ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು ಸೇದಿದರೆ ಜೋಕೇ..!

ಟೀಮ್​ ವೈ.ಎಸ್​. ಕನ್ನಡ

2

ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು ಸೇದುವ ವಿರುದ್ಧ ಜಾಗೃತಿ ಮೂಡುತ್ತಿದೆ. ಸಿಗರೇಟು ಮತ್ತು ತಂಬಾಕು ಉತ್ಪನ್ನಗಳ ವಿರುದ್ಧ ಹೋರಾಟವೂ ಆರಂಭವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆ್ಯಂಟಿ ಸ್ಮೋಕಿಂಗ್ ಕಾಂಪೇನ್ ಅಂಡರ್​ ದಿ  ಸಿಗರೇಟ್ ಅಂಡ್ ಅದರ್ ಟೊಬ್ಯಾಕೋ ಆ್ಯಕ್ಟ್ (COTPA) ಅಡಿಯಲ್ಲಿ ಹೊಸ ಚಳುವಳಿಯೇ ಆರಂಭವಾಗಿದೆ.

ಕಳೆದ ಫೆಬ್ರವರಿ ಎರಡನೇ ವಾರದಲ್ಲಿ ಈ ಹೋರಾಟ ಆರಂಭವಾಗಿದೆ. ಕೇವಲ ಒಂದೇ ಒಂದು ತಿಂಗಳಲ್ಲಿ ದೆಹಲಿ ಪೊಲೀಸರು, ಸಾರ್ವಜನಿಕ ಸ್ಥಳದಲ್ಲಿ ದೂಮ್ರಪಾನ ಮಾಡುತ್ತಿದ್ದ ಸುಮಾರು 700ಕ್ಕೂ ಹೆಚ್ಚು ಜನರಿಗೆ ದಂಡವಿಧಿಸಿದ್ದಾರೆ. COTPA ಆ್ಯಕ್ಟ್ ಪ್ರಕಾರ ಸಾರ್ವಜನಿಕ ಸ್ಥಳದಲ್ಲಿ ತಂಬಾಕು ಉತ್ಪನ್ನ ಮತ್ತು ಸಿಗರೇಟು ಸೇದುವಂತಿಲ್ಲ. ಈ ಕಾನೂನಿನ ಅನ್ವಯವೇ ದೆಹಲಿ ಪೊಲೀಸರು ಕಾರ್ಯಚರಣೆ ಮಾಡುತ್ತಿದ್ದಾರೆ. ಶಾಲಾವಲಯ ಮತ್ತು ಶೈಕ್ಷಣಿಕ ಸಂಸ್ಥೆಗಳು ಇರುವ ಜಾಗದ 100 ಮೀಟರ್ ಒಳಗಡೆ ತಂಬಾಕು ಉತ್ಪನ್ನಗಳನ್ನು ಮಾರುವಂತಿಲ್ಲ. ಹೀಗಾಗಿ ಇಂತಹ ಸ್ಥಳಗಳಲ್ಲೂ ಪೊಲೀಸರು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

ಈ ಹಿಂದೆ ದೆಹಲಿ ಪೊಲೀಸರು ಸಾರ್ವಜನಿಕ ಸ್ಥಳಗಳಲ್ಲಿ ಧೂಮ್ರಪಾನ ಮಾಡಿದವರಿಗೆ “ಕಲಾಂದ್ರ” ನಿಯಮದಂತೆ ಒಂದು ನೊಟೀಸ್ ಕೊಡುತ್ತಿದ್ದರು. ತಪ್ಪಿತಸ್ಥರು ಮ್ಯಾಜಿಸ್ಟ್ರೇಟ್ ಕೋರ್ಟ್​ನಲ್ಲಿ ದಂಡ ಕಟ್ಟುತ್ತಿದ್ದರು.

“ ಕಲಾಂದ್ರ ನಿಯಮ ಅಷ್ಟೊಂದು ಕಠಿಣವಾಗಿರಲಿಲ್ಲ. ತಪ್ಪಿತಸ್ಥರು ಪೊಲೀಸರಿಗೆ ಐ.ಡಿ. ಕಾರ್ಡ್​ಗಳನ್ನಾಗಲಿ ಅಥವಾ ಪೊಲೀಸರು ವಿಧಿಸಿದ್ದ ದಂಡವನ್ನು ಕೋರ್ಟ್​ನಲ್ಲಿ ಕಟ್ಟುತ್ತಿರಲಿಲ್ಲ. ಆದ್ರೆ COTPA ಆ್ಯಕ್ಟ್ ಪ್ರಕಾರ ತಪ್ಪಿಸ್ಥರಿಗೆ ಸ್ಥಳದಲ್ಲೇ ದಂಡವಿಧಿಸಲಾಗುತ್ತಿದೆ. ಹೀಗಾಗಿ ಇದು ಹೆಚ್ಚು ಪರಿಣಾಮಕಾರಿಯಾಗಿದೆ. ”
- ಹೀನಾ ಶೇಕ್, ಸಂಬಂಧ ಹೆಲ್ತ್ ಫೌಂಡೇಷನ್

ಹೊಸ ಕಾನೂನು ಜಾರಿಗೆ ಬಂದ ಮೇಲೆ ದೆಹಲಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಮತ್ತು ತಂಬಾಕು ಉತ್ಪನ್ನಗಳನ್ನು ಮಾರುವವರು ಹೆಚ್ಚು ಜಾಗೃತರಾಗಿದ್ದಾರೆ. ಪೊಲೀಸರು ಕೂಡ ತಪ್ಪಿತಸ್ಥರಿಗೆ ಯಾವುದೇ ರೀತಿಯ ಮೂಲಾಜನ್ನು ತೋರಿಸುತ್ತಿಲ್ಲ.

“ ಈಗಾಗಲೇ ನಾವು 200ಕ್ಕೂ ಹೆಚ್ಚು ತಪ್ಪಿತಸ್ಥರಿಗೆ ಸ್ಥಳದಲ್ಲೇ ದಂಡವಿಧಿಸಿದ್ದೇವೆ. ಪಶ್ಚಿಮ ದೆಹಲಿಯಲ್ಲಿ ಪ್ರತಿನಿತ್ಯ ಕನಿಷ್ಠ 5ರಿಂದ 7 ಜನರು ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳನ್ನು ಸೇವಿಸಿ ಸಿಕ್ಕಿಬೀಳುತ್ತಿದ್ದಾರೆ.”
ಓಂವೀರ್ ಸಿಂಗ್, ಡಿಸಿಪಿ, ಪಶ್ಚಿಮ ದೆಹಲಿ

ಈ ಮಧ್ಯೆ ದೆಹಲಿ ಪೊಲೀಸರು ಸುಮಾರು 5 ಹುಕ್ಕಾಬಾರ್​ಗಳಿಗೆ ಬೀಗ ಜಡಿದಿದ್ದಾರೆ. COTPA ಆ್ಯಕ್ಟ್ ಪ್ರಕಾರ ಉತ್ತರ ದೆಹಲಿಯ ಪೊಲೀಸರು 263ಜನರಿಗೆ ದಂಡ ವಿಧಿಸಿದ್ದಾರೆ. ಆಗ್ನೇಯ ದೆಹಲಿಯಲ್ಲಿ ಸುಮಾರು 250 ಜನರುಸ ದಂಡ ಕಟ್ಟಿದ್ದಾರೆ.

ಇದನ್ನು ಓದಿ: ನಿಮ್ಮ ಮನೆಗೆ ಮರಳು, ಇಟ್ಟಿಗೆ ಬೇಕಿಲ್ಲ ಇದೊಂದಿದ್ರೆ ಸಾಕು!

ಈ ನಡುವೆ ದೆಹಲಿಯಲ್ಲಿ ತಂಬಾಕು ಉತ್ಪನ್ನಗಳ ಸೇವನೆಯ ಸಂಖ್ಯೆ ಕಡಿಮೆ ಆಗುತ್ತಿದೆ. ಸದ್ಯ ದೆಹಲಿಯಲ್ಲಿ ಸುಮಾರು ಶೇಕಡಾ 24.3ರಷ್ಟು ಜನರು ಸಿಗರೇಟು, ತಂಬಾಕು ಉತ್ಪನ್ನಗಳನ್ನು ಸೇವಿಸುತ್ತಿದ್ದಾರೆ. ತಂಬಾಕು ಉತ್ಪನ್ನಗಳನ್ನು ಸೇವಿಸಿ, ವರ್ಷವೊಂದಕ್ಕೆ ಸುಮಾರು 10000 ಜನರು ಸಾವನ್ನಪ್ಪುತ್ತಿದ್ದಾರೆ ಅನ್ನುವ ವರದಿ ಆತಂಕ ಹುಟ್ಟಿಸಿದೆ. ಈಗ COTPA ನಿಯಮದಂತೆ ತಂಬಾಕು ಉತ್ಪನ್ನಗಳ ವಿರುದ್ಧ ಹೋರಾಟ ಆರಂಭವಾಗಿದ್ದರೂ, ಅದು ಸಾಗಬೇಕಾದ ಹಾದಿ ಇನ್ನೂ ದೊಡ್ಡದಿದೆ.

ಕೆಳ ತಿಂಗಳ ಹಿಂದೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಸಾರ್ವಜನಿಕ ಸ್ಥಳಗಳಲ್ಲಿಸಿಗರೇಟು ಮತ್ತು ತಂಬಾಕು ಉತ್ಪನ್ನಗಳನ್ನು ಸೇವಿಸುವುದು, ಮಾರಾಟಮಾಡುವುದನ್ನು ನಿಷೇಧಿಸಲಾಗಿತ್ತು. COTPA ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು ಮತ್ತು ತಂಬಾಕು ಉತ್ಪನ್ನಗಳನ್ನು ಸೇವಿಸಿ ಸಿಕ್ಕಿಬಿದ್ದ ವ್ಯಕ್ತಿಗೆ 200 ರೂಪಾಯಿ ದಂಡವಿಧಿಸಲಾಗಿತ್ತು. ಆದ್ರೆ ಬೆಂಗಳೂರು ಪೊಲೀಸರು ಇತ್ತೀಚಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಹೀಗಾಗಿ ಬೆಂಗಳೂರಿನಲ್ಲಿ ಕಾನೂನು ಕಟ್ಟುನಿಟ್ಟಾಗಿ ಜಾರಿಯಾಗಿಲ್ಲ ಅನ್ನುವುದೇ ಬೇಸರದ ಸಂಗತಿ.

ಇದನ್ನು ಓದಿ:

1. ಆಧಾರ್ ಕಾರ್ಡ್ ಇಲ್ಲದೇ ಇದ್ರೆ ಮಧ್ಯಾಹ್ನ ಊಟದ ಯೋಜನೆ ಲಾಭ ಸಿಗಲ್ಲ 

2. ಹಸಿದವರ ಹೊಟ್ಟೆ ತುಂಬಿಸಲು ನೆರವು ಕೇಳಿದ ಆಸ್ಕರ್ ವಿಜೇತ ನಟಿ

3. ಮಹಿಳಾ ಕ್ರಿಕೆಟ್​​ನಲ್ಲಿ ಹೊಸ ಸಂಚಲನ- ಅಂತರಾಷ್ಟ್ರೀಯ ಮಹಿಳಾ ದಿನದಂದು ಹೊಸ ಲೀಗ್ ಆರಂಭ

Related Stories