ಸಮುದ್ರ ಸ್ವಚ್ಛಗೊಳಿಸಲು ನೆದರ್ಲೆಂಡ್ ಯುವಕನ ಹೊಸ ಅನ್ವೇಷಣೆ

ಟೀಮ್​ ವೈ.ಎಸ್​. ಕನ್ನಡ

ಸಮುದ್ರ ಸ್ವಚ್ಛಗೊಳಿಸಲು ನೆದರ್ಲೆಂಡ್ ಯುವಕನ ಹೊಸ ಅನ್ವೇಷಣೆ

Monday October 24, 2016,

2 min Read

ಪ್ಲಾಸ್ಟಿಕ್ ಬಗ್ಗೆ ಇಡೀ ವಿಶ್ವವೇ ತಿರುಗಿ ಬಿದ್ದಿದೆ. ವಿಶ್ವದ ಹಲವು ದೇಶಗಳು ಪ್ಲಾಸ್ಟಿಕ್ ಅನ್ನು ನಿಷೇಧಿಸಿವೆ. ಮತ್ತಷ್ಟು ದೇಶಗಳು ಇನ್ನು ಕೆಲವೇ ಕೆಲವು ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆಗೆ ಗುಡ್ ಬೈ ಹೇಳಲಿವೆ. ವಿವಿಧ ಸಂಘಟನೆಗಳು, ವ್ಯಕ್ತಿಗಳು ಪ್ಲಾಸ್ಟಿಕ್ ವಿರುದ್ಧ ಆಂಧೋಲನ ಮಾಡುತ್ತಾ ಇದ್ದಾರೆ.

image


ಒಂದು ಅಂದಾಜಿನ ಪ್ರಕಾರ ವಿಶ್ವದಲ್ಲಿ ಸುಮಾರು 500 ಬಿಲಿಯನ್​ನಿಂದ 1 ಟ್ರಿಲಿಯನ್ ತನಕ ಪ್ಲಾಸ್ಟಿಕ್ ಬ್ಯಾಗ್​ಗಳನ್ನು ಪ್ರತೀವರ್ಷ ಬಳಕೆ ಮಾಡಲಾಗುತ್ತದೆ. ಆದ್ರೆ ಈ ಪ್ಲಾಸ್ಟಿಕ್​ನಿಂದ ಹಲವು ಪ್ರಾಣಿಗಳು ಪ್ರಾಣಗಳನ್ನು ಕಳೆದುಕೊಂಡಿವೆ. ವರ್ಲ್ಡ್ ವೈಲ್ಡ್​ ಫಂಡ್ ಫಾರ್ ನೇಚರ್ ವರದಿ ಪ್ರಕಾರ ಸುಮಾರು 1 ಲಕ್ಷಕ್ಕೂ ಅಧಿಕ ವೇಲ್, ಸೀಲ್, ಆಮೆಗಳಂತಹ ಜಲಚರಗಳು ಪ್ಲಾಸ್ಟಿಕ್ ಸೇವನೆಯಿಂದ ಪ್ರತೀವರ್ಷ ಜೀವ ಕಳೆದುಕೊಳ್ಳುತ್ತಿವೆ. ಸಮುದ್ರದಲ್ಲಿ ಈಗಾಗಲೇ 100 ಮಿಲಿಯನ್ ಟನ್​ಗಿಂತಲೂ ಹೆಚ್ಚು ಪ್ಲಾಸ್ಟಿಕ್ ಸಂಗ್ರಹವಾಗಿದೆ. ಅಷ್ಟೇ ಅಲ್ಲ ಪ್ರತೀವರ್ಷ ಕಳೆದಂತೆ ಸಮುದ್ರಕ್ಕೆ ಸೇರುವ ಪ್ಲಾಸ್ಟಿಕ್​ಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಸಮುದ್ರದಲ್ಲಿ ಪ್ಲಾಸ್ಟಿಕ್​ನಿಂದ ಉಂಟಾಗುತ್ತಿರುವ ಮಲಿನವನ್ನು ತಡೆಗಟ್ಟಲು, ನೆದರ್ಲೆಂಡ್​ನ 22 ವರ್ಷದ ಉದ್ಯಮಿ ಮತ್ತು ಅನ್ವೇಷಕ ಬೊಯನ್ ಸ್ಲಾಟ್ ಹೊಸ ಪ್ರಾಜೆಕ್ಟ್ ಅನ್ನು ಆರಂಭಿಸಿದ್ದಾರೆ. ಗ್ರೇಟ್ ಫೆಸಿಫಿಕ್ ಭಾಗದಲ್ಲಿ ಮುಂದಿನ ದಶಕದ ಒಳಗೆ ಸಮುದ್ರವನ್ನು ಸ್ವಚ್ಛಗೊಳಿಸುವ ಬಗ್ಗೆ ಯೋಜನೆ ರೂಪುಗೊಂಡಿದೆ. ಈ ಯುವಕ ಮಾಡಿರುವ ಯೋಜನೆ ಕಾರ್ಯಸಾಧ್ಯವಾಗಲಿದೆ ಮತ್ತು ಇದರಲ್ಲಿ ಯಶಸ್ಸು ಕಾಣುವುದು ಖಚಿತ ಎಂದು ಹೇಳಲಾಗುತ್ತದೆ.

ಇದನ್ನು ಓದಿ: ಬೆಂಗಳೂರಿಗೆ ಸ್ಟೀಲ್ ಫ್ಲೈ ಓವರ್ ಕನಸು- ಪರ, ವಿರೋಧಗಳ ನಡುವೆ ನಡೆಯುತ್ತಿದೆ ಲೆಕ್ಕಾಚಾರದ ಚರ್ಚೆ..!

ಬೊಯನ್ ಸ್ಲಾಟ್ ಯೋಜನೆಯಂತೆ ಸಮುದ್ರದ ಅಲೆಗಳ ಮೂಲಕ ಹುಟ್ಟಿಕೊಳ್ಳುವ ಶಕ್ತಿ ಮತ್ತು ಗಾಳಿಯ ಮೂಲಕ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೊರ ತೆಗೆಯುವ ಬಗ್ಗೆ ಯೋಜನೆಗಳನ್ನು ರೂಪಿಸಲಾಗಿದೆ. ಈ ಸೂತ್ರದಂತೆ ಸಮುದ್ರದ ಕೆಳಗೆ ಅಥವಾ ಬೇರೆ ಯಾವುದಾದರೂ ಸ್ಥಿತಿಯಲ್ಲಿರುವ ಪ್ಲಾಸ್ಟಿಕ್ ಅಂಶಗಳನ್ನು ತೆಗೆದು ಸಮುದ್ರವನ್ನು ಸ್ವಚ್ಛ ಮಾಡಲಾಗುತ್ತದೆ. ಈ ವಿಧಾನದಲ್ಲಿ ನಡೆಯುವ ಕ್ಲೀನಿಂಗ್ ಪ್ರಕ್ರಿಯೆಯಲ್ಲಿ ಯಾವುದೇ ಜಲಚರಗಳಿಗೆ ಹಾನಿ ಆಗದಂತೆ ನೋಡಿಕೊಳ್ಳಲಾಗುತ್ತದೆ. ಬೊಯನ್ ಈಗಾಗಲೇ ನೆದರ್ಲೆಂಡ್​ನ ಉತ್ತರ ಭಾಗದ ಸಮುದ್ರಗಳಲ್ಲಿ 100 ಮೀಟರ್ ಆಳದ ತನಕ ಕ್ಲೀನಿಂಗ್ ಕಾರ್ಯವನ್ನು ಪ್ರಾಯೋಗಿಕವಾಗಿ ಆರಂಭಿಸಿದ್ದರು. ಇದಕ್ಕೆ Boomy McBoomface ಅನ್ನೂ ಹೆಸರು ಕೂಡ ಇಟ್ಟಿದ್ದಾರೆ.

ಈಗಾಗಲೇ ಬೊಯನ್ ಗ್ರೇಟ್ ಫೆಸಿಫಿಕ್ ಸಮುದ್ರದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಅಷ್ಟೇ ಅಲ್ಲ 2017ರ ಹೊತ್ತಿನಲ್ಲಿ ಸಮುದ್ರವನ್ನು ಸ್ವಚ್ಛಗೊಳಿಸುವ ಬಗ್ಗೆ ಯೋಜನೆ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಪ್ಲಾಸ್ಟಿಕ್​ನಿಂದ ಸಮುದ್ರವನ್ನು ಸ್ವಚ್ಛಗೊಳಿಸುವ ಯೋಜನೆ ನೆದರ್ಲೆಂಡ್​ನ ಈ ಯುವಕನನ್ನು ಎಲ್ಲರಿಗಿಂತ ವಿಭಿನ್ನವಾಗಿ ನಿಲ್ಲಿಸಿದೆ.

ಇದನ್ನು ಓದಿ:

1. ನನಸಾಯ್ತು ಉದ್ಯಮದ 'ಹೂ' ಕನಸು : ಕಾಶ್ಮೀರದ ಸಾಹಸಿ ಮಹಿಳೆಯ ಯಶೋಗಾಥೆ

2. ಹೊಸ ವರ್ಷ ಬೊಜ್ಜಿನಿಂದ ಮುಕ್ತಿ ಹೊಂದಬೇಕಾ? ಋತು ರಾಣಿ ಕೊಡ್ತಾರೆ ಟಿಪ್ಸ್

3. ಭಾಗ್ಯದ ಲಕ್ಷ್ಮೀಗೆ ಭಕ್ತಿಯ ನಮನ- ವರ್ಷವಿಡೀ ಕಾಪಾಡು ನಮ್ಮನ್ನ