ಯಶಸ್ಸುಕೊಟ್ಟವರಿಗಾಗಿ "ಯಶೋ"ಮಾರ್ಗ

ಟೀಮ್​ ವೈ.ಎಸ್​. ಕನ್ನಡ

0

ಯಶಸ್ಸುಅನ್ನೋದು ಮನುಷ್ಯನನ್ನ ಏನು ಬೇಕಾದ್ರು ಮಾಡುತ್ತದೆ ಅಂತ ಯಶಸ್ಸನ್ನು ಉತ್ತಮ ಕೆಲಸಕ್ಕೆ ಬಳಸಿಕೊಂಡರೆ ಅದು ಇಂದಿಗೂ ಮುಂದಿಗೂ ಎಂದೆದಿಂಗೂ ಅವರನ್ನ ಮತ್ತು ಅವರ ಸುತ್ತಮುತ್ತಲು ಇರುವ ಜನರನ್ನ ಕಾಪಾಡುತ್ತದೆ ಅನ್ನೋದು ಸತ್ಯದ ಸಂಗತಿ. ಮನುಷ್ಯರಾಗಿ ಹುಟ್ಟಿದ ಮೇಲೆ ನಾವಷ್ಟೇ, ಸಂಪಾದನೆ ಮಾಡಿಕೊಂಡು ಹೋಗೋದಲ್ಲ, ಹುಟ್ಟಿದ ಈ ಭೂಮಿಗೆ ನಮ್ಮಿಂದ ಏನಾದ್ರು ಒಂದಿಷ್ಟು ಉಪಯೋಗಗಳು ಆಗಲಿ, ಅಷ್ಟೇ ಅಲ್ಲದೆ ಪ್ರತಿದಿನ ತಿನ್ನುವ ಅನ್ನದ ಹಿಂದಿರುವ ರೈತರ ಬೆವರನ್ನ ಒರೆಸುವ ಕೆಲಸ ನಮ್ಮಿಂದಾಗಿದಲಿ ಅನ್ನೋ ಸದುದ್ದೇಶದಲ್ಲಿ ಹುಟ್ಟಿಕೊಂಡಿರೋದೆ "ಯಶೋಮಾರ್ಗ".

"ಯಶೋಮಾರ್ಗ" ವರ್ಷದ ಹಿಂದೆ ರಾಜ್ಯದಲ್ಲಿ ನೀರಿಲ್ಲದೆ ಜನರು ಹನಿ ನೀರಿಗಾಗಿ ಪರದಾಡುತ್ತಿದ್ದ ಸಮಯದಲ್ಲಿ ಹುಟ್ಟುಕೊಂಡ ಸಂಸ್ಥೆ. ರಾಜ್ಯದ ಮುಂಚೂಣಿಯಲ್ಲಿರೋ ಸಿನಿಮಾ ನಟ ರಾಕಿಂಗ್ ಸ್ಟಾರ್‍ ಯಶ್‍ ಅವರ ಕನಸಿನ ಕೂಸು. ರೈತರ ಮಗನಾದ ನಾನು ಇಷ್ಟೆಲ್ಲ ಪ್ರೀತಿ ಸಂಪಾದನೆ ಮಾಡಿದ ನಂತರ ರೈತರಿಗಾಗಿ ಏನನ್ನಾದರೂ ಮಾಡಲೇ ಬೇಕು ಅನ್ನೋ ನಿಟ್ಟಿನಲ್ಲಿ ಹುಟ್ಟಿಹಾಕಿರೋ ಸಂಸ್ಥೆ. ಈಗಾಗಲೇ ಕಳೆದ ವರ್ಷದಲ್ಲಿ ಇದರ ಅಡಿಯಲ್ಲಿ ಸಾಕಷ್ಟು ಕಾರ್ಯಕ್ರಮಗಳು ನಡೆದಿದ್ದು ರೈತರ ಸಮಸ್ಯೆಗಳು, ಪರಿಸರ ಕಾಳಜಿ ಮತ್ತು ಬಡಜನರ ಕಷ್ಟವನ್ನ ನಿವಾರಿಸುವುದೇ ಇದರ ಮೂಲ ಉದ್ದೇಶ. ಪ್ರತಿಯೊಬ್ಬರು ಗಿಡ ನೆಡಿ. ಮುಂದಿನ ಪೀಳಿಗೆಗೆ ಅದು ಜೀವನ ನೀಡುತ್ತದೆ ಅನ್ನುವ ಸಂದೇಶ ಸಾರುವ ಮೂಲಕ ಈಗಾಗಲೇ ಲಕ್ಷ ಲಕ್ಷ ಸಂಪಿಗೆ ಗಿಡಗಳನ್ನ ನೆಡುವಂತಹ ಕೆಲಸ ಈ "ಯಶೋಮಾರ್ಗ"ದಿಂದ ಆಗುತ್ತಿದೆ. ನೊಂದವರಿಗೆ ಆಸರೆಯಂತೆ, ವಯಸ್ಸಾದವ್ರಿಗೆ ಆಶ್ರಯ. ಹೀಗೆ ಉತ್ತಮ ಕೆಲಸಗಳು ಇದೇ "ಯಶೋಮಾರ್ಗ"ದಿಂದ ನಡೆಯುತ್ತಿದೆ.

ಪರಿಸರ ಕಾಳಜಿ

ಉತ್ತರ ಕರ್ನಾಟಕದಲ್ಲಿ ಟ್ಯಾಂಕರ್‍ಗಳ ಮೂಲಕ ಜನರಿಗೆ ನೀರನ್ನ ಹಂಚಿದ ನಂತರ ಇದೇ "ಯಶೋಮಾರ್ಗ"ತಂಡದಿಂದ ಮತ್ತಷ್ಟು ಉತ್ತಮ ಕೆಲಸಗಳು ನಡೆದಿವೆ. ಚಿತ್ರೀಕರಣದ ವೇಳೆಯಲ್ಲಿ ಸಾವಿಗೀಡಾದ ದಿವಂಗತ ನಟ ಅನಿಲ್ ಮತ್ತು ಉದಯ್‍ ಅವರ ಕುಟುಂಬಕ್ಕೆ ಅವರ ಮಕ್ಕಳ ಹೆಸರಿನಲ್ಲಿ ಹಣವನ್ನ ಡೆಪಾಸಿಟ್ ಮಾಡಲಾಗಿದೆ. ಇನ್ನೂ ಕೆಲ ವಿಶೇಷ ಸಂದರ್ಭದಲ್ಲಿ ಕೆಲವು ವಿಚಾರಗಳು ಜನರಿಗೆ ವೇಗವಾಗಿ ಮುಟ್ಟುತ್ತೆ ಅನ್ನುವ ಉದ್ದೇಶದಿಂದ ವಿವಿಧ ಕೆಲಸಗಳನ್ನು ಮಾಡಲಾಗುತ್ತದೆ. ಯಶ್‍ ಅವರ ಹುಟ್ಟು ಹಬ್ಬದಂದು "ಯಶೋಮಾರ್ಗ"ದ ವತಿಯಿಂದ ಪರಿಸರ ಕ್ಯಾಲೆಂಡರ್‍ ಅನ್ನ ಬಿಡುಗಡೆ ಮಾಡಲಾಗಿದೆ. ವಿಶ್ವಸಂಸ್ಥೆ ನಿಗದಿ ಮಾಡಿ, ಆಚರಣೆ ಮಾಡುವ ಪರಿಸರ ದಿನಗಳು ಮಾತ್ರ ಇದರಲ್ಲಿ ದಾಖಲಾಗಿತ್ತು ಅನ್ನೊದು ಇದರ ವಿಶೇಷತೆ. ಪರಿಸರದ ಬಗ್ಗೆ ಮತ್ತು ಪರಿಸರ ದಿನಗಳ ಬಗ್ಗೆ ಚುಟುಕು ಮಾಹಿತಿ ಕೂಡ ಈ ಕ್ಯಾಲೆಂಡ್​ರ್​ನಲ್ಲಿದೆ. ಅದಷ್ಟೆ ಅಲ್ಲದೆ www.yashomagra.in ಅನ್ನೋ ವೆಬ್ ಸೈಟ್‍ ಕೂಡ ಲಾಂಚ್‍ ಆಗಿದೆ. ಇಲ್ಲಿ "ಯಶೋಮಾರ್ಗ"ದ ಬಗ್ಗೆ ಸಂಪೂರ್ಣ ಮಾಹಿತಿ ಜೊತೆಯಲ್ಲಿ ಮುಕ್ತ ಅಭಿಪ್ರಾಯ ಹಂಚಿಕೊಳ್ಳಲು ಒಂದು ಉತ್ತಮ ವೇದಿಕೆಯನ್ನು  ಕಲ್ಪಿಸಲಾಗಿದೆ.

ನೀವು ಕೈಜೋಡಿಸಿ

ಒಗ್ಗಟ್ಟಿನಲ್ಲಿ ಬಲವಿದೆ ಅನ್ನುವ  ಮಾತು ಎಂದಿಗೂ ಚಾಲ್ತಿಯಲ್ಲಿರೋ ಸತ್ಯ. ಒಬ್ಬರೇ ಹೋರಾಟ ಮಾಡುವ ಬದಲು ಒಳ್ಳೆ ಕಾರ್ಯಕ್ಕೆ ಮತ್ತಷ್ಟು ಜನರು ಕೈ ಜೋಡಿಸಿದರೆ ಇಂತಹ ಒಳ್ಳೆ ಕಾರ್ಯಗಳು ಆದಷ್ಟು ವೇಗವಾಗಿ ಜನರ ಬಳಿಗೆ ತಲುಪುತ್ತದೆ. ತೆರೆ ಮೇಲೆ ನಟನೆ ನೋಡಿ ಮೆಚ್ಚಿರುವ ನಾಯಕನ ನಿಜ ಜೀವನದಲ್ಲಿ ರೈತರಿಗಾಗಿ ಮತ್ತು ಪರಿಸರ ಪ್ರೀತಿಗಾಗಿ ಮಾಡುವ ಹೋರಾಟಕ್ಕೆ ನೀವು ಬಾಗಿಯಾಗಬಹುದು. ಯಶ್‍ ಇಂತಹದೊಂದು ಕೆಲಸ ಮಾಡ್ತಿದ್ದಾರೆ ಅನ್ನುವದನ್ನ ತಿಳಿದ ತಕ್ಷಣ ಈ ರೀತಿಯ ಒಂದು ಕೆಲಸ ಮಾಡಬಹುದೇನೋ ಅನ್ನುವ  ಪ್ಲಾನ್ ನಿಮ್ಮಲ್ಲಿ ಇದ್ರೆ ಅದನ್ನ "ಯಶೋಮಾರ್ಗ"ತಂಡಕ್ಕೆ ತಿಳಿಸಬಹುದು. ಅಷ್ಟೇ ಅಲ್ಲದೆ ರೈತರ ಪರವಾಗಿ, ಪರಿಸರಕ್ಕೆ ಉಪಯೋಗವಾಗುವಂತಹ ಕೆಲಸಗಳಲ್ಲಿ ನೀವು ಕೈಜೋಡಿಸಬಹುದು.

"ಯಶೋಮಾರ್ಗ"ದಿಂದ ಉದ್ಯೋಗ

"ಯಶೋಮಾರ್ಗ"ದಿಂದ ಕೇವಲ ರೈತರಿಗೆ ಮತ್ತು ಬಡವರಿಗೆ ಉಪಯೋಗವಲ್ಲದೆ ಅದೆಷ್ಟೋ ಜನರಿಗೆ ಕೆಲಸ ಸಿಕ್ಕಿದೆ. ರೈತರಿಗೆ ಸಹಾಯ ಮಾಡುವ ಯುವಕರು ಮತ್ತು ಅನೇಕರು ಈ ಸಂಸ್ಥೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಯುವಕರಿಗೆ ಮಾದರಿಯಾದ ನಾಯಕ

ತೆರೆಯ ಮೇಲೆ ಕೇವಲ ರಂಜಿಸುವುದಷ್ಟೇ ನಮ್ಮ ಕಾಯಕವಲ್ಲ ಅನ್ನುವುದನ್ನ ಯಶ್‍ರಂತೆಯೇ ಎಲ್ಲಾ ಕಲಾವಿದರು ಅರಿತುಕೊಂಡರೆ "ಯಶೋಮಾರ್ಗ"ದಂತಹ ಅದೆಷ್ಟೋ ಸಂಸ್ಥೆಯ ಹುಟ್ಟಿಗೆ ಕಾರಣ ಆಗುತ್ತದೆ. ಯಶ್‍ ಇಂದು ತೆರೆಯ ಮೇಲಷ್ಟೆ ಅಲ್ಲದೆ ನಿಜ ಜೀವನದಲ್ಲೂ ನಾಯಕನಾಗಿಯೇ ಇಂದಿಗೂ ಮುಂದಿಗೂ ಉಳಿದುಕೊಳ್ಳುತ್ತಾರೆ. ಕಾರಣ ಇಷ್ಟೆ ಬದುಕುವ ನಾಲ್ಕು ದಿನ ಮತ್ತೊಬ್ಬರಿಗೆ ಮಾದರಿಯಾಗಿ ಬದುಕಬೇಕು ಅನ್ನುವುದು ಅವ್ರ ಮನೋಭಾವನೆ. "ಯಶೋಮಾರ್ಗ" ಹುಟ್ಟಿನಿಂದ ಇಂದಿನವರೆಗೂ ಯಶ್ ಮಾರ್ಗವೂ ಬದಲಾಗಿದೆ. ಅದಕ್ಕೆ ಉತ್ತಮ ಉದಾಹರಣೆ ಅವರ ಮದುವೆ. ನಮ್ಮ ನೆಲ, ಜಲ, ಸಂಪತ್ತು ಇದರ ಬಗ್ಗೆ ನುಡಿದಂತೆಯೇ ಯಶ್ ನಡೆದುಕೊಂಡಿದ್ದಾರೆ. ಸಂಪ್ರದಾಯದಂತೆ ಮದುವೆಯಾಗಿದ್ದಷ್ಟೆ ಅಲ್ಲದೆ ಮದುವೆಗೆ ಬೇಕಾದ ಹಣ್ಣು-ಹೂ ತರಕಾರಿ ಎಲ್ಲವನ್ನೂ ರೈತರಿಂದ ನೇರಖರೀದಿ ಮಾಡಿದ್ದಾರೆ. ಎಲ್ಲಿಯೂ ದುಂದು ವೆಚ್ಚವಾಗದಂತೆ ನಿಗಾವಹಿಸಿ ಮದುವೆ ಮಾಡಿಕೊಂಡಿದ್ದಾರೆ. ಅದರ ಜೊತೆಯಾಗಿ ಭಾರತೀಯ ಸಂಪ್ರದಾಯ ಸಂಸ್ಕೃತಿಯಂತೆ ತಮ್ಮನ್ನ  ಮೆಚ್ಚಿಕೊಳ್ಳುವ  ಜನರನ್ನ ಕರೆಸಿ ಔತಣ ಕೊಟ್ಟಿದ್ದಾರೆ. ಹೀಗೆ ತಮ್ಮ ಜೀವನ ಶೈಲಿಯನ್ನು  ಮಾದರಿಯಾಗುವಂತೆ ಮಾಡಿಕೊಂಡಿರುವ ನಟ ಮುಂದಿನದಿನಗಳಲ್ಲಿ ರಾಜ್ಯದ ಜನರಿಗಾಗಿ "ಯಶೋಮಾರ್ಗ"ದ ಮೂಲಕ ಮತ್ತಷ್ಟು ಕಾರ್ಯಗಳನ್ನ ಮಾಡಲಿದ್ದಾರೆ. ಅದಕ್ಕೆ ಇನ್ನು ಮುಂದೆ ಯಶ್‍ ಅವ್ರ ಪತ್ನಿ ರಾಧಿಕಾ ಪಂಡಿತ್‍ ಕೂಡ ಸಾಥ್‍ ನೀಡಲಿದ್ದಾರೆ. ಇಂತಹ ಉತ್ತಮ ಬೆಳವಣಿಗೆಗಳು ಹೀಗೆ ಚಾಲ್ತಿಯಲ್ಲಿರಲಿ. ನಿಮಗೂ ಇಂತಹ ಕಾರ್ಯಗಳಲ್ಲಿ ಕೈ ಜೋಡಿಸೋ ಆಸೆ ಇದ್ದರೆ "ಯಶೋಮಾರ್ಗ" ವೆಬ್‍ಸೈಟ್ ಗೆ ಲಾಗ್‍ಇನ್ ಆಗಿ ಸಮಾಜಮುಖಿ ಕಾರ್ಯಗಳಲ್ಲಿ ನಿಮ್ಮ ಕೆಲಸವನ್ನೂ ಮಾಡಿ.

ಇದನ್ನು ಓದಿ:

1. ಹೈದ್ರಾಬಾದ್ ದಂಪತಿಗಳ ಸ್ಟಾರ್ಟ್ಅಪ್ ಕನಸು- ಲೀನ್​ಸ್ಪೂನ್​ನಲ್ಲಿ ಪೋಷಕಾಂಶಗಳದ್ದೇ ಮಾತು 

2. ಒಲಿಂಪಿಕ್ಸ್ ಅಂಚೆ ಚೀಟಿಗಳ ಸಂಗ್ರಹಕ್ಕಾಗಿ ಕಂಚಿನ ಪದಕ ಗೆದ್ದಿರುವ ಬೆಂಗಳೂರಿನ ಉದ್ಯಮಿ

3. ಸ್ಯಾಲರಿ ಸ್ಲಿಪ್​ನ ಸೀಕ್ರೆಟ್ ಕಾಯ್ದುಕೊಳ್ಳಿ- ಬುದ್ಧಿವಂತಿಕೆಯಿಂದ ಕೆಲಸಕೊಡುವವರ ಮನಸ್ಸು ಗೆಲ್ಲಿ..!

Related Stories