ಸಿಲಿಕಾನ್​ ಸಿಟಿಯಲ್ಲಿ ಇದೇ"ಕಥೆ ಅಲ್ಲ ಜೀವನ"..!

ಟೀಮ್​ ವೈ.ಎಸ್​. ಕನ್ನಡ

0

ಗಂಟೆಗಟ್ಟಲೆ ಕಾಯುವಂತೆ ಮಾಡುವ ಟ್ರಾಫಿಕ್ ಸಿಗ್ನಲ್​ಗಳು...ಸರಿಯಾದ ಸಮಯಕ್ಕೆ ಆಫೀಸ್ ತಲುಪದೇ ಒದ್ದಾಡುವ ಪರಿಸ್ಥಿತಿಗಳು. ಎಷ್ಟೇ ಕಷ್ಟಪಟ್ರೂ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಉತ್ತರ ಹುಡುಕುವುದಕ್ಕೆ ಸಾಧ್ಯವಾಗಿಲ್ಲ. ಟ್ರಾಫಿಕ್ ಸಮಸ್ಯೆಗೆ ಮಂಗಳ ಹಾಡಲು ಅದೆಷ್ಟೋ ಪ್ಲಾನ್​ಗಳನ್ನು ಮಾಡಿದ್ರೂ ಅದು ಪ್ರಯೋಜನಕ್ಕೆ ಬಂದಿಲ್ಲ. ಕೋಟಿಗಟ್ಟಲೆ ದುಡ್ಡು ಸುರಿದು ಮಾಡಿದ ಪ್ರಾಜೆಕ್ಟ್​ಗಳೆಲ್ಲಾ ವೇಸ್ಟ್ ಪ್ಲಾನ್​ಗಳ ಪಟ್ಟಿಗೆ ಬಿದ್ದಿವೆ. ಹಾಗಾದ್ರೆ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರವೇ ಇಲ್ವಾ.. ಇಲ್ಲ ಅನ್ನೋ ಉತ್ತರ ನೆಗೆಟಿವ್ ಆ್ಯಂಗಲ್ ಕ್ರಿಯೇಟ್ ಮಾಡುತ್ತದೆ. ಇದೆ ಅಂದ್ರೆ ತಪ್ಪಾಗುತ್ತದೆ. ಆದ್ರೆ ಈಗಿರುವ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸೋದಿಕ್ಕೆ ಹಲವು ರೀತಿಯ ಚಿಂತನೆಗಳು ನಡೆಯುತ್ತಿದೆ.

ಬೆಂಗಳೂರಿಗೂ ಬರುತ್ತಾ ಸಮ-ಬೆಸ ಮಂತ್ರ..?

ಈಗಾಗಲೇ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ವಾಹನಗಳಿಂದ ಉಂಟಾಗುವ ವಾಯುಮಾಲಿನ್ಯವನ್ನು ತಡೆಯಲು ಸಮ-ಬೆಸ ತಂತ್ರವನ್ನು ಜಾರಿಗೆ ತರಲಾಗಿದೆ. ಇದರಿಂದ ಮಾಲಿನ್ಯ ತಡೆಯುವ ಜೊತೆಗೆ ಟ್ರಾಫಿಕ್ ಸಮಸ್ಯೆಗೂ ಕಡಿವಾಣ ಹಾಕುವ ಕೆಲಸ ನಡೆಯುತ್ತಿದೆ. ಬೆಂಗಳೂರಿನ ವಾತಾವರಣವೂ ಕಲುಷಿತಗೊಳ್ಳುತ್ತಾ ಇರೋದು ಸುಳ್ಳಲ್ಲ. ಹೀಗಾಗಿ Odd-even ಮಂತ್ರ ಬೆಂಗಳೂರಿಗೂ ಅಪ್ಲೈ ಆದ್ರೆ ಟ್ರಾಫಿಕ್ ಸಮಸ್ಯೆ ಜೊತೆಗೆ ವಾಯುಮಾಲಿನ್ಯವನ್ನು ಕೂಡ ತಡೆಗಟ್ಟಬಹುದು ಅನ್ನೋದು ಪರಿಸರ ತಜ್ಞರ ಅಭಿಮತ.

ಇದನ್ನು ಓದಿ: 'ಮಹಾ' ನದಿಗಳೇಕೆ ಬರಿದಾಗುತ್ತಿವೆ..?

ಕಾರ್​ಪೂಲಿಂಗ್​ನಿಂದ ಲಾಭವಾಯ್ತಾ..?

ನಮ್ಮ ಬೆಂಗಳೂರಿನಲ್ಲಿ ಈಗಾಗಲೇ ಕಾರ್ ಪೂಲಿಂಗ್ ವ್ಯವಸ್ಥೆ ಜಾರಿಯಲ್ಲಿದೆ. ಆದ್ರೆ ಇದು ಎಷ್ಟು ಪರಿಣಾಮಕಾರಿ ಆಗಿದೆ ಅನ್ನುವುದರ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ. ಕಾರ್ ಪೂಲಿಂಗ್​ನಲ್ಲಿ ಲಾಭಕ್ಕಿಂತ ವೈಯಕ್ತಿಕ ಹತಾಶೆಗಳೇ ಹೆಚ್ಚಿವೆ ಅನ್ನೋದು ಸರ್ವೇ ಒಂದು ಬಿಚ್ಚಿಟ್ಟ ಸತ್ಯ. ಅಷ್ಟಕ್ಕೂ ಸಿಲಿಕಾನ್ ಸಿಟಿಯಲ್ಲಿ ಕಾರ್ ಪೂಲಿಂಗ್ ಅನ್ನೋದು ಕಟ್ಟುನಿಟ್ಟಾಗಿ ಇಲ್ಲದೇ ಇರುವುದರಿಂದ ಇದರ ಬಳಕೆ ಕಡಿಮೆ ಆಗಿದೆ. ಒಂದು ವೇಳೆ ಸರ್ಕಾರ ಕಾರ್ ಪೂಲಿಂಗ್ ಕಾನ್ಸೆಪ್ಟ್​ನ್ನು ಕಡ್ಡಾಯಗೊಳಿಸಿದ್ರೆ ಟ್ರಾಫಿಕ್ ಸಮಸ್ಯೆಯನ್ನು ಕಡಿಮೆಗೊಳಿಸುವುದಕ್ಕೆ ಚಿಕ್ಕ ಸಹಾಯವಾದ್ರೂ ಆಗಬಹುದು.

ಸುಮ್ಮನೆ ಕುಳಿತ್ರೆ ಪರಿಹಾರ ಸಿಗಲ್ಲ..!

ಬೆಂಗಳೂರು ದಿನನಿತ್ಯ ಬೆಳೆಯುತ್ತಿದೆ ಅನ್ನೋದು ಜನಪ್ರಿಯ ಆರೋಪ. ಫ್ಲೈ, ಓವರುಗಳು, ಅಂಡರ್​ಪಾಸ್​ಗಳು ಇದ್ದರೂ ಸಂಚಾರ ದಟ್ಟಣೆ ಕಡಿಮೆ ಆಗಿದೆ ಅನ್ನೋದಿಕ್ಕೆ ಚಿಕ್ಕ ಉದಾಹಣೆಯೂ ಸಿಗುತ್ತಿಲ್ಲ. ಬಿಎಂಟಿಸಿ ಬಸ್​ನಲ್ಲಂತೂ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಹೋಗಬೇಕು ಅಂದ್ರೆ ಸಾಕಷ್ಟು ಮೊದಲೇ ಹೊರಡಬೇಕು. ಸದ್ಯ ಚಾಲ್ತಿಯಲ್ಲಿರುವ ಮೆಟ್ರೋ ರೈಲಿನಲ್ಲಿ ಜನ ಪ್ರಯಾಣ ಮಾಡ್ತಾ ಇದ್ರೂ, ಅದು ಬೆಂಗಳೂರಿನ ಪ್ರಯಾಣಿಕರ ಸಂಖ್ಯೆಯ ಶೆಕಡಾ 10ರಷ್ಟನ್ನು ಕೂಡ ಮುಟ್ಟುತ್ತಿಲ್ಲ. ಹೀಗಾಗಿ ಬೆಂಗಳೂರಿನ ಸಮಸ್ಯೆಗೆ ಹೇಗೆ ಪರಿಹಾರ ಹುಡುಕುಬೇಕು ಅನ್ನೋದೇ ಬಹುದೊಡ್ಡ ಚರ್ಚೆ. ಎಲ್ಲಾ ಪ್ರಯೋಗಗಳನ್ನು ಮಾಡಿ ಎಡವಿರುವ ಸರ್ಕಾರ ಸದ್ಯ ಟ್ರಾಫಿಕ್​ ನಿಯಂತ್ರಣದ ಯೋಚನೆಯನ್ನು ಕೈ ಬಿಟ್ಟಂತಿದೆ. ಆದ್ರೆ ಕೈ ಕಟ್ಟಿ ಕುಳಿತ್ರೆ ಪರಿಹಾರ ಸಿಗೋದಿಕ್ಕೆ ಸಾಧ್ಯವೇ ಇಲ್ಲ ಅನ್ನೋ ಮಾತನ್ನು ಕೂಡ ಮತ್ತೆ ನೆನಪಿಸಬೇಕಾಗುತ್ತದೆ.

ಪರಿಹಾರ ಏನಿದೆ..?

ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು ಬಗೆ ಹರಿಸೋದಿಕ್ಕೆ ಒಂದೆರಡು ವರ್ಷಗಳ ಯೋಜನೆಗಳು ಸಾಕಾಗುವುದಿಲ್ಲ. ಅದೇನಿದ್ರೂ ಅತ್ಯಂತ ದೊಡ್ಡ ಪ್ರಾಜೆಕ್ಟ್​ಗಳನ್ನೇ ಮಾಡಬೇಕಿದೆ. ಅದಕ್ಕೂ ಮೊದಲು ಬೆಂಗಳೂರಿನಲ್ಲಿರುವ ಸಮೂಹ ಸಾರಿಗೆಗಳಾದ ಬಿಎಂಟಿಸಿ ಮತ್ತು ಮೆಟ್ರೋ ರೈಲಿನಲ್ಲಿ ಪ್ರಯಾಣಿಕರು ಓಡಾಡುವಂತೆ ಮಾಡಬೇಕಿದೆ. ಸದ್ಯ ಬಿಎಂಟಿಸಿ ದೇಶದಲ್ಲೇ ಅತೀ ಹೆಚ್ಚು ಟಿಕೆಟ್ ದರವನ್ನು ಹೊಂದಿದೆ. ಮೆಟ್ರೋ ಟಿಕೆಟ್ ದರವೂ ಹೆಚ್ಚಿದೆ. ಇದನ್ನು ಕಡಿಮೆಗೊಳಿಸಿದ್ರೆ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದ್ರೂ ಬರಬಹುದು. ಅಷ್ಟೇ ಅಲ್ಲ ಸರ್ಕಾರ ಕೂಡ ಖಾಸಗಿ ವಾಹನಗಳ ಬಳಕೆಯ ಬಗ್ಗೆ ಕಟ್ಟುನಿಟ್ಟಾದ ಕಾನೂನು ಮಾಡಿದ್ರೆ ಬೆಂಗಳೂರಿಗೆ ಉಳಿಗಾಲವಿದೆ. ಇಲ್ಲದೇ ಇದ್ರೆ ಬೆಂಗಳೂರಿ ಜನರ ಬದುಕನ್ನು ಆ ದೇವರೇ ಕಾಪಾಡಬೇಕಾಗಬಹುದು.

ಇದನ್ನು ಓದಿ:

1. ರಿಯೋದಲ್ಲಿ"ರೈಲ್ವೇಸ್​"ಕ್ರೀಡಾಪಟುಗಳದ್ದೇ ಕಾರುಬಾರು..!

2. ಬ್ಯಾಂಡ್ ಲೋಕದಲ್ಲಿ ವಿಶಿಷ್ಟ“ಧ್ರುವ”ತಾರೆ

3. ಕೆಎಸ್​ಆರ್​ಟಿಸಿಯಲ್ಲಿ"ಮಿಡಿಬಸ್​" ಮ್ಯಾಜಿಕ್​- ಸಾರಿಗೆ ಸಂಸ್ಥೆಗೆ ಹೊಸ ಕಿಕ್​

Related Stories

Stories by YourStory Kannada