ವಾಸು ದೀಕ್ಷಿತರ "ರಾಗಿ ರಾಕ್ಸ್"..!

ಟೀಮ್​ ವೈ.ಎಸ್​. ಕನ್ನಡ

ವಾಸು ದೀಕ್ಷಿತರ "ರಾಗಿ ರಾಕ್ಸ್"..!

Wednesday March 15, 2017,

2 min Read

ಕರ್ನಾಟಕದಲ್ಲಿ ಕನ್ನಡವನ್ನು ಉಳಿಸಿಕೊಳ್ಳಲು ಹೋರಾಡಾಬೇಕಾದ ಸ್ಥಿರಿ ಎದುರಾಗಿರೋದು ನಿಜಕ್ಕೂ ಬೇಸರದ ವಿಷಯ. ಇತ್ತೀಚಿನ ದಿನಗಳಲ್ಲಿ ನಮ್ಮ ನಾಡು, ನುಡಿ ಮತ್ತು ಅದರ ರಕ್ಷಣೆಗಾಗಿ ಎಲ್ಲಾ ಕಾರ್ಯಗಳು ನಡೆಯುತ್ತಿದೆ. ಕನ್ನಡಪರ ಸಂಘಟನೆಗಳು, ಎನ್​ಜಿಒಗಳು ಮತ್ತು ಇತರೆ ಕನ್ನಡ ಹೋರಾಟಗಾರರು ಕರ್ನಾಟಕದ ಸಂಸ್ಕೃತಿ ಮತ್ತು ಕನ್ನಡವನ್ನು ಉಳಿಸಿಕೊಳ್ಳು ಹೋರಾಟ ಮಾಡುತ್ತಿದ್ದಾರೆ. ಆದ್ರೆ ಈಗ ಆ ಲಿಸ್ಟ್​ಗೆ ಮತ್ತೊಬ್ಬರ ಸೇರ್ಪಡೆಯಾಗಿದೆ.

image


ಗಾಯಕ ರಘುದೀಕ್ಷಿತ್ ಕನ್ನಡವನ್ನು ತಮ್ಮ ಸಂಗೀತದ ಮೂಲಕ ದೇಶ ವಿದೇಶಗಳಲ್ಲಿ ಹಂಚುತ್ತಿದ್ದರೆ ಅವರ ಸಹೋದರ ವಾಸು ದೀಕ್ಷೀತ್ ಅವರು, ನಮ್ಮ ದೇಶದಲ್ಲೇ ಇರುವ ಕನ್ನಡೇತರರಿಗೆ ಕನ್ನಡ ಕಲಿಸಲು ಪುರಂದರ ದಾಸರ "ರಾಗಿ ತಂದೀರ" ಹಾಡನ್ನು ಹಾಡುತ್ತಾ ಈಗ ಫೇಮಸ್ ಆಗಿದ್ದಾರೆ.

ಇದನ್ನು ಓದಿ: ಟ್ರೇಲರ್​ನಲ್ಲೇ ಅಡಗಿದೆ ಎಲ್ಲಾ ರಹಸ್ಯಗಳು..

ವಾಸು ದೀಕ್ಷಿತ್, ತಮ್ಮ ಹಾಡುಗಳ ಮೂಲಕ ಈಗಾಗಲೇ ಒಳ್ಳೆ ಹೆಸರು ಮಾಡಿದ್ದಾರೆ. ಈಗ "ಫೋಕ್ ರಾಕ್" ಮೂಲಕ ಸಾಕಷ್ಟು ಯುವಕರ ಮನಸ್ಸು ಕದಿಯುತ್ತಿದ್ದಾರೆ. ವಾಸು ದೀಕ್ಷಿತ್​​, ತಮ್ಮದೇ ವಿಶಿಷ್ಟ ಶೈಲಿಯ ಗಾಯನದ ಮೂಲಕ ಬಹುಭಾಷಿಗರ ಗಮನವನ್ನೂ ಸೆಳೆಯುತ್ತಿದ್ದು, ಕನ್ನಡೇತರರಿಗೂ ತಮ್ಮ ಗಾಯನದ ಮೂಲಕ ಕನ್ನಡ ಕಲಿಸಲು ಹೊರಟಿದ್ದಾರೆ. ಇತ್ತೀಚೆಗೆ ಅವರ ಕಂಠದಲ್ಲಿ ಹೊರ ಹೊಮ್ಮಿದ್ದ ‘ರಾಗಿ ತಂದೀರ...’ ಹಾಡು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಈ ಮೂಲಕ ಸಾಕಷ್ಟು ಕನ್ನಡದ ಯುವಕರು ವಾಸು ಅವರ ಹಾಡನ್ನು ಕೇಳುವ, ಹಾಡಿನಲ್ಲಿರುವ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮತ್ತು ಕನ್ನಡ ಬಾರದವರು ಕನ್ನಡವನ್ನು ಕಲಿಯಲು ಆಸಕ್ತಿ ತೋರುವಂತೆ ಮಾಡಿದ್ದಾರೆ.

image


" ಸಂಗೀತದ ಮೂಲಕ ಕನ್ನಡ ಕಲಿಕೆಗೆ ಅನುಕೂಲವಾಗುತ್ತಿದೆ. ಅಲ್ಲದೇ ಸಾಕಷ್ಟು ಮಂದಿ ಅದನ್ನು ಇಷ್ಟಪಡುತ್ತಿದ್ದಾರೆ. ಹಾಡುಗಳ ಮೂಲಕ ಒಂದಷ್ಟು ಹೊಸ ಪದಗಳನ್ನು ಕನ್ನಡೇತರರಿಗೆ ಅರ್ಥ ಮಾಡಿಸಲು ಸಾಧ್ಯವಾಗುತ್ತದೆ. ಅಲ್ಲದೆ ಸಾಕಷ್ಟು ಬಾರಿ ಹೊಸಬರು ಕವನ ಬರೆದು ಕಳುಹಿಸಿದಾಗ ಅದಕ್ಕೂ ಸಂಗೀತ ಸಂಯೋಜಿಸಿ ಹಾಡಿದ್ದೇನೆ. ಒಟ್ಟಿನಲ್ಲಿ ಕನ್ನಡ ಸಂಸ್ಕೃತಿ ಎಲ್ಲಡೆ ಪಸರಿಸಬೇಕು ಎಂಬುದು ನನ್ನ ಅಭಿಲಾಷೆ"
- ವಾಸು ದೀಕ್ಷೀತ್, ಗಾಯಕ

ಸಂಗೀತಕ್ಕೆ ಭಾಷೆಯ ಹಂಗಿಲ್ಲ. ಅದು ಕಿವಿಗೆ ಬಿದ್ದಾಗ ಆಗುವ ಅನುಭವವೇ ಬೇರೆ ಸಂಗೀತದ ಶಕ್ತಿ ಎಷ್ಟಿದೆ ಎಂದರೆ ಆ ಹಾಡು ಯಾವ ಭಾಷೆಯಲ್ಲಿದಿಯೋ ಅದನ್ನು ಕಲಿಯಬೇಕು ಎಂಬಂತಹ ಹುಚ್ಚನ್ನು ಅದು ಹತ್ತಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನ ವಿಕೇಂಡ್ ಟ್ರೆಂಡ್ ಕನ್ನಡ ಕಲಿಕೆಗೆ ಶಿಫ್ಟ್ ಆಗಿದೆ. ಕಲಿಯಲು ಬಂದರೆ ಕಲಿಸಲು ಸಹ ನಮ್ಮಲ್ಲಿ ಬಹಳಷ್ಟು ಮಂದಿಯಿದ್ದಾರೆ. ಕನ್ನಡ ಕಲಿಯಲು ಇತ್ತೀಚೆಗೆ ಬೇರೆ ಬೇರೆ ಮಾರ್ಗಗಳನ್ನು ಕೆಲವರು ಅನುಸರಿಸುತ್ತಿದ್ದಾರೆ. ಅದರಲ್ಲಿ ಸಂಗೀತವೂ ಸಹ ಒಂದು. ಕನ್ನಡದ ಹಾಡುಗಳು ಭಾಷೆ ಕಲಿಕೆಗೆ ಪ್ರೇರಣೆ ನೀಡಿವೆ.

ಕನ್ನಡ ಕಲಿಸುವ ಸಂಸ್ಥೆಗಳೊಂದಿಗೆ ಜತೆ

ವಾಸು ಕನ್ನಡ ಕಲಿಸಲು ಆಯ್ಕೆ ಮಾಡಿಕೊಂಡಿದ್ದು ಬೆಂಗಳೂರಿನ ವಾರಾಂತ್ಯದಲ್ಲಿ ಕನ್ನಡವನ್ನು ಕಲಿಸುವ ತರಗತಿಗಳನ್ನು. ಅಂತಹ ಸಂಸ್ಥೆಗಳ ಜತೆ ಸೇರಿಕೊಂಡು ಒಂದಷ್ಟು ಜಾಗಗಳನ್ನು ಆಯ್ದುಕೊಳ್ಳುತ್ತಾರೆ. ತಾವೇ ಅಲ್ಲಿಗೆ ಹೋಗಿ ಅಲ್ಲಿ ಸೇರುವ ಎಲ್ಲರಿಗೂ ಕನ್ನಡ ಮತ್ತು ಇಂಗ್ಲೀಷ್​ನಲ್ಲಿ ಹಾಡನ್ನು ಬರೆದುಕೊಟ್ಟು ಹಾಡುತ್ತಾರೆ. ಜತೆಗೆ ಅವರನ್ನು ಹಾಡಲು ಪ್ರೇರೇಪಿಸುತ್ತಾರೆ. ಈ ಹಾಡುವ ಮತ್ತು ಕಲಿಕಾ ಸಮಯದ ವೇಳೆ ಬಹತೇಕರು ಆಯ್ಕೆ ಮಾಡಿಕೊಳ್ಳುವುದು ಬಸವಣ್ಣನವರ ವಚನಗಳು, ದಾಸರ ಪದ, ಹೀಗೆ ಜೀವನ ವೌಲ್ಯಗಳನ್ನು ಸಾರುವ ಹಾಡುಗಳನ್ನೇ. ಕನ್ನಡವನ್ನು ಕಲಿಸುವ ಜತೆಗೆ ಜೀವನ ವೌಲ್ಯವನ್ನು ಸಹ ಅವರು ಎಲ್ಲಡೆ ಹಂಚುವ ಕೆಲಸ ಮಾಡುತ್ತಿದ್ದಾರೆ.

image


ಬಿಎಂಟಿಸಿಯಲ್ಲಿ ಕನ್ನಡ ಅಭಿಯಾನ

ವಾಸು ದೀಕ್ಷಿತ್ ಇತ್ತೀಚೆಗೆ ಬಿಎಂಟಿಸಿ ಬಸ್​ನಲ್ಲಿ "ರಾಗಿ ತಂದೀರಾ" ಹಾಡನ್ನು ಹಾಡುವ ಮೂಲಕ ಒಂದು ರೀತಿಯ ಸಂಚಲನ ಮೂಡಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿತ್ತು, ಬಸ್​​ಗಳು, ಫುಡ್ ಅಡ್ಡಾ ಇಂತಹ ಕಡೆಗಳಲ್ಲಿ ಕನ್ನಡೇತರರು ಹೆಚ್ಚಾಗಿರುತ್ತಾರೆ. ಅಲ್ಲೆಲ್ಲಾ ಕನ್ನಡ ಹಾಡುಗಳನ್ನು ಹಾಡುವ ಮೂಲಕ ಸಾಕಷ್ಟು ಅನ್ಯ ಭಾಷಿಕರನ್ನು ತಲುಪುವ ಸಾಹಸವನ್ನು ವಾಸು ದೀಕ್ಷಿತ್​ ಮಾಡುತ್ತಿದ್ದಾರೆ. ಇನ್ನು ವಾಸು ದೀಕ್ಷಿತ್ ‘ಸ್ವರಾತ್ಮ’ ಎಂಬ ತಮ್ಮದೇ ಆದ ಬ್ಯಾಂಡ್​ನ್ನು ಕಟ್ಟಿಕೊಂಡಿದ್ದಾರೆ. ಈ ಬ್ಯಾಂಡ್ ಮೂಲಕ ಸಾಕಷ್ಟು ವರ್ಷಗಳಿಂದ ಪ್ರಪಂಚದಾದ್ಯಂತ ಸಂಗೀತ ಪ್ರೇಮಿಗಳನ್ನು ರಂಜಿಸಿ ಸಾಮಾಜಿಕ ಕೆಲಸಗಳಲ್ಲೂ ತೊಡಗಿಸಿಕೊಂಡಿದೆ.

ಇದನ್ನು ಓದಿ:

1. ಹೈ-ವೇನಲ್ಲೇ ಡಾಬಾಕ್ಕೆ ಹೋಗಬೇಕಿಲ್ಲ- ಸಿಟಿಗೂ ಎಂಟ್ರಿಯಾಗಿದೆ..! 

2. ಗಾನ ನೃತ್ಯದ "ಆರಾಧನ" ಅಪರ್ಣಾ 

3. ಕೆನಾಡ ಬಿಟ್ಟು ಬಂದ ಆ ಹುಡುಗ ಮನೆ ಮನೆಯಲ್ಲೂ ಹಸಿರು ತಂದ!