ಮಾಂಸಹಾರಕ್ಕಿಲ್ಲ ಡಿಮ್ಯಾಂಡ್​- ಸಸ್ಯಹಾರಕ್ಕೆ ಕುಸಿದಿಲ್ಲ ಬೇಡಿಕೆ

ಟೀಮ್​ ವೈ.ಎಸ್​. ಕನ್ನಡ

ಮಾಂಸಹಾರಕ್ಕಿಲ್ಲ ಡಿಮ್ಯಾಂಡ್​- ಸಸ್ಯಹಾರಕ್ಕೆ ಕುಸಿದಿಲ್ಲ ಬೇಡಿಕೆ

Wednesday November 02, 2016,

2 min Read

ಭಾರತ ಸಸ್ಯಹಾರಿಗಳ ದೇಶ ಅನ್ನೋ ಹೆಗ್ಗಳಿಕೆ ಹೊಂದಿದೆ. ಆದ್ರೆ ಜಗತ್ತು ಬದಲಾದಂತೆ ಭಾರತ ಕೂಡ ಬದಲಾಗುತ್ತಿದೆ ಅನ್ನೋದನ್ನ ಸರ್ವೇ ಒಂದು ಬಹಿರಂಗಪಡಿಸಿದೆ. ಇಲ್ಲಿ ತನಕ ಭಾರತ ಅತೀ ಹೆಚ್ಚು ಸಸ್ಯಾಹಾರಿಗಳನ್ನು ಹೊಂದಿದ ರಾಷ್ಟ್ರ ಅನ್ನೋ ಗೌರವ ಮತ್ತು ಖ್ಯಾತಿಯನ್ನು ಪಡೆದಿತ್ತು. ಆದ್ರೆ ಈಗ ಆಫೀಸ್ ಆಫ್ ರಿಜಿಸ್ಟ್ರಾರ್ ಜನರಲ್ ಮತ್ತು ಸೆನ್ಸಸ್ ಕಮಿಷನರ್ ಪ್ರಕಾರ ಭಾರತ ಸಸ್ಯಾಹಾರಿಗಳ ಸಂಖ್ಯೆ ಕಡಿಮೆ ಆಗಿದೆ. 2014ರ ಸರ್ವೇಯ ಸ್ಯಾಂಪಲ್ ಪ್ರಕಾರ 15 ವರ್ಷಕ್ಕಿಂತ ಮೇಲ್ಪಟ್ಟ ವರ್ಗದಲ್ಲಿ ಸರಿಸುಮಾರು 71 ಪ್ರತಿಶತ ಜನರು ಮಾಂಸಾಹಾರಿಗಳು ಅನ್ನೋ ಸತ್ಯ ಬಹಿರಂಗಗೊಂಡಿದೆ.

ಅಚ್ಚರಿ ಅಂದ್ರೆ 2004ರ ಸರ್ವೇಗೆ ಹೊಲಿಸಿದರೆ ಈ ಬಾರಿ ನಾನ್ ವೆಜಿಟೇರಿಯನ್​ಗಳ ಸಂಖ್ಯೆ ಕೊಂಚ ಇಳಿಮುಖವಾಗಿದೆ. 2004ರಲ್ಲಿ ಭಾರತದಲ್ಲಿ ಸುಮಾರು ಶೆಕಡಾ 75ರಷ್ಟು ಜನ ಮಾಂಸಾಹಾರ ಸೇವನೆ ಮಾಡುತ್ತಿದ್ದರು. ಈಗ ನಿಮಗೆ ಯಾವ ರಾಜ್ಯದಲ್ಲಿ ಮಾಂಸಾಹಾರಕ್ಕೆ ಹೆಚ್ಚು ಬೇಡಿಕೆ ಇದೆ ಅನ್ನೋ ಸಂದೇಹ ಹುಟ್ಟಿರಬಹುದು. ತೆಲಂಗಾಣದಲ್ಲಿ ಶೇಕಡಾ 98.8ರಷ್ಟುಪುರುಷರು ಮಾಂಸಾಹಾರ ಇಲ್ಲದೆ ನಿದ್ದೆ ಮಾಡೋದಿಲ್ಲ. ಇಲ್ಲಿ ಮಹಿಳೆಯರು ಕೂಡ ಮಾಂಸ ಸೇವನೆಯಲ್ಲಿ ಮುಂದಿದ್ದಾರೆ. ತೆಲಂಗಾಣದ ಶೇ. 98.6 ಮಹಿಳೆಯರು ಮಾಂಸಾಹಾರವನ್ನು ಇಷ್ಟಪಡುತ್ತಾರೆ. ಪಶ್ಚಿಮ ಬಂಗಾಳದಲ್ಲಿ ಶೇ. 98.55, ಆಂಧ್ರಪ್ರದೇಶದಲ್ಲಿ ಶೇ. 98.25, ಓಡಿಶಾದಲ್ಲಿ ಶೇ.97.35 ಮತ್ತು ಕೇರಳದಲ್ಲಿ ಶೇ. 97ರಷ್ಟು ಜನ ನಾನ್​ವೆಜ್ ಪ್ರಿಯರು ಅಂತ ಸರ್ವೇ ಹೇಳುತ್ತಿದೆ.

image


ನ್ಯಾಷನಲ್ ಸ್ಯಾಂಪಲ್ ಸರ್ವೇ ಆನ್ ಹೌಸ್​ ಹೋಲ್ಡ್ ಕನ್ಸಂಷನ್ ಹೇಳುವಂತೆ ಅಖಂಡ ಆಂಧ್ರ ಪ್ರದೇಶದ ಜನತೆ 21 ದೊಡ್ಡ ರಾಜ್ಯಗಳ ಜನರ ಪೈಕಿ ಅತೀ ಹೆಚ್ಚು ಕೋಳಿ ಮಾಂಸವನ್ನು ಇಷ್ಟಪಡುತ್ತಾರೆ. ಮಟನ್ ಇಷ್ಟಪಡುವ ಜನರ ಲೆಕ್ಕಾಚಾರದಲ್ಲಿ ಜಮ್ಮುಕಾಶ್ಮೀರ ಮುಂದೆ ಇದ್ದರೆ, ಅಖಂಡ ಆಂಧ್ರಪ್ರದೇಶಕ್ಕೆ 2ನೇ ಸ್ಥಾನ.

ತೆಲುಗಿನ 2 ರಾಜ್ಯಗಳು ಮೊಟ್ಟೆ ಮತ್ತು ಮಾಂಸವನ್ನು ಉತ್ಪಾದಿಸುವುದರಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಆಂಧ್ರಪ್ರದೇಶದಲ್ಲಿ 1309.58 ಕೋಟಿ ಮೊಟ್ಟೆಯನ್ನು ಉತ್ಪಾದಿಸಿದರೆ, ತೆಲಂಗಾಣದಲ್ಲಿ 1006 ಕೋಟಿ ಮೊಟ್ಟೆ ಉತ್ಪಾದನೆ ಆಗುತ್ತದೆ. ಮಾಂಸದ ಉತ್ಪಾದನೆಯಲ್ಲಿ ಆಂಧ್ರ ಪ್ರದೇಶ ವರ್ಷವೊಂದಕ್ಕೆ 5.27 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ಮಾಡಿ 4ನೇ ಸ್ಥಾನ ಪಡೆದುಕೊಂಡಿದೆ. ತೆಲಂಗಾಣ ಪ್ರತೀ ವರ್ಷ 4.46 ಮೆಟ್ರಿಕ್ ಟನ್ ಮಾಂಸ ಉತ್ಪಾದಿಸುವ ಬಗ್ಗೆ ಸರ್ವೇಯಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ಸಸ್ಯಾಹಾರಿಗಳ ಸಂಖ್ಯೆ ರಾಜಸ್ಥಾನದಲ್ಲಿ ಹೆಚ್ಚಿದೆ. ರಾಜಸ್ಥಾನದಲ್ಲಿಸ ಕೇವಲ ಶೇ. 26.8 ನಾನ್​ವೆಜ್ ಪ್ರಿಯರಿದ್ದಾರೆ. ಕರ್ನಾಟಕ 2ನೇ ಸ್ಥಾನ ಪಡೆದುಕೊಂಡಿದ್ದು, ದಕ್ಷಿಣ ರಾಜ್ಯಗಳ ಪೈಕಿ ಕರ್ನಾಟದಲ್ಲೇ ಅತೀ ಕಡಿಮೆ ನಾನ್​ವೆಜ್ ಪ್ರಿಯರಿದ್ದಾರೆ. ರಾಜಸ್ಥಾನದಲ್ಲಿ ಶೇ. 73.2ರಷ್ಟು ಪುರುಷರು ವೆಜಿಟೇರಿಯನ್​ಗಳಾಗಿದ್ದರೆ, ಶೇ. 76.6ರಷ್ಟು ಮಹಿಳೆಯರು ಪಕ್ಕಾ ವೆಜ್ ತಿನ್ನುತ್ತಾರೆ. ಹರ್ಯಾಣದಲ್ಲಿ ಶೇ 68.5ರಷ್ಟು ಪುರುಷರು ಮತ್ತು ಶೇ. 70 ರಷ್ಟು ಪುರುಷರು ನಾನ್​ವೆಜ್ ತಿನ್ನೋದಿಲ್ಲ. ಒಟ್ಟಿನಲ್ಲಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ನಾನ್​ವೆಜ್​ಗೆ ಭಾರೀ ಬೇಡಿಕೆ ಇದೆ. ಹೀಗಾಗಿ ಇಲ್ಲಿ ಸಾಕಷ್ಟು ಮಾಂಸ ಮಾರುವ ಅಂಗಡಿಗಳು ತಲೆ ಎತ್ತಿವೆ.

ಇದನ್ನು ಓದಿ:

1. ನನಸಾಯ್ತು ಉದ್ಯಮದ 'ಹೂ' ಕನಸು : ಕಾಶ್ಮೀರದ ಸಾಹಸಿ ಮಹಿಳೆಯ ಯಶೋಗಾಥೆ

2. 160 ಕಿ.ಮೀ.ನದಿಗೆ ಮರುಜೀವ ನೀಡಿದ ಸಂತ - ಹಲವು ಹಳ್ಳಿಗಳ ಪಾಲಿಗೆ ಈತ ಆಧುನಿಕ ಭಗೀರಥ

3. ಅಂದು ಎಸ್‌ಟಿಡಿ ಬೂತ್‌ಗೆ ಮಾಲೀಕ- ಇಂದು ನೂರಾರು ಕೋಟಿಗಳಿಗೆ ಒಡೆಯ