು ಅಂತಲೇ ಹೇಳಬಹುದು. ಆದ್ರೆ ನಾನು ನನ್ನ ಗಂಡನ ಸಹೋದರನ ಬದುಕನ್ನು ಬದಲಿಸಬೇಕು ಅನ್ನುವ ನಿರ್ಧಾರ ಮಾಡಿದ್ದೆ. ಹೀಗಾಗಿ ಕೌನ್ಸೆಲಿಂಗ್ ಕಡೆಗೆ ಗಮನ ಕೊಟ್ಟೆ ಮತ್ತು ಅದನ್ನು ಅಭ್ಯಾಸ ಮಾಡಲು ಆರಂಭಿಸಿದೆ.”
- ಅನ್ನಾ ಚಾಂಡಿ, ದಿ ಲೀವ್ ಲವ್ ಲಾಫ್ ಪೌಂಡೇಷನ್ ಮುಖ್ಯಸ್ಥೆ

ಮೊದಲ ಹಂತ

ಅನ್ನಾ ತನ್ನ ವೃತ್ತಿ ಜೀವನವನ್ನು ವಿಶ್ವಾಸ್ ಅನ್ನುವ ಎನ್​ಜಿಒ ಒಂದರಲ್ಲಿ ಫ್ರೀಲಾನ್ಸ್ ಕೌನ್ಸೆಲರ್ ಆಗಿ ಆರಂಭಿಸಿದ್ದರು. ಈ ಕೆಲಸಕ್ಕೆ ಸೇರುವಾಗ ಅನ್ನಾ ವಯಸ್ಸು ಸರಿಸುಮಾರು 30ರ ಗಡಿ ದಾಟಿತ್ತು. ಅಂಗವೈಕಲ್ಯ ಮತ್ತು ಅವರ ಅಭಿವೃದ್ಧಿಯ ಬಗ್ಗೆ ಕೆಲಸ ಮಾಡುತ್ತಿರುವ ಈ ಎನ್​ಜಿಒ ಈಗ ವಿಶ್ವಾಸ, ವಿವೇಕ ಮತ್ತು ಸ್ನೇಹ ಅನ್ನುವ ಮೂರು ಬ್ರಾಂಚ್​ಗಳನ್ನು ಹೊಂದಿದೆ. ಅನ್ನಾ ಕೆಲಸದ ವೈಖರಿಯನ್ನು ನೋಡಿ ವಿಶ್ವಾಸ್ ಸಂಸ್ಥೆ ಅವರನ್ನು ಬೋರ್ಡ್ ಮೆಂಬರ್ ಆಗಿ ಬಡ್ತಿ ಮಾಡಿದೆ. ಅಲ್ಲಿ ಅನ್ನಾ " ಸೂಪರ್ ವಿಷನ್ ಮಾಡೆಲ್" ಅನ್ನುವ ಪ್ರಾಜೆಕ್ಟ್ ಅನ್ನು ಡ್ರಾಫ್ಟ್ ಮಾಡಿದ್ದರೂ ಭಾರತದಲ್ಲಿ ಅದನ್ನು ದೊಡ್ಡ ಮಟ್ಟದಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಿಲ್ಲ.

ಅನ್ನಾ "ಫಸ್ಟ್ ಸೋರ್ಸ್" ಮತ್ತು "24/7" ಸೇರಿದಂತೆ ಹಲವು ಬಿಪಿಒಗಳಲ್ಲಿ ಕೆಲಸ ಮಾಡಿದ್ದರು. ಇವತ್ತಿಗೂ ಜನರ ಕಷ್ಟಗಳಿಗೆ ಕಿವಿಯಾಗುತ್ತಾರೆ. ಅವರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾರೆ. ಅವರಿಗೆ ಹೊಸ ಬದುಕಿನ ಬಗ್ಗೆ ಕನಸುಗಳನ್ನು ಕಟ್ಟಿಕೊಡುತ್ತಾರೆ. ಈ ಎಲ್ಲಾ ಕೆಲಸಗಳ ನಡುವೆಯೂ ಅನ್ನಾ ತನ್ನ ಕುಟುಂಬಕ್ಕೆ ಸಾಕಷ್ಟು ಸಮಯವನ್ನೂ ನೀಡುತ್ತಾರೆ.

“ ಅಲ್ಲಿಂದ ಇಲ್ಲಿ ತನಕ ನಾನು ತಿರುಗಿ ನೋಡಿದ್ದೇ ಇಲ್ಲ. ಈ ವೃತ್ತಿಯಲ್ಲಿ ನಾನು ಒಂದು ದಿನವೂ ಬೇಜಾರು ಮಾಡಿಕೊಂಡಿಲ್ಲ. ಪ್ರತಿದಿನವೂ ನಾನು ನೋವುಗಳನ್ನು ಮಾತ್ರ ಕೇಳಿದ್ರೂ ಜನರ ಜೊತೆ ಸಂಬಂಧವನ್ನು ಬೆಳೆಸಿಕೊಳ್ಳುತ್ತೇನೆ ಅನ್ನುವ ಖುಷಿ ಇದೆ. ಇದು ನನ್ನನ್ನು ಸಂತೋಷವನ್ನಾಗಿಟ್ಟಿದೆ. ಇಂತಹ ಸಂಬಂಧಗಳು ಹೆಚ್ಚು ಪಾವಿತ್ರ್ಯತೆಯನ್ನು ಪಡೆದುಕೊಂಡಿದೆ.”
-  ಅನ್ನಾ ಚಾಂಡಿ, ದಿ ಲೀವ್ ಲವ್ ಲಾಫ್ ಪೌಂಡೇಷನ್ ಮುಖ್ಯಸ್ಥೆ

ಮಾನಸಿಕ ಕಾಯಿಲೆಗಳ ಬಗ್ಗೆ ಭಾರತದಲ್ಲಿ ನೆಗೆಟಿವ್ ಯೋಚನೆಗಳೇ ಹೆಚ್ಚು. ಹೀಗಾಗಿ ನಾನು ಕೌನ್ಸಲಿಂಗ್ ಕೆಲಸವನ್ನು ಆರಂಭಿಸಬೇಕಾದರೆ ಸಾಕಷ್ಟು ದೈರ್ಯ ಮಾಡಬೇಕಾಯಿತು. ಕೆಲಸ ಆರಂಭಿಸಿದ ಮೊದಲ ವರ್ಷ ಅನ್ನಾ ಗ್ರಾಹಕರಿಲ್ಲದೆ, ಪೇಷಂಟ್​ಗಳಿಲ್ಲದೆ ದಿನ ಕಳೆಯಬೇಕಾಯಿತು.

“ ಕೌನ್ಸೆಲಿಂಗ್ ಕೆಲಸದ ಒಂದು ದೊಡ್ಡ ಲಾಭ ಅಂದ್ರೆ ನೀವು ನಿಮ್ಮ ಬಗ್ಗೆಯೇ ಸಾಕಷ್ಟು ಕಲಿತುಕೊಳ್ಳಬಹುದು. ಇನ್ನೊಬ್ಬರ ಜೊತೆಗೆ ಮಾನಸಿಕ ಸಂಬಂಧವನ್ನು ಬೆಳೆಸಿಕೊಳ್ಳಬಹುದು. ಇನ್ನೊಬ್ಬರಿಗೆ ನೀವು ದಾರಿದೀಪವಾಗುವ ಜೊತೆಗೆ ನಿಮ್ಮಲ್ಲೇ ನೀವು ಬದಲಾಗಬಹುದು.”
- ಅನ್ನಾ ಚಾಂಡಿ, ದಿ ಲೀವ್ ಲವ್ ಲಾಫ್ ಪೌಂಡೇಷನ್ ಮುಖ್ಯಸ್ಥೆ

ಪ್ರತಿಯೊಂದು ಭಾರತೀಯ ಕುಟುಂಬದಲ್ಲಿ ಇರುವಂತೆ ಅನ್ನಾ ಕುಟುಂಬದಲ್ಲೂ ಅವರ ಭವಿಷ್ಯದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಆದ್ರೆ ಅನ್ನಾ ಮಾತ್ರ ತನ್ನ ಕನಸುಗಳನ್ನು ನನಸು ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದರು. ತನ್ನ ಕೆಸದಿಂದ ಅನ್ನಾಗೆ ಒಂದು ಪೈಸೆ ಆದಾಯವೂ ಹುಟ್ಟುತ್ತಿರಲಿಲ್ಲ. ಆದ್ರೆ ಕನಸುಗಳನ್ನು ಮಾತ್ರ ಬಿಟ್ಟಿರಲಿಲ್ಲ. ಅದೇ ಪ್ರಯತ್ನ ಅನ್ನಾರವರನ್ನು ಈಗ ಉನ್ನತ ಸ್ಥಾನಕ್ಕೆ ತಂದು ನಿಲ್ಲಿಸಿದೆ.

ಅನ್ನಾ ಕೌನ್ಸಲಿಂಗ್ ವೃತ್ತಿ ಆರಂಭಿಸಿ ಈಗ 29 ವರ್ಷಗಳು ಮುಗಿದಿವೆ. ಆದ್ರೆ ಅನ್ನಾ ಇನ್ನೊಬ್ಬರಿಗೆ ಸಹಾಯ ಮಾಡಲು ಇವತ್ತಿಗೂ ಹಿಂದೆಮುಂದೆ ನೋಡುತ್ತಿಲ್ಲ. ನೋವುಂಡವರ ಕಷ್ಟಗಳಿಗೆ ಕಿವಿಯಾಗುತ್ತಿದ್ದಾರೆ. ಅವರಿಗೆ ಪ್ರೀತಿ ನೀಡುತ್ತಿದ್ದಾರೆ. ತನ್ನದೇ ಶೈಲಿಯಲ್ಲಿ ಅವರ ಬದುಕಿನ ದಾರಿಯನ್ನು ಬದಲಿಸುವ ಪ್ರಯತ್ನ ಮಾಡುತ್ತಿದ್ದಾರೆ.

“ಕೌನ್ಸೆಲಿಂಗ್ ನನ್ನ ಆಯ್ಕೆ. ಮೆಂಟರ್ ಆಗಿರಲು ನಾನು ಪ್ರತಿಕ್ಷಣವೂ ಬಯಸುತ್ತೇನೆ. ಬದುಕಿನಲ್ಲಿ ನಿರಾಸೆ ಅನುಭವಿಸಿದವರಿಗೆ ಹೊಸ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡುತ್ತೇನೆ. ನಾನು ನನ್ನ ಬಗ್ಗೆ ಸಿಂಹಾವಲೋಕನ ಮಾಡಿದಾಗ ನಾನು ಸಾಗಿ ಬಂದ ದಾರಿ ಬಗ್ಗೆ ಸಾಕಷ್ಟು ಹೆಮ್ಮೆ ಆಗುತ್ತದೆ. ಜನರು ಖುಷಿ ಪಟ್ಟಾಗ ನನಗೂ ಖುಷಿ ಆಗುತ್ತದೆ. ಹೀಗಾಗಿ ನಾನು ಇವತ್ತಿಗೂ ನನ್ನ ಕೆಲಸದ ಬಗ್ಗೆ ಹೆಚ್ಚು ಆಸಕ್ತಿಯಿಂದ ಇರುತ್ತೇನೆ.”
-  ಅನ್ನಾ ಚಾಂಡಿ, ದಿ ಲೀವ್ ಲವ್ ಲಾಫ್ ಪೌಂಡೇಷನ್ ಮುಖ್ಯಸ್ಥೆ

ಲೀವ್ ಲವ್ ಲಾಫ್

ಬಾಲಿವುಡ್​​ನ ಖ್ಯಾತ ನಟಿ ದೀಪಿಕಾ ಪಡುಕೋಣೆ, ಖಿನ್ನತೆಗೆ ಒಳಗಾದಾಗ ರಾಷ್ಟ್ರೀಯ ಟಿವಿ ಚಾನಲ್​ಗಳು ಸೇರಿದಂತೆ ಎಲ್ಲರೂ ಅವರ ಬಗ್ಗೆ ಸಂಶಯದ ದೃಷ್ಟಿಯಲ್ಲೇ ಮಾತನಾಡಿದ್ದರು. ಮಾನಸಿಕ ಕಾಯಿಲೆಗಳಿಗೆ ಸಂಬಂಧ ಪಟ್ಟಂತೆ ಸಮಾಜದ ದೃಷ್ಟಿ ಇನ್ನೂ ಬದಲಾಗಿಲ್ಲ. ಆದ್ರೆ ದೀಪಿಕಾ ಅನುಭವಿಸುತ್ತಿದ್ದ ನೋವುಗಳು ನನಗೆ ಗೊತ್ತಿತ್ತು. ಅವರಿಗೆ ಯಾವ ಸಲಹೆ ನೀಡಬೇಕಿತ್ತೋ ಅದನ್ನು ನೀಡಿದೆ. ಇವತ್ತು ಅವರ ಭಾವನೆಗಳು ಬದಲಾಗಿವೆ. ಒತ್ತಡಗಳು ದೂರವಾಗಿವೆ. ಈಗ ಲೀವ್ ಲವ್ ಲಾಫ್ ಫೌಂಡೇಷನ್ ಆರಂಭಿಸಿದ್ದಾರೆ. ಅನ್ನಾ ದೀಪಿಕಾ ಆರಂಭಿಸಿರುವ ಸಂಸ್ಥೆಗೆ ಮುಖ್ಯಸ್ಥರಾಗಿದ್ದಾರೆ. ಇದು ಸ್ಟಾರ್ಟ್ ಅಪ್ ಆಗಿದ್ದರೂ, ಲಾಭದ ಉದ್ದೇಶವನ್ನು ಮಾತ್ರ ಹೊಂದಿಲ್ಲ.

" ನಾವು ಉದ್ಯಮದ ಯೋಚನೆಯಲ್ಲೇ ಕೆಲಸ ಮಾಡುತ್ತೇವೆ. ಆದ್ರೆ ಲಾಭದ ಉದ್ದೇಶದಿಂದಲ್ಲ. ಮಾನಸಿಕ ಖಿನ್ನತೆ ವಿರುದ್ಧ ನಾವು ಕೆಲಸ ಮಾಡಲಿದ್ದೇವೆ. ದೀಪಿಕಾ ಪಡುಕೋಣೆ ಕೂಡ ನಮ್ಮ ಜೊತೆಗಿದ್ದೇನೆ. ನಾವು ಯಶಸ್ಸು ಕಾಣುವ ಕನಸು ಕಾಣುತ್ತಿದ್ದೇವೆ."
- ಅನ್ನಾ ಚಾಂಡಿ, ದಿ ಲೀವ್ ಲವ್ ಲಾಫ್ ಪೌಂಡೇಷನ್ ಮುಖ್ಯಸ್ಥೆ

ಲೀವ್ ಲವ್ ಲಾಫ್ ಪೌಂಡೇಷನ್ ಆರಂಭವಾದ ಮೇಲೆ "ದುಬಾರಾ ಪೂಚೋ" ಕ್ಯಾಂಪೇನ್ ಮೂಲಕ, ನಾಲ್ಕು ವ್ಯಕ್ತಿಗಳ ಕತೆ ಕೇಳಿಸುವಂತಹ ಕೆಲಸ ಮಾಡಿಸಿದ್ದೆವು. ಇದು ಇವತ್ತು 140 ವ್ಯಕ್ತಿಗಳ ಕಥೆಯ ತನಕ ವಿಸ್ತಾರಗೊಂಡಿದೆ. ಈ ಕಥೆಗಳೆಲ್ಲವೂ ಅನುಭವದ ಮಾತುಗಳೇ ಆಗಿವೆ. ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಸ್ಫೂರ್ತಿದಾಯಕವಾಗಿದೆ. ಬದುಕಿನಲ್ಲಿ ಹಲವು ಏರಿಳಿತಗಳನ್ನು ಕಂಡಿರುವ ಅನ್ನಾ ಅದ್ಯಾವುದಕ್ಕೂ ತಲೆ ಕೆಡಸಿಕೊಂಡಿಲ್ಲ. ಹೊಸ ಬದುಕಿನ ಬಗ್ಗೆ ಪ್ರತಿದಿನ ಹೊಸ ಹೊಸ ಕನಸುಗಳನ್ನು ಕಾಣುತ್ತಿದ್ದಾರೆ. ಅನ್ನಾ ಚಾಂಡಿ ವೃತ್ತಿ, ಕೆಲಸ ಮತ್ತು ಕನಸುಗಳು ನಿಜಕ್ಕೂ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕ.

ಇದನ್ನು ಓದಿ:

1. ಮಣ್ಣಲ್ಲಿ ಬಿದ್ದು ಮೇಲೆದ್ದವರ ಕಥೆ- ಇವರ ಬಳಿ ಮಾತನಾಡಿದ್ರೆ ದೂರವಾಗುತ್ತೆ ವ್ಯಥೆ..!

2. ನಾಟಿ ಫ್ಯಾಕ್ಟರಿಯ Naughty ಸ್ಟೋರಿ..!

3. ಬಿಹಾರದ "ವಿದ್ಯುತ್ ಭವನ"ದಲ್ಲಿದೆ ವಿಭಿನ್ನ ಕೆಫೆ- ತ್ಯಾಜ್ಯಗಳಿಂದಲೇ ತಯಾರಾಗಿದೆ ಕುರ್ಚಿ, ಟೇಬಲ್..!

Related Stories