ಮಣ್ಣಲ್ಲಿ ಬಿದ್ದು ಮೇಲೆದ್ದವರ ಕಥೆ- ಇವರ ಬಳಿ ಮಾತನಾಡಿದ್ರೆ ದೂರವಾಗುತ್ತೆ ವ್ಯಥೆ..!

ಟೀಮ್​ ವೈ.ಎಸ್​. ಕನ್ನಡ

ಮಣ್ಣಲ್ಲಿ ಬಿದ್ದು ಮೇಲೆದ್ದವರ ಕಥೆ- ಇವರ ಬಳಿ ಮಾತನಾಡಿದ್ರೆ ದೂರವಾಗುತ್ತೆ ವ್ಯಥೆ..!

Saturday February 04, 2017,

7 min Read

ಸೌಂದರ್ಯ ಇಡಿ ವಿಶ್ವವನ್ನೆ ಆಳುತ್ತಿದೆ. ಹುಡುಗಿಯರ ಝೀರೋ ಫಿಗರ್‍ನ ಝೀಲ್‍ನಿಂದ, ಹುಡುಗರ ಸಿಕ್ಸ್ ಪ್ಯಾಕ್ ಆಬ್ ತನಕ ಎಲ್ಲವೂ ಇವತ್ತಿನ ಇಂಪರ್ಮನೆಂಟ್ ಲೈಫ್‍ನ ಪರ್ಫೆಕ್ಷನ್ ಸ್ಟೇಟ್‍ಮೆಂಟ್. ಇಂಥ ಸ್ಟೇಟ್‍ಮೆಂಟ್‍ಗಳನ್ನೆ ನಂಬಿ ದಪ್ಪಗಿರುವುದೇ ನಮ್ಮ ಶಾಪ ಎಂದು ತಮ್ಮ ರಿಯಲ್ ಪವರ್‍ನ ಮರೆತು ಕೀಳರಿಮೆ ಅನುಭವಿಸಿ ಕಡೆಗೆ ಯಾವುದರಲ್ಲೂ ಯಶಸ್ಸು ಕಾಣದೆ ಬದುಕಿಗೆ ವಿಮುಖವಾಗಿ ಹೋಗುವ ಯೂಥ್ಸ್ ನಮ್ಮ ಕಣ್ಣಮುಂದಿದ್ದಾರೆ. ಆದರೆ ಆದರ್ಶ್ ಬಸವರಾಜ್, ಇಂಟರ್ ನ್ಯಾಷನಲ್ ಕಮೂನಿಕೇಷನ್ ಟ್ರೈನರ್ ಇದನ್ನು ಸುಳ್ಳಾಗಿಸಿ ಇಂದು ಎಷ್ಟೋ ಯುವಕರ ಪಾಲಿನ ಯೂಥ್ ಐಕಾನ್ ಆಗಿದ್ದಾರೆ.

image


ಕರಣ್ ಜೋಹರ್ ಜೊತೆಗೆ ಲಕ್ಷಾಂತರ ಯೂಥ್ಸ್ ಜೊತೆಗೆ ಚಿಟ್ ಚಾಟ್ ಕಾರ್ಯಕ್ರಮದಲಿ ಭಾಗವಹಿಸಿದ್ದ ಆದರ್ಶ್‍ನ ಸಕ್ಸಸ್‍ನ ಹಿಂದೆ ಬರಿ ಸೋಲುಗಳೆ ಇವೆ. ಅಂತರಾಷ್ಟ್ರೀಯ ಬೆಸ್ಟ್ ಟ್ರೈನರ್, ಚಾಣಕ್ಯ ಅವಾರ್ಡ್ ಪಡೆದುಕೊಂಡ ಸಾಧನೆ ಹಿಂದೆ ಅದೆಷ್ಟೋ ನೋವು ಅವಮಾನಗಳ ಕಥೆಗಳಿವೆ. ಆದರ್ಶ್ ಬದುಕಿನ ಪ್ರತಿ ಘಟನೆಗಳು ಹೊಸ ಹೊಸ ಟ್ವಿಸ್ಟ್ ಕೊಟ್ಟು ಇಂದು ದೊಡ್ಡ ಮಟ್ಟದ ಯಶಸನ್ನು ನೀಡಿದೆ. ಇಲ್ಲಿದೆ ಆ ರೋಚಕ ಮತ್ತು ಲೈಫ್ ಟರ್ನಿಂಗ್ ಸ್ಟೋರಿ

ರಾಯಲ್ ಫ್ಯಾಮಿಲಿ ರಾಯಲ್ ಚಾಲೆಂಜಸ್

ಅಪ್ಪ ಹಾಸನದ ಕಡೆಯವರು ಆ ಮನೆತನದವರೆಲ್ಲ ಇಂಜಿನಿಯರ್ಸ್. ಇನ್ನು ಅಮ್ಮ ಆಶಾ ಬೆನಕಪ್ಪ ಹೆಸಾರಾಂತ ಮಕ್ಕಳ ತಙರು, ತಾತಾ ಬೆನಕಪ್ಪನವರು ಭಾರತದಿಂದ ಮೊದಲ ಬಾರಿಗೆ ಹೊರ ದೇಶಕ್ಕೆ ಹೋಗಿ ಮಕ್ಕಳ ಆರೋಗ್ಯ ವಿಷಯದಲ್ಲಿ ಪಿಹೆಚ್ ಡಿ ಪಡೆದ ಮೊದಲಿಗರು. ಹಾಗೂ ಕರ್ನಾಟಕದ ಮೊಟ್ಟ ಮೊದಲ ಮಕ್ಕಳ ಆರೋಗ್ಯ ತಜ್ಞರು. ಇಂದಿನ ವಾಣಿ ವಿಲಾಸ ಆಸ್ಪತ್ರೆಯ ಮೂಲ ಸಂಸ್ಥಾಪಕರು. ಇಂಥಹ ಸುಶಿಕ್ಷಿತ ಕುಟುಂಬದಿಂದ ಬಂದ ಆದರ್ಶ್​ಗೆ ಈ ಎಲ್ಲಾ ವಿಷಯಗಳು ವರವಾಗಿದ್ದವೂ, ಶಾಪವೂ ಆಗಿದ್ದವು..! ಆದರ್ಶ್​ರ ಹಾದಿ ತುಂಬಾ ಕಠಿಣವಾಗಿದ್ದವು. ತಂದೆಯಂತೆ ಎಂಜಿನಿಯರ್ ಆಗೋದೆ? ತಾಯಿ ಕುಟುಂಬದಂತೆ ವೈದ್ಯನಾಗೋದೇ? ಜೊತೆಗೆ ಸಂಬಂಧಿಕರ ಒತ್ತಡಗಳು ಇದೆಲ್ಲವೂ ಆದರ್ಶ್​ರಲ್ಲಿ ಡಾಕ್ಟರ್ ಆಗುವ ಕನಸನ್ನು ಗೊತ್ತಿಲದಂತೆ ಮೂಡಿಸಿದ್ದವು. ಆದರೆ ನಡೆದದ್ದೇ ಬೇರೆ.!

ಗಣಿತವೆಂಬ ಕಬ್ಬಿಣದ ಕಡಲೆ

ಆದರ್ಶ್​ರ ಡಾಕ್ಟರ್ ಆಗಬೇಕು ಅನ್ನೋ ಕನಸಿಗೆ ಮೊದಲು ನಿರಾಸೆ ಮಾಡಿದ್ದೇ ಗಣಿತ. ಹತ್ತನೆ ತರಗತಿಯಲ್ಲಿ ಗಣಿತದ ವಿಷಯದಲ್ಲಿ ಆದರ್ಶ್ ಫೇಲ್ ಆದ್ರೂ ಆ ನಂತರ ಸಪ್ಲಿಮೆಂಟ್ರಿಯಲ್ಲಿ ಪಾಸ್ ಮಾಡಿಕೊಂಡರು. ನಂತರ ಪಿಸಿಎಮ್‍ಬಿ ಗೆ ಸೇರಿದ್ರು ಮತ್ತೆ ಅಲ್ಲಿ ಮ್ಯಾಥ್ಸ್ ಕೈ ಕೊಟ್ಟಿತ್ತು. ಹೇಗೋ ಪಿಯುಸಿ ಪಾಸ್ ಮಾಡಿ ಡಾಕ್ಟರ್ ಕನಸು ಬಿಟ್ಟು ಬಿಬಿಎಮ್ ಸೇರಿದ್ರು. ಇಲ್ಲೂ ಸ್ಟ್ಯಾಟಿಸ್ಟಿಕ್ಸ್ ಆದರ್ಶನ ಕಾಡೋಕೆ ಶುರು ಮಾಡಿದವು. ಹೇಗೋ ಬಿಬಿಎಮ್ ಮುಗಿಸಿದರು. ನಂತರ ದಯಾನಂದ ಸಾಗರ್ ಕಾಲೇಜಿನಲ್ಲಿ ಎಮ್‍ಬಿಎ ಪದವಿ ಮಾಡಿಕೊಂಡರು. ಆದರೆ ಎರಡನ್ನು ಓದುವ ನಡುವೆ ಲೈಫ್ ಅದೆಷ್ಟೋ ಟ್ವಿಸ್ಟ್​​ ಗಳನ್ನ ಆದರ್ಶ್​ಗೆ ನೀಡಿತ್ತು. ಹೊಸ ಹೊಸ ಟಾಸ್ಕ್ ನಡುವೆಯೇ ಆದರ್ಶ್ ಆದರ್ಶಪ್ರಾಯವಾದರು. ಆ ಜರ್ನಿಗೆ ನೀವು ಜೊತೆಯಾಗಲು ಮುಂದೆ ಓದಿ.

ಮನೆಯೇ ಮೊದಲ ಪಾಠ ಶಾಲೆ

ಡಾಕ್ಟರ್ ಆಗೋದು ಸಾಧ್ಯವಿಲ್ಲ ಅಂದ ಮಾತ್ರಕ್ಕೆ ಕಾಯಿಲೆ ವಾಸಿ ಮಾಡೋಕೆ ಮಾತ್ರಯನ್ನೇ ಕೊಡಬೇಕಿಲ್ಲ, ಮಾನಸಿಕ ಕಾಯಿಲೆಗಳಿಗೆ ಮಾತಿನ ಔಷಧ ಹಚ್ಚಬಹುದಲ್ವೆ! ಇದು ಹೊಳೆದದ್ದೇ ತಡ ಆದರ್ಶ ತಮಗೆ ಪ್ರಿಯವಾದ ಹಿಪ್ನೋ ಥೆರೆಪಿ ಕೋರ್ಸ್ ಮಾಡಿಕೊಂಡರು. ಈ ಬೆಳವಣಿಗೆ ಜೀವನದಲ್ಲಿ ಮೊದಲ ಬಾರಿಗೆ ತಮ್ಮ ಸಾಧನೆ ಬಗ್ಗೆ ಆತ್ಮವಿಶ್ವಾಸ ಮೂಡಲಾರಂಭಿಸಿತ್ತು. ಇದಕ್ಕೆ ಕಾರಣ ಮನೆಯ ವಾತಾವರಣ ಬಾಲ್ಯದಿಂಲೂ ದೊಡ್ಡ ಕುಟುಂಬದಲ್ಲೇ ಬೆಳೆದ ಆದರ್ಶ್​ಗೆ ಯಾವುದೇ ಕಟ್ಟು ಪಾಡುಗಳಿರಲಿಲ್ಲ. ಸಿರಿವಂತಿಕೆಯ ಲಿಮಿಟೇಷನ್ಸ್ ಇರಲಿಲ್ಲ. ಮನೆಯಲ್ಲಿ ಆಳು ಕಾಳಿನಿಂದ ಹಿಡಿದು ಎಲ್ಲರೊಟ್ಟಿಗೂ ಸಮಾನಭಾವದಿಂದಲೇ ವರ್ತಿಸಬೇಕೆಂದು ಮನೆಯ ವಾತವರಣ ಹೇಳಿಕೊಟ್ಟಿತ್ತು. ಜೊತೆಗೆ ತನ್ನ ವಯಸ್ಸಿಗೆ ಮೀರಿದ ಹಿರಿಯರ ಗೆಳೆಯರ ಬಳಗದೊಡನೆ ಗುರು, ಶಿಷ್ಯ ಅನ್ನೋ ಸ್ಲ್ಯಾಂಗ್ ಫ್ರೆಂಡ್‍ಶಿಪ್ ಬೆಳೆದಿತ್ತು. ಇದು ಆದರ್ಶ್​ಗೆ ಮಾತು , ಅನುಭವ ಮತ್ತು ಮೆಚ್ಯುರಿಟಿಯನ್ನು ಕಲಿಸಿತ್ತು. ಜನರೊಟ್ಟಿಗೆ ಹೇಗೆ ಬೆರೆಯಬೇಕು? ಹೇಗೆ ಸಂಭಾಳಿಸಬೇಕು?ಅನ್ನೋದನ್ನ ಕರಗತ ಮಾಡಿತ್ತು.

ಏಜ್ ಇಸ್ ನಾಟ್ ದಿ ಮೈಲೇಜ್

ಇದೆಲ್ಲದರ ಮಧ್ಯೆ ಆದರ್ಶ್ ಸ್ವಲ್ಪ ಹೆಚ್ಚೇ ದಪ್ಪವಿದ್ದರು, ಇದು ಆವರ ಆತ್ಮವಿಶ್ವಾಸವನ್ನು ಕುಗ್ಗಿಸುತ್ತಿತ್ತು. ಆದರ್ಶ್ ಮಾತಿಗೆ ಮನಸೋತ ಸೊಸೈಟಿ ಅದೇ ಆದರ್ಶ ದಪ್ಪವಿರೋದನ್ನ ಒಪ್ಪಲಿಲ್ಲ. ಇದು ಮೈಂಡ್‍ಸೆಟ್‍ನ ಪ್ರಶ್ನೆಯಾದರೂ ಆದರ್ಶಗೆ ಮಾತ್ರ ಐ ಡೋಂಡ್ ಮೈಂಡ್ ಅನ್ನುವಂತೆ ನಡೆದುಕೊಳ್ಳಲು ಪರಿಸ್ಥಿತಿಗಳು ಬಿಡಲಿಲ್ಲ. ಇದನ್ನೆ ಛಲವಾಗಿ ಸ್ವೀಕರಿಸಿ ಜಿಮ್ ಮಾಡಿ ತಮ್ಮ ತೂಕ ಕಳೆದುಕೊಂಡು ಸ್ಲಿಮ್ ಆದ್ರು, ಎಲ್ಲ ಸರಿ ಹೋಗುತ್ತಿದೆ ಅನ್ನೊ ಸಮಯದಲ್ಲಿ ಮತ್ತೆ ದಪ್ಪವಾಗಿಬಿಟ್ಟರು. ಜಿಮ್‍ಗೆ ಗಮನ ಹರಿಸುವಾಗ ಬಿಬಿಎಮ್ ಒಂದು ವರ್ಷ ಫೇಲ್ ಆದ್ರು. ಆ ಟೈಮ್‍ನಲ್ಲೇ ತಾವು ಕಲಿತಿದ್ದ ಹಿಪ್ನೋ ಥೆರಪಿ ಮತ್ತು ನ್ಯೂರೋ ಲಿಗ್ವಿಸ್ಟಿಕ್ ಪ್ರೋಗ್ರಾಂ ಕ್ಲಾಸ್‍ನ ಪ್ರಯೋಜನಕ್ಕೆ ಮುಂದಾದರು. ಅಮ್ಮನ ಕ್ಲಿನಿಕ್‍ಗೆ ಬರುತ್ತಿದ್ದ ಪೇಷೆಂಟ್​​ಗಳ ಮಾನಸಿಕ ಸಮಸ್ಯೆಯನ್ನ ಆದರ್ಶ್ ಬಗೆ ಹರಿಸೊಕೆ ಶುರು ಮಾಡಿದ್ರು. ಇದಕ್ಕಾಗಿ ತಮ್ಮ ಸಹಪಾಠಿ ಅಪೂರ್ವ ಕೈ ಜೋಡಿಸಿದರು. ಆದರೆ 21 ವರ್ಷ ವಯಸ್ಸಿನ ಹುಡುಗ 41 ವರ್ಷದವರ ಸಮಸ್ಯೆ ಬಗೆ ಹರಿಸುತ್ತಾನೆ ಅನ್ನುವುದನ್ನ ಒಪ್ಪುವ ಮನಸ್ಥಿತಿ ಯಾರಿಗೂ ಇರಲಿಲ್ಲ. ಆದರೆ ನಿಧಾನಕ್ಕೆ ನಂಬಲಾರಂಭಿಸಿದರು. ಆದರ್ಶ್ ಅಪೂರ್ವ ಸೆಪರೆಟ್ ಕ್ಲಿನಿಕ್ ಆರಂಭಿಸಿದರು. ಇದರೊಟ್ಟಿಗೆ ಕಾರ್ಪೋರೇಟ್ ಟ್ರೈನಿಂಗ್, ಸ್ಟೂಡೆಂಟ್ ಕೌನ್ಸಿಲಿಂಗ್, ಫ್ರೀಲ್ಯಾನ್ಸ್ ಕನ್ಸಲ್ಟೆಂಟ್ ಆಗಿ ಓದುತ್ತಲೇ ಸಾಕಷ್ಟು ತರಬೇತಿ ಪಡೆದುಕೊಂಡಿದ್ದರು.

image


ಮೊದಲ ಹೆಜ್ಜೆ ಅದು ದೈತ್ಯ ಹೆಜ್ಜೆ

ಅಪ್ಪ ಬಿಹೆಚ್ ಎಲ್ ಉದ್ಯೋಗಿ, ಅಪ್ಪನ ಬಾಸ್, ಒಬ್ಬರ ಜೊತೆ ಮಾತನಾಡುವಾಗ ತಮ್ಮ ಆಫೀಸ್‍ನ ಟಾಪ್ ಲೆವೆಲ್ ಮ್ಯಾನೆಜ್‍ಮೆಂಟ್‍ಗೆ ಟ್ರೈನ್ ಮಾಡುವ ಅವಕಾಶ ಕೊಟ್ಟರು. ಆದರ್ಶ್​ಗೆ ಇದು ಮೊದಲ ಚಾಲೆಂಜ್ ಆಗಿತ್ತು. 2008-09 ಸಂದರ್ಭ. ಅಂದು ಬಿಹೆಚ್‍ಎಲ್ ಕಛೇರಿಗೆ ಹೋಗಿದ್ದೆ ತಡ ಎಲ್ಲ ಸೀನಿಯರ್ ಆಫಿಸರ್ಸ್ ಎದುರಾದರು, ಎಲ್ಲರ ಮೊಗದಲ್ಲಿ ಒಂದೇ ಪ್ರಶ್ನೆ ಆದರ್ಶ್​ರ ವಯಸ್ಸು ಮತ್ತು ಆದರ್ಶ್ ದಪ್ಪ ಇದ್ದದ್ದು ಅವರ ಬಗ್ಗೆ ಇವರೆನ್ ಮಾಡ್ತಾರೆ..? ಅನ್ನೋ ಇಂಪ್ರಷನ್ ಕೊಟ್ಟಿತ್ತು. ಏನಪ್ಪಾ ಇಷ್ಟು ದಪ್ಪ ಇದ್ಯಾ? ಇಡೀ ದಿನ ಹೇಗೆ ನಿಂತ್ಕೋತ್ತೀಯ? ನನ್ನ ಮಗನ ಏಜ್ ನೀನು ನೀನ್ ನಮಗೆ ಎನ್ ಹೇಳಿಕೊಡ್ತಿಯಾ? ಎಂದು ಪ್ರಶ್ನೆ ಮಾಡಿದವರು ಲಂಚ್ ಟೈಂನಲ್ಲಿ "ಬನ್ನಿ ಆದರ್ಶ್ ಊಟಕ್ಕೆ ಹೋಗೋಣ"! ಎಂದು ಕರೆಯುವಷ್ಟು ಆದರ್ಶ್ ತಮ್ಮ ಕೆಲಸ ಸಾಬೀತು ಮಾಡಿದ್ದರು. 95 % ಒಳ್ಳೆಯ ಅಭಿಪ್ರಾಯ ಮೂಡಿತ್ತು. ಬಿಹೆಚ್‍ಎಲ್ ಇತಿಹಾಸದಲ್ಲೆ ಸಣ್ಣವಯಸ್ಸಿನ ಯಶಸ್ವಿ ಟ್ರೈನರ್ ಎನ್ನುವ ಪ್ರಶಂಸ ಪತ್ರ ಕೂಡ ಲಭಿಸಿತು. ಇದು ಆದರ್ಶ್ ಜೀವನದ ಮೊದಲ ಬಿಗೆಸ್ಟ್ ಅಚಿವ್‍ಮೆಂಟ್.

ಕುಟುಂಬದ ಸಂಸ್ಕಾರ ಪ್ರತಿಭೆಯ ಸಹಕಾರ

ಹಾನೆಸ್ಟಿ, ಹ್ಯೂಮಿಲಿಟಿ, ಮತ್ತು ಜೆನ್ಯೂನಿಟಿಯಿಂದಲೇ ಎಲ್ಲವನ್ನು ಸಾಧಿಸಬೇಕು ಅನ್ನೊ ತಾತಾನ ಮಾತು ಬೆನಕಪರವರಿಂದ ಬಂದ ಕೊಡುಗೆ. ಇಲ್ಲಿಯ ತನಕ ಕಳೆದ 7 ವರ್ಷದಲ್ಲಿ 1000 ಗಂಟೆಗಳಿಗೂ ಹೆಚ್ಚು ಟ್ರೈನಿಂಗ್ ನೀಡಿದ್ದಾರೆ. ಎಲ್ಲಾ ರೀತಿಯ ಕಾರ್ಯಕ್ರಮಗಳು ಆಗಿವೆ. ಕಾಲೇಜು, ಕಾರ್ಪೋರೇಟ್ ಕಂಪನಿಯ ಹೌಸ್ ಕೀಪಿಂಗ್‍ನಿಂದ ಹಿಡಿದು ದೊಡ್ಡ ಮ್ಯಾನೇಜ್‍ಮೆಂಟ್ ಲೆವೆಲ್ ತನಕ ಎಲ್ಲರಿಗೂ ಟ್ರೈನ್ ಮಾಡಿದ್ದಾರೆ ಆದರ್ಶ್. ಸುಮಾರು 200 ಟ್ರೈನಿಂಗ್ ಸೆಷನ್‍ಗಳನ್ನು ಮಾಡಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಸಾವಿರಾರು ಜನರಿಗೆ ಬೆಳಕಾಗಿದ್ದಾರೆ.

ಅವಮಾನ, ಅನುಮಾನ, ಸನ್ಮಾನ

"ನನ್ನ ಅಮ್ಮ ಮೆಡಿಕಲ್‍ನಲ್ಲಿ ಗೋಲ್ಡ್ ಮೆಡಲಿಸ್ಟ್. ಆ ವಯಸ್ಸ,ಲೇ ಅಷ್ಟು ದೊಡ್ಡ ಸಾಧನೆ ಮಾಡಿದ್ದವರು. ಮೊನ್ನೆ ಕೂಡ ಇಗ್ನೋ ಇಂದ ಹೊಸ ಕೋರ್ಸ್ ಮುಗಿಸಿದರು. ಆ ವಿಷಯದಲ್ಲಿ ಅಮ್ಮನ ಬಗ್ಗೆ ಹೆಮ್ಮೆ ಇದೆ. ಆದರೆ ನಾನು ಅವರ ರೀತಿಯಲ್ಲಿ ವಿದ್ಯಾಭ್ಯಾಸ ಮಾಡಲಾಗಲಿಲ್ಲ. ಅದನ್ನು ನೆನೆದರೆ ಈಗಲೂ ಕಣ್ಣಲ್ಲಿ ನೀರು ಬರುತ್ತೆ. ನಾನು ಟ್ರೈನಿಂಗ್ ಸೆಷನ್‍ನಲ್ಲಿ ಎಲ್ಲರಿಗೂ ವಿದ್ಯಾಭ್ಯಾಸದ ಮಹತ್ವ ತಿಳಿಸುತ್ತಿರುತ್ತೇನೆ" 
- ಆದರ್ಶ್

ರ್ಯಾಂಕ್ ಪಡೆಯೋದಷ್ಟೇ ಅಲ್ಲ. ಪ್ರಪಂಚದ ಜ್ಞಾನ ಇರಬೇಕು. ಆದರ್ಶ್ ದಪ್ಪಗಿರುವ ಅಪಿಯರೆನ್ಸ್ ಬಗ್ಗೆ ಎಜುಕೇಷನ್ ಬಗ್ಗೆ ಮನೆಯವರಿಂದ ಹಿಡಿದು ಎಲ್ಲ ಕಡೆಯಿಂದಲೂ ನೋವನ್ನು ಅನುಭವಿಸಿದ್ದರು. ಆ ಒತ್ತಡದಿಂದ ಹೇಗೋ ಹೊರಗೆ ಬಂದರು. ಆ ಸಮಯದಲ್ಲಿ ಅವರೊಟ್ಟಿಗೆ ಇದ್ದದ್ದು ಧೈರ್ಯ ಮಾತ್ರ.

"4 ವರ್ಷದವನಿದ್ದಾಗಲೇ ಕಂಪ್ಯೂಟರ್ ಬಗ್ಗೆ ನನಗೆ ಹುಚ್ಚು. ಆಗಷ್ಟೆ ಭಾರತದಲ್ಲಿ ತಂತ್ರಜ್ಞಾನ ಆರಂಭವಾಗಿದ್ದ ದಿನಗಳು. ಚಿಪ್ ಮ್ಯಾಜೀನ್ಸ್​ಗೆ ಟೆಕ್ನಿಕಲ್ ರಿವ್ಯೂ ಇಂಟರ್‍ವೀವ್ಯೂಗೆ ಹೋಗಿದ್ದೆ. ಇಂಟರ್ ವೀವ್ಯೂ ಮಾಡುವವರೆ ಆಶ್ಚರ್ಯ ಪಟ್ಟಿದ್ದರು. ಕಂಪ್ಯೂಟರ್ ಮ್ಯಾಗಜೀನ್‍ಗೆ ಬ್ಯಾಂಡ್ ಅಂಬಾಸಿಡರ್ ಮಾಡಿದರು ಆ ಸಮಯದಲ್ಲೇ ನನಗೆ ಹೆಚ್ಚು ಮಾರ್ಕೆಟ್ ಎಕ್ಸ್​ಪೋಷರ್ ಸಿಗಲಾರಂಭಿಸಿತು. ಬೆಂಗಳೂರು ಐಟಿ ಡಾಟ್ ಕಾಮ್ ನಲ್ಲಿ ನಾನೊಬ್ಬನೇ ಎಲ್ಲವನ್ನು ನೋಡಿಕೊಳ್ಳುತ್ತಿದ್ದೆ. ಇದೆಲ್ಲಾ ಮನೆಯಲ್ಲಿ ಬೈಗುಳ ತಡೆಯಲು ಮಾಡ್ತಿದ್ದೆ. ಆಟೋ ಮೊಬೈಲ್ ಡಿಸೈನ್, ಈವೆಂಟ್ ಮ್ಯಾನೇಜ್‍ಮೆಂಟ್, ಹಿಪ್ನೋ , ಟ್ರೈನಿಂಗ್ ಎಲ್ಲವನ್ನು ಮಾಡ್ತಿದ್ದೆ. ಎಲ್ಲವನ್ನು ಕಲಿಯಬೇಕು ಅನ್ನೋ ಕೂತುಹಲ"
- ಆದರ್ಶ್

ಯಾರಾದ್ರೂ ನನ್ನ ಏನಾದ್ರೂ ಪ್ರಶ್ನೆ ಮಾಡಿದ್ರು ಗೊತ್ತಿಲ್ಲ ಅನ್ನೋ ಲೆವೆಲ್ ಗೆ ನಾನು ಹೋಗಬಾರದು ಅನ್ನೊ ಹಠ. ಗೊತ್ತಿಲ್ಲ ಅಂದ್ರೆ ಮಾರನೇ ದಿನ ಅದರ ಬಗ್ಗೆ ರಿಸರ್ಚ್ ಮಾಡುತ್ತಿದ್ದೆ ಅಷ್ಟು ಅಪ್‍ಡೇಟೆಡ್ ಆಗಿರ್ತಿನಿ. ಅದು ನಮ್ಮ ಸಕ್ಸಸ್​​ನ ಮೂಲಮಂತ್ರ. ಅಂತ ಹುಬ್ಬೇರಿಸುತ್ತಾರೆ ಆದರ್ಶ್.

ಬ್ರೇಕ್ ಅಪ್ ಲೈಫ್‍ನ ಹೊಸ ಸ್ಟಾರ್ಟ್ ಅಪ್

ಅದು 2009 ರ ಸಮಯ ಆಗೆಲ್ಲಾ ದಿನಕ್ಕೆ 100 ಮೆಸೆಜ್‍ಗಳಿದ್ದ ಸಮಯ. ಆರ್ಕುಟ್ ಝಮಾನ. ಆಗ ಫೇಸ್‍ಬುಕ್ ಆಗಷ್ಟೆ ಶುರುವಾಗಿತ್ತು. ನನ್ನ ಸ್ಟೂಲ್‍ನ ಜೂನಿಯರ್ ಹುಡುಗಿ ರಿಕ್ವೆಸ್ಟ್ ಕಳಿಸಿ ಫ್ರೆಂಡ್ ಆದ್ಲೂ ನಂಬರ್ ಎಕ್ಸ್​ಚೇಂಜ್ ಆಯಿತು. ಜೀವನದಲ್ಲಿ ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ನಿರತನಾಗಿದ್ದ ನನಗೆ ಪ್ರೀತಿ, ಹುಡುಗಿಯರನ್ನ ಮ್ಯಾನೇಜ್ ಮಾಡೋದು ತಿಳಿದಿರಲಿಲ್ಲ. ಆದ್ರೆ ಒಳ್ಳೆ ಮನಸಿಂದಲೇ ಹುಡುಗಿಯನ್ನ ನೋಡದೇ ಅವಳು ಪ್ರಪೋಸ್ ಮಾಡಿದಾಗ ಒಪ್ಪಿಬಿಟ್ಟಿದ್ದೆ. ಸ್ನೇಹಿತರಿಗೂ ಪರಿಚಯಿಸಿದ್ದೆ. ಆಮೇಲೆ ಒಂದು ದಿನ ಭೇಟಿ ಮಾಡಿದಾಗ ಅವಳು ನಿಜವಾಗಲೂ ಸುಂದರವಾಗಿದ್ದಳು. ಆದ್ರೆ ತುಂಬಾ ದಿನ ನಮ್ಮ ಸಂಬಂಧ ಉಳಿಯಲಿಲ್ಲ. ನಾನು ದಪ್ಪ ಅನ್ನೊ ಕಾರಣಕ್ಕೆ ಅವರ ಮನೆಯಲ್ಲಿ ರಿಜೆಕ್ಷನ್ ಮಾಡ್ತಿದ್ದಾರೆ ಅಂದಳು. ನಾನು ಪಾತಾಳಕ್ಕೆ ಬಿದ್ದು ಹೋದೆ, ಏನಿದು ನನ್ನ ದೇಹವೇ ನನಗೆ ಶತ್ರುವಾಯ್ತಾ? ಅಂತಾ ಡೀಪ್ ಡಿಪ್ರೆಷನ್‍ಗೆ ಹೋರಟು ಹೋದೆ.

image


ದೇವರ ಆಶಿರ್ವಾದ ನನ್ನ ಎಲ್ಲಾ ಪೇಷೆಂಟ್ಸ್​ ಅತ್ಯಂತ ಕ್ಲಿಷ್ಟ ಸಮಸ್ಯೆಗಳಿಂದ ಪರಿಹಾರ ಪಡೆದುಕೊಂಡಿದ್ದರು. ನಿನ್ನ ನೆನೆದು ದೇವರ ಮುಂದೆ ದೀಪ ಹಚ್ತಿವಿ ಅಂದಿದ್ದರು. ಆದರೆ ಅದು ಯಾವುದು ನನ್ನ ಗಮನಕ್ಕೆ ಬರಲೇ ಇಲ್ಲ.  " ನನ್ನ ಜೀವನವನೇ ನಾನು ಸರಿ ಮಾಡಿಕೊಂಡಿಲ್ಲ ಅಂದ ಮೇಲೆ ಬೇರೆಯವರ ಜೀವನ ನಾನು ಹೇಗೆ ಸರಿ ಮಾಡ್ಲಿ? ಅಂತಾ ಎಲ್ಲವನ್ನು ನಿಲ್ಲಿಸಿಬಿಟ್ಟೆ. ಡಿಪ್ರಷನ್‍ನಿಂದ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದೆ. ಇನ್ನೊಂದೆಡೆ ದೇವರು ಕೊಟ್ಟ ಕೆಲಸ ಮಾಡಲಾಗುತ್ತಿಲ್ಲ ಅಂತಾ ಬೇಜಾರಾಯ್ತು. ಆಗಲೇ ನಾನು ಎಮ್‍ಬಿಎ ಮಾಡಿದ್ದು. ನನಗೆ ಈ ಕೆಲಸ ಗೊತ್ತಿದ್ದರಿಂದ ಬೇಗ ಹೊರ ಬಂದೆ. ನನ್ನ ಫೆಂಡ್ಸ ತುಂಬಾ ಸಹಾಯ ಮಾಡಿದ್ರು. ಅದಕ್ಕೆ ನಾನು ಎಲ್ಲೆ ಹೋದ್ರು ಒಂದು ಸಪೋರ್ಟ್ ಸಿಸ್ಟಮ್ ಮಾಡಿರ್ತೆನೆ. ಆಮೆಲೆ ನನಗೆ ಅಮ್ಮನ ಬೈಗುಳದ ಹಿಂದಿನ ನೋವು ಅರ್ಥ ಆಯ್ತು. ಆಚೆ ಎಲ್ಲರೂ ನನ್ನ ಅಮೂಲ್ ಬೇಬಿ ಅಂತ ಇಷ್ಟ ಪಟ್ರು ಅದು ನನಗೆ ಆತ್ಮ ವಿಶ್ವಸ ಕೊಡ್ತು.

ಕಮ್ಯೂನಿಕೇಷನ್ ಟ್ರೈನರ್ ಜಾಬ್ ಈಸಿ ಅಲ್ಲ

ಕಮ್ಯೂನಿಕೇಷನ್ ಟ್ರೈನಿಂಗ್‍ನಲ್ಲಿ ಎಲ್ಲರಿಗೂ ಒಳ್ಳೆಯ ಸಂಭಾವನೆ ಸಿಗೋದು ಕಷ್ಟ. ಮನೆಯಲ್ಲಿ ಬ್ಯಾಕ್ ಅಪ್ ಇದ್ರೆ ಒಳಿತು ಇಲ್ಲವಾದ್ರೆ ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ. ರಾಬಿನ್ ಶರ್ಮಾರ ಲೆವೆಲ್‍ಗೆ ರೀಚ್ ಮಾಡಬೇಕು ಅಂದ್ರೆ ನಮ್ಮದೇ ಹೊಸ ಟೆಕ್ನಿಕ್ ಕಂಡು ಹಿಡಿಯಬೇಕು. ಎಲ್ಲರೂ ನನ್ನ ಮಾತನ್ನೇ ಕೇಳಬೇಕು ಅನ್ನೋ ಧೋರಣೆ ಒಳ್ಳೆದಲ್ಲ. ಬೇರೆ ಬೇರೆ ಕೆಲಸಗಳನ್ನು ಮಾಡುತ್ತಾ ಇದನ್ನು ಮಾಡಬೇಕು ವಿನಹ ಇದನ್ನೆ ನಂಬಿ ಕೂರಬಾರದು.

ನಾನು ಒಂಟಿ ಸಲಗ

ನನಗೆ ಸಾಕಷ್ಟು ಕಷ್ಟಗಳಿದ್ದರೂ ಇನ್ಯಾರೋ ಕಷ್ಟದಲ್ಲಿರೋದನ್ನ ಹಂಚಿಕೊಂಡರೇ ಅವರಿಗೆ ಸ್ಪಂದಿಸುವ ಆರೋಗ್ಯಕರ ಮನಸ್ಥಿತಿ ಬಂದಿದ್ದು ಈ ಕೆಲಸದಿಂದ. "ಒಮ್ಮೆ ಬಿಜಾಪುರಕ್ಕೆ ಹೋಗುವಾಗ ಕಾರ್ ಆಕ್ಸಿಡೆಂಟ್ ಆಗಿತ್ತು. ಯಾರಿಗೂ ಏನು ಆಗಲಿಲ್ಲ. ಈಗಲೂ ಅದನ್ನು ನೆನೆದರೆ ಭಯ ಆಗುತ್ತೆ. ಸಾವಿಗೆ ಹತ್ತಿರ ಹೋಗಿ ಬಂದ ದಿನವದು. ನಂತರ ನನ್ನ ಫ್ರೆಂಡ್ಸ್ ಎಲ್ಲ ನನ್ನ ಬಿಟ್ಟು ಬೆಂಗಳೂರಿಗೆ ಹೋದ್ರು. ಅಂದಿನಿಂದ ನಾನು ಒಂಟಿ ಸಲಗ, ಒಬ್ಬನೇ ಮಾಡ್ತಿನಿ ಅನ್ನೋ ಧೈರ್ಯ ತೆಗೆದುಕೊಂಡೆ. ನೀವು ಡಿಪೆಂಡ್ ಆಗದೇ ಇದ್ದಾಗ, ನಿಮಗೆ ಆತ್ಮವಿಶ್ವಾಸ ಹೆಚ್ಚಾಗುತ್ತೆ. ನಿಮ್ಮ ನಿಜ ಶಕ್ತಿ ಆಚೆ ಬರುತ್ತೆ. "

ನಾನು ಪ್ರತಿದಿನ ಹೊಸ ಜನರನ್ನ ಭೇಟಿ ಮಾಡೊದಕ್ಕೆ ಇಷ್ಟಪಡ್ತಿನಿ ಆ ಮೂಲಕ ಹೊಸದನ್ನ ಕಲಿಯೋದಕ್ಕೆ ಪ್ರಯತ್ನಿಸ್ತಿನಿ. ಅದರಲ್ಲಿ ಸೋಶೀಯಲ್ ಮೀಡಿಯಾ ಕೂಡ ಪ್ರಯೋಜನಕಾರಿ. ನಾನು ಲೈಕ್ ಮಾಡೋ ಪೇಜ್‍ಗಳೆಲ್ಲ ಬಹಳ ಪ್ರಯೋಜನಕಾರಿ. ಆರ್ಗನೈಸೇಷನ್​ನ, ಸ್ಟಾರ್ಟ್ ಅಪ್ ಎಲ್ಲದರ ಬಗ್ಗೆ ಕಲಿತಿನಿ. ಎಲ್ಲರಿಂದಲೂ ಕಲಿಯೋದು ತುಂಬಾ ಇದೆ. ಜನರ ಹತ್ರ ಓಪನ್ ಆಗಿ ಮಾತಾಡಿದ್ರೆ ಅವರ ಬಗ್ಗೆ ಅವರು ತಿಳಿದಿರೋದನ್ನ ಹೇಳ್ತಾರೆ. ಇವತ್ತಿನ ತಂತ್ರಜ್ಞಾನ ನೀಟಾಗಿ ಬಳಸಿಕೊಳ್ಳಬೇಕು. ಏನನ್ನು ನೋಡಬೇಕು ಅನ್ನೊದು ತಿಳಿದಿರಬೇಕು. ಗೂಗಲ್ ನನಗೆ ಬಹಳಷ್ಟು ಸಹಾಯ ಮಾಡಿದೆ.

ಟ್ರೈನಿಂಗ್ ಖುಷಿ

ವರ್ಕ್ ಶಾಪ್ ಮಾಡುವಾಗ ತುಂಬಾ ಪ್ರಶ್ನೆಗಳು ಬಂದಿತ್ತು. ಈ ವಯಸ್ಸಿಗೆ ಇಷ್ಟು ಸಾಧನೆ ಹೇಗೆ ಸಾಧ್ಯವಾಯಿತು? ಎನರ್ಜಿ ಲೆವೆಲ್ ಹೇಗೆ ಮೆಂಟೆನ್ ಮಾಡ್ತೀರಾ? ಅಂತಾರೆ. ಎಮ್‍ಬಿಎ ಮಾಡುವಾಗ ಸ್ಟೂಡೆಂಟ್ ಆಫ್ ದಿ ಯಿಯರ್ ಟೀಂ ನಮ್ಮ ಶಾಲೆಗೆ ಬಂದಿತ್ತು. ಕರಣ್ ಜೋಹಾರ್ ಮತ್ತು ಆಲಿಯಾ ಭಟ್ ಬಂದಿದ್ದರು. ಆಗ ಈಡಿ 10.000 ಜನರನ್ನ ಹ್ಯಾಂಡಲ್ ಮಾಡಿದೆ. ನಿರೂಪಣೆ ಮತ್ತು ಚಿಟ್ ಚಾಟ್ ಮಾಡಿದೆ,

ಒಬ್ಬ ದಂಪತಿಗಳು ಡೈವೋರ್ಸ್​ ಆಗಬೇಕಿತ್ತು. ಗಂಡ ಆತ್ಮಹತ್ಯೆಗೆ ಲೆವೆಲ್​ಗೆ ಹೋಗಿದ್ರು ನನ್ನ ಕೌನ್ಸಿಲಿಂಗ್ ನಂತರ ಜೊತೆಯಾಗಿ ಬದುಕಲು ಒಪ್ಪಿದ್ರು ಮತ್ತು ಮತ್ತೆ ಈಗ ಎರಡನೇ ಮಗು ಇದೆ. ರಾಜ್ ದೀಪ್ ಸರ್ ದೇಸಾಯಿ ಅವರ ಜೊತೆ ಬೆಸ್ಟ್ ಕಮೂನಿಕೇಟ್ ಟ್ರೈನರ್ ಅವಾರ್ಡ್ ಸಿಕ್ತು. ಪಬ್ಲಿಕ್ ರಿಲೆಷನ್ ಕೌನ್ಸಿಲ್ ಆಫ್ ಇಂಡಿಯಾದಿಂದ ಚಾಣುಕ್ಯ ಅವಾರ್ಡ್, ಪ್ರಾಮಿಸಿಂಗ್ ಕಮೂನಿಕೇಟರ್ ಅವಾರ್ಡ್, ಎನ್‍ಡಿಟಿವಿಯಾ ಇಂಡಿಯಾ ಕ್ಯಾನ್‍ನಲ್ಲಿ ಕೆಲಸ ಮಾಡಿದ್ದೀನಿ, ಸಾಕಷ್ಟು ಸೆಮಿನಾರ್‍ಗಳಲ್ಲಿ ಭಾಗವಹಿಸಿದ್ದೀನಿ. ಸಿದ್ದಾರ್ಥ್ ಮತ್ತು ಶೈಲೆಶ್‍ರಿಗೆ ಧನ್ಯವಾದ. ನನ್ನ ಹಿಂದಿನ ಶಕ್ತಿ ಇವರು. ಇನ್ನು ನಾನು ಟ್ರೈನ್ ಅಪ್ ಮಾಡೋಕೆ 10 ಜನ ನನ್ನ ಅಣ್ಣ ಅಂತಾ ಫ್ರೆಂಡ್ ಆಗ್ತಾರೆ. ಆ ರೀತಿ ಇಂದು ನನ್ನ ಜೀವನ ಒಳ್ಳೆಯ ಮನಸುಗಳಿಂದ ಸಂಪದ್ಭರಿತವಾಗಿದೆ. 

ಇದನ್ನು ಓದಿ:

1. ಸೈಕಲ್​ನಲ್ಲಿ ಹಣ್ಣು ಮಾರುತ್ತಿದ್ದ ಸುರಿಂದರ್ ಸಿಂಗ್ ಕೋಟ್ಯಾಧಿಪತಿಯಾದ ಕಹಾನಿ..

2. ಸಿಂಪಾಡಿಪುರದಲ್ಲಿ "ಆಕಾರ"..! ಬೆಂಗಳೂರಿನಲ್ಲಿ "ಶ್ರುತಿ ಸಿಂಗಾರ"..!

3.ಬಿಹಾರದ "ವಿದ್ಯುತ್ ಭವನ"ದಲ್ಲಿದೆ ವಿಭಿನ್ನ ಕೆಫೆ- ತ್ಯಾಜ್ಯಗಳಿಂದಲೇ ತಯಾರಾಗಿದೆ ಕುರ್ಚಿ, ಟೇಬಲ್..!