ಹಳೆಯ ಬಟ್ಟೆಗಳನ್ನು ಸ್ಟೈಲಿಷ್ ಆಗಿ ಪರಿವರ್ತಿಸುವ ಯುವಕ- ವಸ್ತ್ರಗಳ ಮರುಬಳಕೆ ಪಾಠ ಮಾಡುತ್ತಿರುವ ಯಾಕೂಬ್

ಟೀಮ್​ ವೈ.ಎಸ್​. ಕನ್ನಡ

ಹಳೆಯ ಬಟ್ಟೆಗಳನ್ನು ಸ್ಟೈಲಿಷ್ ಆಗಿ ಪರಿವರ್ತಿಸುವ ಯುವಕ- ವಸ್ತ್ರಗಳ ಮರುಬಳಕೆ ಪಾಠ ಮಾಡುತ್ತಿರುವ ಯಾಕೂಬ್

Sunday April 09, 2017,

2 min Read

ಇವತ್ತು ನಾವು ಮನಸ್ಸಿಗೆ ಇಷ್ಟ ಬಂದ ಬಟ್ಟೆ ಹಾಕಿಕೊಳ್ಳಬಹುದು. ತಾಕತ್ತು ಮತ್ತು ಜೇಬು ಗಟ್ಟಿಯಾಗಿದ್ದರೆ ದಿನಕ್ಕೊಂದು ಬಟ್ಟೆಯನ್ನು ಕೂಡ ಖರೀದಿ ಮಾಡಬಹುದು. ಆದ್ರೆ ಇದೆಲ್ಲವೂ ಕೈಗಾರಿಕಾ ಕ್ರಾಂತಿಯ ಬಳಿಕದ ಮಾತು. ಆದ್ರೆ ಅದಕ್ಕೂ ಮುನ್ನ ಯಾವುದೇ ವಸ್ತುಗಳು ಅಂದುಕೊಂಡ ಹಾಗೇ ಸಿಗುತ್ತಿರಲಿಲ್ಲ. ಉಡುಪುಗಳ ಖರೀದಿಯಂತೂ ಕಷ್ಟದ ಮಾತೇ ಆಗಿತ್ತು. ಹೀಗಾಗಿ ಆ ಕಾಲದಲ್ಲಿ ವಿಶ್ವದೆಲ್ಲೆಡೆ, ಒಮ್ಮೆ ಬಟ್ಟೆ ಖರೀದಿ ಮಾಡಿದ್ರೆ ಮುಗೀತು. ಅದನ್ನು ಮರುಬಳಕೆ ಮಾಡಬೇಕಿತ್ತು. ಒಂಚೂರು ಹರಿದ್ರೆ ಅದನ್ನು ಹೊಲಿದು ಮತ್ತೆ ಹಾಕಿಕೊಳ್ಳುವ ಹಾಗೇ ಮಾಡಲಾಗುತ್ತಿತ್ತು. ಇವತ್ತಿಗೂ ಬಹುತೇಕ ಎಲ್ಲಾ ಕಡೆ ಬಟ್ಟೆಯ ರಿಪೇರಿ ಮಾಡುವ ಕೆಲಸ ನಡೆಯುತ್ತಿದೆ. ಭಾರತದಲ್ಲಂತೂ ಈ ಉಡುಪುಗಳ ಆಲ್ಟ್ರೇಷನ್ ಮತ್ತು ಅದನ್ನು ಸರಿಯಾದ ರೀತಿಯಲ್ಲಿ ಇರುವಂತೆ ನೋಡಿಕೊಳ್ಳುವ ಕಾರ್ಯ ನಡೆಯುತ್ತಲೇ ಇದೆ. ಈ ಕಥೆಯನ್ನು ಯಾಕೂಬ್ ಆಲಿ ಮನಕಲುಕುವಂತೆ ಹೇಳುತ್ತಾರೆ.

image


ಯಾಕೂಬ್ ಆಲಿ ಮೂಲ ಉತ್ತರ ಪ್ರದೇಶದ ಸಗರ್ಪುರ್. ನಾಲ್ಕು ವರ್ಷಗಳ ಹಿಂದೆ ಕೆಲಸದ ಹುಟುಕಾಟದಲ್ಲಿ ಗುಜರಾತ್​ನ ವಡೋದರಾಕ್ಕೆ ಬಂದು ತಲಪಿದ್ರು. ಯಾಕೂಬ್ ಒಂದು ಕೈಮಗ್ಗದ ಯಂತ್ರವನ್ನು ಹೊಂದಿದ್ದರು. ಇದ್ರಲ್ಲಿ ಹಳೆಯ, ಹರಿದ ಬಟ್ಟೆಗಳನ್ನು ರಿಪೇರಿ ಮಾಡುವುದು, ಬೆಡ್​ಶೀಟ್, ಸೋಫಾ ಕವರ್, ಡೋರ್ ಮ್ಯಾಟ್ ಸೇರಿದಂತೆ ಹಲವು ವಸ್ತುಗಳನ್ನು ಮತ್ತೆ ಬಳಕೆಗೆ ಬರುವಂತೆ ಮಾಡಲಾಗುತ್ತದೆ. ಯಾಕೂಬ್ ನೆಲೆಸುತ್ತಿದ್ದ ಹಳ್ಳಿಯಲ್ಲಿ ಈ ಕಾರ್ಯ ಹಲವು ದಶಕಗಳಿಂದಲೇ ನಡೆದುಕೊಂಡು ಬರುತ್ತದೆ. ಅಷ್ಟೇ ಅಲ್ಲ ಈ ರೀತಿಯ ಕೈ ಮಗ್ಗದ ಯಂತ್ರ ಸಗರ್ಪುರ್ ಹಳ್ಳಿಯ ಪ್ರತಿಯೊಂದು ಮನೆಯಲ್ಲೂ ಇದೆಯಂತೆ.

ಇದನ್ನು ಓದಿ: ಹೈ-ವೇನಲ್ಲೇ ಡಾಬಾಕ್ಕೆ ಹೋಗಬೇಕಿಲ್ಲ- ಸಿಟಿಗೂ ಎಂಟ್ರಿಯಾಗಿದೆ..! 

ಬಟ್ಟೆಗಳ ಮರು ಬಳಕೆ ಸಾಕಷ್ಟು ಮಹತ್ವವನ್ನು ಪಡೆದಿದೆ. ಬಟ್ಟೆಗಳ ಕೊರತೆ ಉಂಟಾದಾಗ ಮರುಬಳಕೆಯ ಮಹತ್ವ ಹೆಚ್ಚಾಗಿ ತಿಳಿಯುತ್ತಿದೆ. ಹಳೆಯ ಬಟ್ಟೆಗಳಲ್ಲಿ ಕಸುಬು ಮಾಡಿ, ಅದನ್ನು ಉಪಯೋಗಕ್ಕೆ ಬರುವಂತೆ ಮಾಡುವುದರಲ್ಲಿ ಯಾಕೂಬ್ ಎತ್ತಿದ ಕೈ. ಚಿಕ್ಕ ವಯಸ್ಸಿನಲ್ಲೇ ಯಾಕೂಬ್ ಈ ಕೆಲಸವನ್ನು ಮಾಡುತ್ತಾ ಬೆಳೆದಿದ್ದರು. ಇವತ್ತು ನಗರದ ಜನ ಕೂಡ ಬಂದು ಬಟ್ಟೆ ರಿಪೇರಿ ಮಾಡಿಕೊಡುವ ಬಗ್ಗೆ ವಿಚಾರಣೆ ನಡೆಸುತ್ತಾರೆ. ದಿನವೊಂದಕ್ಕೆ ಸುಮಾರು 4 ಆರ್ಡರ್​​ಗಳನ್ನು ಕೂಡ ಪಡೆಯುತ್ತಾರೆ. ಕೆಲಸಗಳ ಆಧಾರ, ಕೆಲಸಕ್ಕೆ ಹಿಡಿಯುವ ಸಮಯವನ್ನು ಲೆಕ್ಕ ಹಾಕಿ ಆ ಬಟ್ಟೆಗಳಿಗೆ ಮಜೂರಿಯನ್ನು ಪಡೆಯುತ್ತಾರೆ.

image


ಯಾಕೂಬ್ ಕೈಯಲ್ಲಿರುವ ಕೈಮಗ್ಗದ ಯಂತ್ರ ಸುಮಾರು 5000 ರೂಪಾಯಿ ಬೆಲೆ ಬಾಳುತ್ತದೆ. ಉತ್ತರ ಪ್ರದೇಶದಿಂದ ವಡೋದರಾ ತನಕ ಅದನ್ನು ಬಿಡಿಭಾಗಗಳನ್ನಾಗಿ ಪರಿವರ್ತಿಸಿ ಸಾಗಾಣಿಕೆ ಮಾಡಲಾಗಿತ್ತು. ನಿಧಾನವಾಗಿ ಯಾಕೂಬ್ ಹೆಚ್ಚು ಹೆಚ್ಚು ಜನರಿಗೆ ಪರಿಚಿತರಾಗುತ್ತಿದ್ದಾರೆ. ಆರ್ಡರ್​ಗಳು ಹೆಚ್ಚಾಗಿ ಸಿಗುತ್ತಿವೆ. ಇದೇ ಕೆಲಸದ ಮೂಲಕ ಭವಿಷ್ಯ ಕಂಡುಕೊಳ್ಳುವ ಕನಸು ಯಾಕೂಬ್​ಗಿದೆ.

ನಗರದ ಜನತೆ ಹಳೆಯ ಬಟ್ಟೆಗಳ ಬಗ್ಗೆ ಗಮನ ಕೊಡುವುದು ಕೊಂಚ ಕಡಿಮೆ. ಆದ್ರೆ ಇತ್ತೀಚಿಗೆ ಈ ಬಗ್ಗೆ ಹೆಚ್ಚು ಜಾಗೃತಿ ಮೂಡುತ್ತಿದೆ. ಅಷ್ಟೇ ಅಲ್ಲ ಬಟ್ಟೆಗಳ ಮರುಬಳಕೆಗಳ ಬಗ್ಗೆ ಅರಿವು ಕೂಡ ಹೆಚ್ಚಾಗಿದೆ. ದಶಕಗಳ ಹಿಂದಿನ ಬದುಕು ಮತ್ತೆ ನೆನಪಾಗುತ್ತಿದೆ. 

ಇದನ್ನು ಓದಿ:

1. ಭಾರತದ ವಾರೆನ್ ಬಫೆಟ್ ಕಥೆ ಗೊತ್ತಾ..? ಅಂಬಾನಿ ಸಂಪತ್ತಿಗೆ ಸವಾಲೆಸೆದ “ಧಮನಿ”..!

2. ನೃತ್ಯದ ಶಕ್ತಿ+ಮಾತಿನ ಯುಕ್ತಿ = ವಸಂತ ವೈಕುಂಠ

3. ರೈತರ ಪ್ರಾಣ ಉಳಿಸಲು "ಬೀಜೋತ್ಸವ"