ವಾರದ ರಜೆಯಲ್ಲಿ ಸಮಾಜ ಸೇವೆ- ಪರಿಸರ ರಕ್ಷಣೆಗೆ ಗಿಡ ನೆಡುವ ಬಸ್ ಕಂಡಕ್ಟರ್

ಟೀಮ್​ ವೈ.ಎಸ್​. ಕನ್ನಡ

0

ಕಾಡು ಬೆಳೆಸಿ, ನಾಡು ಉಳಿಸಿ, ಹಸಿರೇ ನಮ್ಮ ಉಸಿರು.. ಹೀಗಂತ ಹೇಳಿಕೊಂಡು ಊರೆಲ್ಲಾ ಸುತ್ತುವ ಜನಕ್ಕೇನು ಕಡಿಮೆ ಇಲ್ಲ. ಆದ್ರೆ ಉಪಯೋಗ ಏನೂ ಇಲ್ಲ. ಪರಿಸರ ವಾದ ಅನ್ನೊದು ಕೇವಲ ಮಾತಿಗೆ ಮಾತ್ರ ಸೀಮಿತವಾಗಿರುವುದೇ ಹೆಚ್ಚು. ಆದ್ರೆ ಅಂತಹವರಿಗೆಲ್ಲಾ ಮಾದರಿ ಎಂ. ಯೋಗನಾಂತನ್.

49ವರ್ಷದ ಯೋಗನಂತಾನ್ ವೃತ್ತಿಯಲ್ಲಿ ಕಂಡಕ್ಟರ್. ಕೊಯಂಬತ್ತೂರಿನಲ್ಲಿ ಖಾಸಗಿ ಬಸ್​ನಲ್ಲಿ ನಿರ್ವಾಹಕನ ಕೆಲಸ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಯೋಗನಾಂತನ್ ಪರಿಸರ ವಾದಿ. ಆದ್ರೆ ಎಲ್ಲರಂತೆ ಬಾಯ್ಬಡ್ಕೊಂಡು ಓಡಾಡುವುದಿಲ್ಲ. ಬದಲಾಗಿ ಪರಿಸರಕ್ಕೆ ತಾನು ಹೇಗೆ ಕೊಡುಗೆ ನೀಡುಬಹುದು ಅನ್ನೋದನ್ನ ಕೆಲಸ ಮಾಡಿ ತೋರಿಸುತ್ತಿದ್ದಾರೆ. ಕಳೆದ 30 ವರ್ಷಗಳಿಂದ ಯೋಗನಾಂತನ್ ಈ ಕೆಲಸ ಮಾಡುತ್ತಿದ್ದಾರೆ. ತಮಿಳುನಾಡಿನ 32ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಮರಗಳನ್ನು ನೆಟ್ಟು ಪರಿಸರಕ್ಕೆ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡಿದ್ದಾರೆ.

ಯೋಗನಾಂತನ್ 30 ವರ್ಷಗಳಿಂದ ನಿರಂತರವಾಗಿ ಈ ಕೆಲಸ ಮಾಡಿಕೊಂಡು ಬಂದಿದ್ದಾರೆ. 1980ರ ದಶಕದಲ್ಲಿ ನೀಲ್​ಗಿರಿ ಕಾಡುಗಳಲ್ಲಿ ಮರ ಕಡಿಯುತ್ತಿದ್ದರು. ಆದ್ರೆ ಅದನ್ನು ಯಾರೂ ಕೂಡ ವಿರೋಧಿಸುವ ಗೋಜಿಗೆ ಹೋಗಲಿಲ್ಲ. ಆದ್ರೆ ಯೋಗನಾಂತನ್ ವಿಭಿನ್ನ ರೀತಿಯಲ್ಲಿ ಮರ ಕಡಿಯುವುದರ ವಿರುದ್ಧ ಪ್ರತಿಭಟನೆ ಆರಂಭಿಸಿದ್ರು.

“ಸೋಮವಾರ ನನಗೆ ವಾರದ ರಜಾ ಇರುತ್ತಿತ್ತು. ಆ ದಿನ ನಾನು ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳ ಕಾಂಪೌಡ್ ಒಳಗಡೆ ಮರಗಳನ್ನು ನೆಡುತ್ತಿದ್ದೆ. ಈ ಮೂಲಕ ಮರ ಕಡಿಯುವುದರ ವಿರುದ್ಧ ವಿಭಿನ್ನವಾಗಿ ಪ್ರತಿಭಟನೆ ಆರಂಭಿಸಿದೆ ”
- ಯೋಗನಾಂತನ್, ಮರಗಳ ಸಂರಕ್ಷಕ

ಯೋಗನಾಂತನ್ ಕಳೆದ 30 ವರ್ಷಗಳಲ್ಲಿ 3000ಕ್ಕೂ ಅಧಿಕ ಶಾಲೆಗಳಲ್ಲಿ, ಕಾಲೇಜುಗಳಲ್ಲಿ ಪರಿಸರ ರಕ್ಷಣೆ ಮತ್ತು ಮರಗಳ ರಕ್ಷಣೆ ಬಗ್ಗೆ ಪಾಠಗಳನ್ನು ಹೇಳಿಕೊಟ್ಟಿದ್ದಾರೆ. ಅಷ್ಟೇ ಅಲ್ಲ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳ ಕೈಯಲ್ಲೇ ಸಸಿ ನೆಟ್ಟು ಅದನ್ನು ಪೋಷಿಸುವ ಜವಾಬ್ದಾರಿಯನ್ನೂ ಕೂಡ ವಿದ್ಯಾರ್ಥಿಗಳಿಗೇ ವಿಭಿನ್ನವಾಗಿ ವಹಿಸುತ್ತಿದ್ದರು.

“ ನಾನು ವಿದ್ಯಾರ್ಥಿಗಳ ಕೈಗಳಿಂದ ಗಿಡಗಳನ್ನು ನೆಡೆಸುತ್ತಿದ್ದೆ. ಅದಕ್ಕೆ ಅವರ ಹೆಸರನ್ನೇ ಇಡುತ್ತಿದ್ದೆ. ಉಹಾರಣೆಗೆ ಪುಂಗೈ ಅನ್ನೋ ಗಿಡವನ್ನು ರಾಮು ನೆಟ್ಟರೆ, ಅದಕ್ಕೆ ರಾಮು ಪುಂಗೈ ಅನ್ನೋ ಹೆಸರು ಇಡುತ್ತಿದೆ. ಇದು ಗಿಡ ನೆಟ್ಟವರಿಗೆ ಅದನ್ನು ಪೋಷಿಸುವಂತೆ ಪ್ರೋತ್ಸಾಹ ನೀಡುತ್ತಿತ್ತು.”
- ಯೋಗನಾಂತನ್ ಮರಗಳ ಸಂರಕ್ಷಕ

ಯೋಗನಾಂತನ್ ಈ ಕೆಲಸಗಳ ವಿಚಾರದಲ್ಲಿ ಹಲವು ಬಾರಿ ರಜೆ ತೆಗೆದುಕೊಳ್ಳುತ್ತಿದ್ದರು. ಹೀಗಾಗಿ ಕಳೆದ 17 ವರ್ಷಗಳಲ್ಲಿ 40 ಬಾರಿ ವರ್ಗಾವಣೆಯ ಶಿಕ್ಷೆಯನ್ನು ಕೂಡ ಪಡೆದಿದ್ದರು. ಆದ್ರೆ ಯೋಗನಾಂತನ್ ತನ್ನ ಖಾಸಗಿ ಕೆಲಸಗಳಿಗೆ ಒಂದೇ ಒಂದು ದಿನ ರಜೆಯನ್ನು ತೆಗೆದುಕೊಂಡಿಲ್ಲ ಅನ್ನೋದು ಅವರ ಪರಿಸರ ಪ್ರೇಮವನ್ನು ತೋರಿಸುತ್ತಿದೆ.

ಕಳೆದ ಕೆಲವು ವರ್ಷಗಳಿಂದ ಯೋಗನಾಂತನ್ರನ್ನು ಹಲವು ಪ್ರಶಸ್ತಿಗಳನ್ನು ಹುಡುಕಿಕೊಂಡು ಬಂದಿವೆ. ಹೀಗಾಗಿ ಕಂಡಕ್ಟರ್ ಕೆಲಸ ಕೊಟ್ಟ ಮಾಲೀಕರು ಯೋಗನಾಂತನ್ ವರ್ಗಾವಣೆಯನ್ನು ಸ್ಥಗಿತಗೊಳಿಸಿದ್ದಾರೆ. ಎಲ್ಲಾ ಕಡೆಗಳಿಂದ ಪ್ರಶಸ್ತಿ ಬಂದಿದ್ದರೂ ಯೋಗನಾಂತನ್ ತನ್ನ ಕೆಲಸವನ್ನು ಇಂದಿಗೂ ನಿಲ್ಲಿಸಿಲ್ಲ. ಗಿಡಿ ನೆಡುವ ಕಾರ್ಯ ಪ್ರತಿನಿತ್ಯ ನಡೆಯುತ್ತಿದೆ.

ಇದನ್ನು ಓದಿ:

1. ಅಭಿವೃದ್ಧಿ ಮಂತ್ರದ ಮಧ್ಯೆ ಇದು ಮರತೇ ಹೋಗಿದೆ.!

2. ಜಗತ್ತಿನ ಅತಿ ಹಿರಿಯ ಶಾರ್ಪ್ ಶೂಟರ್ : 'ರಿವಾಲ್ವರ್ ದಾದಿ'

3. ಸಾಮಾಜಿಕ ಪಿಡುಗಿಗೆ ಸವಾಲೊಡ್ಡಿದ ದಿಟ್ಟೆ..