ಆದಾಯ ಹೆಚ್ಚಿಸಿಕೊಳ್ಳಲು ರೈಲ್ವೇ ಇಲಾಖೆಯ ಹೊಸ ಮಾರ್ಗ- "ಮಿಷನ್ 41ಕೆ"ಗೆ ಚಾಲನೆ

ಟೀಮ್​ ವೈ.ಎಸ್​. ಕನ್ನಡ

ಆದಾಯ ಹೆಚ್ಚಿಸಿಕೊಳ್ಳಲು ರೈಲ್ವೇ ಇಲಾಖೆಯ ಹೊಸ ಮಾರ್ಗ- "ಮಿಷನ್ 41ಕೆ"ಗೆ ಚಾಲನೆ

Monday March 27, 2017,

2 min Read

ಭಾರತೀಯ ರೈಲ್ವೇ ವಿಶ್ವದಲ್ಲೇ ಪ್ರಸಿದ್ಧಿ ಪಡೆದಿದೆ. ಅತೀ ದೊಡ್ಡ ಸಂಪರ್ಕ ಸೇತುವೆಯಾಗಿ ದಾಖಲೆಗಳನ್ನು ಬರೆದಿದೆ. ಜನರ ನಡುವಿನ ಅತೀ ಕಡಿಮೆ ದರದ ಸಂಪರ್ಕ ಕೊಂಡಿಯೆಂಬ ಗರಿಮೆಯೂ ಭಾರತೀಯ ರೈಲ್ವೇಗಿದೆ. ಇತ್ತೀಚಿನ ದಿನಗಳಲ್ಲಿ ಭಾರತ ಆರ್ಥಿಕವಾಗಿ ಅಭಿವೃದ್ಧಿಯಾಗುತ್ತಿದೆ. ಕಳೆದೊಂದು ದಶಕದಲ್ಲಿ ಭಾರತ ಆರ್ಥಿಕವಾಗಿ ಶೇಕಡಾ 7ರಿಂದ 8ರಷ್ಟು ಅಭಿವೃದ್ಧಿ ಕಂಡಿದೆ. ಇದು ಭಾರತೀಯ ರೈಲ್ವೇಯ ಅಭಿವೃದ್ಧಿಗೂ ಸಹಕಾರಿ ಆಗಿದೆ.

image


ಈ ನಡುವೆ ಇಂಡಿಯನ್ ರೈಲ್ವೇ ಹೊಸ ಹೆಜ್ಜೆ ಇಡಲು ಸಜ್ಜಾಗಿದೆ. ಇದರ ಹೆಸರು "ಮಿಷನ್ 41 ಕೆ". ಮುಂದಿನ 10ವರ್ಷಗಳಲ್ಲಿ "ಮಿಷನ್ 41 ಕೆ"ಯನ್ನು ತಲುಪಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತದೆ. ಸದ್ಯ ಭಾರತೀಯ ರೈಲ್ವೇ ವಿದ್ಯುತ್ ಶಕ್ತಿ ಮೂಲಕ ಹೆಚ್ಚಿನ ಸ್ಥಳಗಳಲ್ಲಿ ಸಂಚರಿಸುತ್ತಿದೆ. ಆದ್ರೆ "ಮಿಷನ್ 41ಕೆ" ಪ್ರಕಾರ ಎಲ್ಲಾ ಲೈನ್​ಗಳು ವಿದ್ಯುತ್ ಬದಲು ಸೊಲಾರ್ ಶಕ್ತಿಯನ್ನು ಬಳಸಿಕೊಳ್ಳಲಿದೆ. ಈಗಾಗಲೇ ಭಾರತೀಯ ರೈಲ್ವೇ ಸುಮಾರು 4000 ಕೋಟಿ ರೂಪಾಯಿಗಳನ್ನು ಇಂಧನದ ಮೂಲಕ ಉಳಿತಾಯ ಮಾಡುತ್ತಿದೆ. ಆದ್ರೆ ಸೋಲಾರ್ ಶಕ್ತಿಯನ್ನು ಬಳಸಿದ್ರೆ ಸರಿಸುಮಾರು 41000 ಕೋಟಿ ರೂಪಾಯಿಗಳ ಉಳಿತಾಯವಾಗಲಿದೆ ಅನ್ನುವುದು ಹೊಸ ಯೋಜನೆ.

ಇದನ್ನು ಓದಿ: ಪೇಪರ್ ಮಾರುವ ಹುಡುಗಿಯ ಯಶೋಗಾಥೆ

ರೈಲ್ವೇನಲ್ಲಿ ಸೊಲಾರ್ ಶಕ್ತಿ ಬಳಸುವ ಮೂಲಕ ಆರ್ಥಿಕವಾಗಿ ಸಾಕಷ್ಟು ಉಳಿಕೆ ಮಾಡಬಹುದು. "ಮಿಷನ್ 41 ಕೆ" ಯೋಜನೆಗೆ ಇದು ವಿವಿಧ ರೀತಿಯಲ್ಲಿ ಸಹಾಯ ಮಾಡಲಿದೆ. ಖರ್ಚು ಕಡಿಮೆ ಮಾಡಿ ಲಾಭದ ಮೊತ್ತದಲ್ಲಿ ಹೆಚ್ಚಳ ಮಾಡುವಲ್ಲಿ ಸೋಲಾರ್ ಶಕ್ತಿ ಬಳಕೆ ಸಹಾಯ ಮಾಡಲಿದೆ. ಟಿಕೆಟ್ ಹೊರಾತಾಗಿ ಸುಮಾರು 17000 ಕೋಟಿ ಹೆಚ್ಚುವರಿ ಉಳಿತಾಯ ಈ ಮೂಲಕ ಆಗಲಿದೆ ಎಂದು ರೈಲ್ವೇ ಸಚಿವಾಲಯ ಅಂದಾಜು ಮಾಡಿದೆ.

ಇನ್ನು ಜಾಹೀರಾತು ಮೂಲಕವೂ ಆದಾಯಗಳಿಸಲು ರೈಲ್ವೇ ಇಲಾಖೆ ನಿರ್ಧಾರ ಮಾಡಿದೆ. ಸುಮಾರು 20,000 ಹೆಚ್ಚು ಜಾಹೀರಾತು ಡಿಸ್ಪ್ಲೇ ಸ್ಕ್ರೀನ್ ಅನ್ನು ರೈಲ್ವೇ ಇಲಾಖೆ ಶೀಘ್ರದಲ್ಲೇ ಅಳವಡಿಸಲಿದೆ. ಈ ಮೂಲಕ ಹೆಚ್ಚುವರಿಯಾಗಿ 10,000 ಕೋಟಿ ರೂಪಾಯಿ ಆದಾಯ ರೈಲ್ವೇ ಇಲಾಖೆ ಕೈ ಸೇರಲಿದೆ. ಅಷ್ಟೇ ಅಲ್ಲ ಪ್ರಯಾಣಿಕ ಸ್ನೇಹಿಯಾಗಿ ಮಾಡಲು ವಿವಿಧ ಯೋಜನೆಗಳನ್ನು ಜಾರಿಗೆ ತರಲು ಸಿದ್ಧತೆ ನಡೆಯುತ್ತಿದೆ. ಒಟ್ಟಿನಲ್ಲಿ ರೈಲ್ವೇ ಇಲಾಖೆ ಸಂಪೂರ್ಣವಾಗಿ ಬದಲಾವಣೆಯ ಹಾದಿ ಹಿಡಿದಿದೆ. 

ಇದನ್ನು ಓದಿ:

1. ಸ್ಮಾಲ್ ಸ್ಕ್ರೀನ್​ ಸೂಪರ್ ಸ್ಟಾರ್ - ಮಾತಿನಲ್ಲೇ ಪಟಾಕಿ ಸಿಡಿಸೋ ಆ್ಯಂಕರ್..!​ 

2. ಹೋಮ್​ವರ್ಕ್ ಬಗ್ಗೆ ಟೆನ್ಷನ್ ಇಲ್ಲ- ಇಷ್ಟವಿಲ್ಲದ ಸಬ್ಜೆಕ್ಟ್ ಓದ ಬೇಕಿಲ್ಲ- ಇದು ಫಿನ್​ಲೆಂಡ್ ಶೈಕ್ಷಣಿಕ ಕ್ರಾಂತಿ

3. ಭಾರತದ ಮೊಬೈಲ್​ ಮಾರುಕಟ್ಟೆಯ ಕಥೆ ಮತ್ತು ಅದರ ಬೆಳವಣಿಗೆ...