ಕ್ಯಾಬ್​ ಸೇವೆಗಳಲ್ಲಿ ಬಿಗ್​ ಫೈಟ್​-OLAಕ್ಕೆ ಅಗ್ರಪಟ್ಟದ ತವಕ- ಉಬರ್​ಗೆ ಸವಾಲು ಎದುರಿಸುವುದೇ ಕಾಯಕ

ಟೀಮ್​ ವೈ.ಎಸ್​. ಕನ್ನಡ

0

“ಭಾರತ ವಿಭಿನ್ನತೆಯಲ್ಲಿ ಏಕತೆಯನ್ನು ಹೊಂದಿರುವ ರಾಷ್ಟ್ರ. ಇಲ್ಲಿ ಒಂದಕ್ಕಿಂತ ಒಂದು ವಿಭಿನ್ನ. ಊಟ ತಿಂಡಿಯ ವಿಚಾರದಿಂದ ಹಿಡಿದು ಉಡುಗೆ ತೊಡುಗೆ ತನಕ ಎಲ್ಲವೂ ಬೇರೆ ಬೇರೆಯಾಗಿ ಕಾಣುತ್ತದೆ. ಹವಾಮಾನ ಕೂಡ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋದಾಗ ಭಿನ್ನವಾಗಿ ಕಾಣುತ್ತದೆ. ಅಷ್ಟೇ ಏಕೆ ಕುಡಿಯುವ ಟೀ, ಕಾಫಿಗಳ ಟೇಸ್ಟ್ ಕೂಡ ಪ್ರತೀ 100 ಕಿಲೋಮೀಟರ್​ಗೊಮ್ಮೆ ಬದಲಾಗಿರುತ್ತದೆ. ಇಬ್ಬರು ವ್ಯಕ್ತಿಗಳು ಒಂದೇತರವಿದ್ರೂ, ಅವ್ರ ಆಸಕ್ತಿ, ಅಭಿರುಚಿ ಮತ್ತು ಹವ್ಯಾಸಗಳು ವಿಭಿನ್ನವಾಗಿರುತ್ತದೆ. ಹೀಗಿರುವಾಗ ಪ್ರಯಾಣದ ವಿಚಾರದಲ್ಲಿ ಅವರನ್ನು ಕಟ್ಟಿ ಹಾಕೋದಿಕ್ಕೆ ಸಾಧ್ಯವೇ..?” ಹೀಗಂತ ಹೇಳಿಕೊಂಡು ಮಾತು ಆರಂಭಿಸಿದ್ದು, ಒಲಾ(OLA) ಕೆಟಗರಿ ಹೆಡ್ ಮತ್ತು ಚೀಫ್ ಮಾರ್ಕೆಟಿಂಗ್ ಆಫೀಸರ್ ಆಗಿರುವ ರಘುವೇಶ್ ಸರುಪ್. ಬೆಂಗಳೂರಿನಲ್ಲಿರುವ ಮೂರು ಅಂತಸ್ತಿನ OLA ಓಲಾ ಕಚೇರಿಯಲ್ಲಿ ಕುಳಿತು ಯುವರ್ ಸ್ಟೋರಿ ಜೊತೆಗೆ ಮನಬಿಚ್ಚು ಮಾತನಾಡಿದ್ರು.

OLA ಮತ್ತು ಉಬರ್ ದೇಶದಲ್ಲಿ ಕ್ಯಾಬ್ ಸೇವೆಯನ್ನು ಒದಗಿಸುತ್ತಿರುವ ಪ್ರತಿಷ್ಠಿತ ಸಂಸ್ಥೆಗಳು. ಕ್ಷಣಕ್ಷಣಕ್ಕೂ ಈ ಎರಡೂ ಕಂಪನಿಗಳ ನಡುವೆ ಪೈಪೋಟಿ ಹೆಚ್ಚುತ್ತಿದೆ. ಇತ್ತೀಚೆಗೆ ಉಬರ್ ದಿದಿ ಜೊತೆಗೆ ಡೀಲ್ ಮುಗಿಸಿಕೊಂಡು OLAಕ್ಕೆ ಸೆಡ್ಡು ಹೊಡೆದಿದೆ. OLAದ ಭವಿಷ್ಯವೇನು ಅಂತ ಹಲವರು ಪ್ರಶ್ನೆಗಳು ಇಟ್ಟಿದ್ದಾರೆ. ಆದ್ರೆ ಮಾತಿನಲ್ಲಿ OLA ಉತ್ತರಿಸುವುದಿಲ್ಲ. ಬದಲಾಗಿ ಕೋಟಿ ಕೋಟಿ ಭಾರತೀಯರನ್ನು ಮನ ಗೆಲ್ಲಲು ಏನು ಮಾಡಬೇಕು ಅನ್ನುವ ಬಗ್ಗೆ ಹೆಜ್ಜೆ ಇಟ್ಟಿದೆ.

ಮಾರ್ಕೆಟ್​ನಲ್ಲಿ OLAದ್ದೇ ಸಿಂಹಪಾಲು

ಕ್ಯಾಬ್ ಸೇವೆಯಲ್ಲಿ OLA ಉಬರ್​ಗಿಂತ ಸಾಕಷ್ಟು ಮುಂದಿದೆ ಅಂತ ಹೇಳಲಾಗುತ್ತಿದೆ. ಸುಮಾರು ಶೇಕಡಾ 75 ರಷ್ಟು ಕ್ಯಾಬ್ ಸೇವೆಯ ಮಾರ್ಕೆಟ್​ನ್ನು OLA ಹೊಂದಿದೆ. OLA ಮಿನಿ, ಮೈಕ್ರೋ, ಪ್ರೈಮ್, ಶೇರ್, ಶಟಲ್, ಆಟೋ, ಲಕ್ಸ್, ರೆಂಟಲ್ಸ್ ಮತ್ತು ಔಟ್ ಸ್ಟೇಷನ್ ಎಂದು 9 ವಿಭಾಗಗಳಲ್ಲಿ ಕ್ಯಾಬ್ ಸೇವೆಯನ್ನು ಒದಗಿಸುತ್ತಿದೆ.

ಭಾರತದಲ್ಲಿ ಕೇವಲ ಶೆಕಡಾ 2ರಷ್ಟು ಜನ ಮಾತ್ರ ಫೋರ್ ವ್ಹೀಲ್ ಟ್ರಾನ್ಸ್​ಪೋರ್ಟ್ ಮತ್ತು ಕ್ಯಾಬ್ ಸೇವೆಯನ್ನು ಮೆಚ್ಚಿಕೊಂಡಿದ್ದಾರೆ. ಶೆಕಡಾ 98 ರಷ್ಟು ಜನ ಇನ್ನೂ ಕೂಡ ಈ ಬಗ್ಗೆ ಕ್ಯಾಬ್ ಸೇವೆ ಬಗ್ಗೆ ತಿಳಿದುಕೊಂಡಿಲ್ಲ. ಆದ್ರೆ OLA ಇದರಲ್ಲಿಯೇ ಯಶಸ್ಸು ಕಾಣುತ್ತಿದೆ. ಭವಿಷ್ಯದಲ್ಲಿ 100ಕ್ಕೆ 100ರಷ್ಟು ಜನರನ್ನು ತನ್ನತ್ತ ಸೆಳೆಯುವ ಬಗ್ಗೆ ಪ್ಲಾನ್​ಗಳನ್ನು ರೂಪಿಸಿಕೊಂಡಿದೆ.

“ ನಾವು ಯಾವುದನ್ನೂ ಕೂಡ ಅಸ್ತವ್ಯವಸ್ತಗೊಳಿಸುತ್ತಿಲ್ಲ. ನಾವು ಹೊಸ ಪ್ರಯತ್ನವನ್ನು ಮಾಡುತ್ತಿದ್ದೇವೆ. ಇದು ಒಂದರಿಂದ ಮತ್ತೊಂದರ ಕಡೆಗೆ ಬೇಡಿಕೆ ಹೆಚ್ಚುವಂತೆ ಮಾಡುವ ಕೆಲಸ. ನಾವು ಇದನ್ನು ಆರಂಭಿಸಿದ್ದೇವೆ. ಭಾರತದಲ್ಲಿ ಜನ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣ ಮಾಡಲು ಪಡುವ ಕಷ್ಟ ಕಡಿಮೆ ಇಲ್ಲ. ಕ್ಯಾಬ್ ಸೇವೆಗೆ ಬೇಡಿಕೆ ಇರುವುದು ಪ್ರಮುಖ ನಗರಗಳಲ್ಲಿ ಮಾತ್ರ. ಆದ್ರೆ OLA ಭಾರತದ 102 ನಗರಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇದರಲ್ಲೂ ಅಗ್ರ 6 ಮೆಟ್ರೋ ನಗರಗಳಲ್ಲಿ ಕ್ಯಾಬ್ ಸೇವೆಗೆ ಬೇಡಿಕೆ ಹೆಚ್ಚೇ ಇದೆ. ”
-  ರಘುವೇಶ್ ಸರುಪ್, OLA ಕೆಟಗರಿ ಹೆಡ್ ಮತ್ತು ಚೀಫ್ ಮಾರ್ಕೆಟಿಂಗ್ ಆಫೀಸರ್

2015ರಲ್ಲಿ OLA 1.3 ಬಿಲಿಯನ್ ಡಾಲರ್ ವಹಿವಾಟು ನಡೆಸಿ, ಕಂಪನಿ ಮೂರು ಪಟ್ಟು ಅಭಿವೃದ್ಧಿ ಆಗಿದೆ ಅಂತ ಘೋಷಿಸಿತ್ತು. ಆದ್ರೆ ಕಂಪನಿ ಫೈಲ್ ಮಾಡಿರುವ Roc ಡಾಟಾ ಪ್ರಕಾರ ಕಳೆದ ವರ್ಷ OLA ಸುಮಾರು 796 ಕೋಟಿ ರೂಪಾಯಿಗಳ ನಷ್ಟ ಅನುಭವಿಸಿದೆ. ಈ ಹಿನ್ನಡೆಯ ಹೊರತಾಗಿಯೂ OLA ಉತ್ತಮ ಭವಿಷ್ಯದ ಕನಸು ಕಾಣುತ್ತಿದೆ. OLA ಕೆಟಗರಿಯಲ್ಲಿರುವ ಮೈಕ್ರೋ ಕ್ಯಾಬ್ ಸೇವೆ ಒಂದೇ ಉಳಿದ ಕ್ಯಾಬ್ ಸೇವೆಗಳನ್ನು ಹಿಂದಿಕ್ಕುವ ಸಾಮರ್ಥ್ಯ ಹೊಂದಿದೆ ಅನ್ನುವುದು ರಘುವೇಶ್ ವಿಶ್ವಾಸದ ಮಾತು.

ರಘುವೇಶ್​ಗೆ  ಹೊಸ ಕೆಟಗರಿಯನ್ನು ಮಾರ್ಕೆಟ್​ಗೆ ಪರಿಚಯಿಸುವುದು ಹೊಸ ವಿಚಾರವೇನಲ್ಲ. ನೋಕಿಯಾ ಕಳೆದ ವರ್ಷ 43 ಪ್ರಾಡಕ್ಟ್​ಗಳನ್ನು ಲಾಂಚ್ ಮಾಡಿತ್ತು. ಆದ್ರೆ ರಘುವೇಶ್ ಪ್ರಕಾರ ವ್ಯಕ್ತಿಗಳ ಆಯ್ಕೆ ವಿಭಿನ್ನವಾಗಿರುತ್ತದೆ ಮತ್ತು ಅವರಿಗೆ ಆಯ್ಕೆಗಳನ್ನು ಕೊಡಬೇಕಾಗುತ್ತದೆ. OLA ಪ್ರಯಾಣಿಕರಿಗೆ 9 ಆಯ್ಕೆಗಳನ್ನು ಕೊಟ್ಟರೆ, ಪ್ರತಿಸ್ಪರ್ಧಿ ಉಬರ್ ಪ್ರಯಾಣಿಕರಿಗೆ 4 ಆಯ್ಕೆಗಳನ್ನು ನೀಡಿದೆ.

“ಪ್ರತಿಯೊಬ್ಬ ವ್ಯಕ್ತಿಯ ಆಯ್ಕೆಗಳು ಕೂಡ ವಿಭಿನ್ನವಾಗಿರುತ್ತದೆ. ಡ್ರೈವರ್​ಗಳಿಂದ ಹಿಡಿದು ಸಮಯದ ತನಕ ಎಲ್ಲವೂ ವಿಭಿನ್ನ. ಭಾರತೀಯ ಗ್ರಾಹಕರು ವಿಭಿನ್ನ ಆಯ್ಕೆಗಳನ್ನು ಬಯಸುತ್ತಾರೆ. ರೆಂಟಲ್​ಗಳಿಗೆ ಇತ್ತೀಚಿನ ದಿನಗಳಲ್ಲಿ ಭಾರಿ ಬೇಡಿಕೆ ಇದೆ. ಹೀಗಾಗಿ OLA ರೆಂಟಲ್ಸ್ ಅನ್ನು ಲಾಂಚ್ ಮಾಡಿದ್ದೇವೆ. ”
-  ರಘುವೇಶ್ ಸರುಪ್, OLA ಕೆಟಗರಿ ಹೆಡ್ ಮತ್ತು ಚೀಫ್ ಮಾರ್ಕೆಟಿಂಗ್ ಆಫೀಸರ್

OLA ರೆಂಟಲ್ ಮೂಲಕ ಬಾಡಿಗೆ ಕಾರನ್ನು ಪಡೆಯುವ ಸೌಲಭ್ಯ ಪ್ರಯಾಣಿಕರಿಗೆ ಸಿಗಲಿದೆ. OLAದ ಉಳಿದ ಆಯ್ಕೆಗಳಲ್ಲಿ ಡ್ರೈವರ್ ಪಿಕ್ ಅಪ್ ಮಾಡಿ ಡ್ರಾಪ್ ಮಾಡಿ ಹೋಗುತ್ತಾನೆ. ಮತ್ತೆ ವಾಪಾಸ್ ಬರಬೇಕಾದರೆ ಮತ್ತೊಂದು ಕ್ಯಾಬ್ ಬುಕ್ ಮಾಡಬೇಕಿತ್ತು. ಆದ್ರೆ OLA ರೆಂಟಲ್ಸ್​​ನಲ್ಲಿ ಒಂದೇ ಕಾರು ಬುಕ್ ಮಾಡಿದ್ರೆ ಸಾಕು, ಮತ್ತೆ ಮನೆ ಮುಂದೆ ತಂದು ಬಿಡುವ ವ್ಯವಸ್ಥೆ ಗ್ರಾಹಕರಿಗೆ ಸಿಗುತ್ತದೆ.

“ನಾವು ಎಲ್ಲಾ ವಿಭಾಗಗಳಲ್ಲೂ ಪ್ರತಿಸ್ಪರ್ಧಿಗಳಿಗಿಂತ ಸಾಕಷ್ಟು ಮುಂದೆ ಇದ್ದೇವೆ. ಆದ್ರೆ OLA ರೆಂಟಲ್ಸ್ ಲಾಂಚ್ ಮಾಡಲು ಸ್ವಲ್ಪ ಸಮಯ ಹೆಚ್ಚಾಯಿತು. ಇದಕ್ಕೆ ಕಾರಣಗಳು ಕೂಡ ಇದೆ. OLA ರೆಂಟಲ್ಸ್​ ಡ್ರೈವರ್​ಗಳಿಗೆ ಸಿಟಿ ಟ್ಯಾಕ್ಸಿ      ಡ್ರೈವರ್​ಗಳಿಗಿಂತ ವಿಭಿನ್ನ ಟ್ರೈನಿಂಗ್ ಬೇಕಾಗಿತ್ತು. ಕ್ಯಾಬ್​ಗಳನ್ನು ಪರಿಶೀಲನೆ ಕೂಡ ಮಾಡಬೇಕಿತ್ತು. ಹೀಗಾಗಿ OLA ರೆಂಟಲ್ಸ್ ಲಾಂಚ್ ಮಾಡಲು ಸ್ವಲ್ಪ ಸಮಯ ಹಿಡಿಯಿತು.”
- ರಘುವೇಶ್ ಸರುಪ್, OLA ಕೆಟಗರಿ ಹೆಡ್ ಮತ್ತು ಚೀಫ್ ಮಾರ್ಕೆಟಿಂಗ್ ಆಫೀಸರ್

ಮಾರುಕಟ್ಟೆ ಉಳಿಸಿಕೊಳ್ಳಲು ಶ್ರಮ

OLA ರೆಂಟಲ್ಸ್ ಮತ್ತು ಲಕ್ಸ್ ಕೆಟಗರಿ OLA ಸೇವೆಗೆ ಇತ್ತೀಚಿನ ಸೇರ್ಪಡೆ. ಆದ್ರೆ ಇದರ ಒಳ ವಿಸ್ತಾರವನ್ನು OLA ಹೊರ ಹಾಕಿಲ್ಲ. OLA ರೆಂಟಲ್ಸ್ ವಿಭಾಗದಲ್ಲಿ ಒನ್ ವೇ ಜರ್ನಿಗೂ ಅವಕಾಶವನ್ನು ಕಲ್ಪಿಸಲಾಗಿದೆ. ಶಟಲ್ ಮತ್ತು ಕಾರ್ಪೋರೇಟ್ ರೈಡ್​ಗಳ ಬಗ್ಗೆಯೂ OLA ಹೆಚ್ಚಿನ ಗಮನ ಇಟ್ಟಿದೆ. OLA ಶೇರ್ ವಿಭಾಗವಂತೂ ನಗರಗಳಲ್ಲಿ ಟ್ರಾಫಿಕ್ ಸಮಸ್ಯೆ ತಡೆಯಲು ಹೆಚ್ಚು ಉಪಯುಕ್ತವಾಗಿದೆ. OLA ಶೇರ್ ಮೂಲಕ ಡ್ರೈವರ್​ಗಳಿಗೆ ಒಂದೇ ಟ್ರಿಪ್​ನಲ್ಲಿ ಹೆಚ್ಚಿನ ಹಣ ಗಳಿಸುವ ಅವಕಾಶವೂ ಇದೆ. OLA ಮತ್ತು ಉಬರ್ ಇತ್ತೀಚೆಗೆ ಬೈಕ್ ಟ್ಯಾಕ್ಸಿಗಳನ್ನು ಕೂಡ ಪರಿಚಯಿಸಿತ್ತು. ಆದ್ರೆ ಸರಕಾರದ ನಿರ್ದೇಶನದ ಮೇರೆಗೆ ಅದನ್ನು ನಿಲ್ಲಿಸಲಾಗಿದೆ. OLA ಮಾರ್ಕೆಟ್​ನಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದರೆ, ಉಬರ್ OLAವನ್ನು ಹಿಂದಿಕ್ಕುವ ಕನಸು ಕಾಣುತ್ತಿದೆ.

ಒಟ್ಟಿನಲ್ಲಿ ಓಲಾ ಮತ್ತು ಉಬರ್ ಸೇವೆಗಳು ಪ್ರಯಾಣಿಕರ ಮನ ಗೆಲ್ಲಲು ಸರ್ಕಸ್ ಮಾಡುತ್ತಿವೆ. ಮುಂದಿನ ದಿನಗಳಲ್ಲಿ ಕ್ಯಾಬ್ ಸರ್ವೀಸ್ ವಿಭಾಗದ ಫೈಟಿಂಗ್ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಇದನ್ನು ಓದಿ:

1. ಬೆಂಗಳೂರನ್ನು ಕೈ ಬಿಟ್ಟು ಉದ್ಯಮ ಆರಂಭಿಸಿ- ಸ್ಟಾರ್ಟ್​ಅಪ್​ ಲೋಕದಲ್ಲಿ ಯಶಸ್ಸು ಪಡೆಯಿರಿ

2. ಹಿಂದಿ ಚಿತ್ರರಂಗದಲ್ಲಿ ಮಿಂಚುತ್ತಿರುವ ಅಪ್ಪಟ ಕನ್ನಡ ರಂಗಭೂಮಿ ಪ್ರತಿಭೆ

3. ಸಿನಿಮಾ ತಾರೆಯರಿಗೆಲ್ಲ ಮಾದರಿ ಎವೆಲಿನ್ ಶರ್ಮಾರ ಸಮಾಜ ಸೇವೆ..!


Related Stories