ಕುಗ್ರಾಮದ ಮನೆಗಳಿಗೆ ಸೋಲಾರ್ ಭಾಗ್ಯ..!

ಟೀಮ್​ ವೈ.ಎಸ್​.ಕನ್ನಡ

1

ಭಾರತ ಅಭಿವೃದ್ಧಿಯ ಕಡೆ ಮುಖ ಮಾಡುತ್ತಿದೆ. ಆದ್ರೆ ಭಾರತದ ಹಳ್ಳಿಗಳು ಇನ್ನೂ ಕೂಡ ವಿದ್ಯುತ್ ಸಂಪರ್ಕದ ಅದೃಷ್ಟವನ್ನು ಪಡೆದಿಲ್ಲ. ಭಾರತದಲ್ಲಿ ಸುಮಾರು 10,000ಕ್ಕೂ ಅಧಿಕ ಹಳ್ಳಿಗಳು ಇನ್ನೂ ಕೂಡ ವಿದ್ಯುತ್ ವಿದ್ಯುತ್ ಸಂಪರ್ಕವನ್ನು ಪಡೆದಿಲ್ಲ. ಇನ್ನು ಕೆಲವು ಹಳ್ಳಿಗಳು ವಿದ್ಯುತ್ ಸಂಪರ್ಕವನ್ನು ಪಡೆದಿದ್ರೂ, ಪ್ರತಿದಿನವೂ ಸಾಕಷ್ಟು ವಿದ್ಯುತ್ ಅನ್ನು ಪಡೆಯುತ್ತಿಲ್ಲ.

ಆದ್ರೆ ಈಗ ಈ ದುಃಸ್ಥಿತಿಯನ್ನು ಬದಲಿಸಲು ಇಂಗ್ಲೆಂಡ್ ನ ಇಂಪೀರಿಯಲ್ ಕಾಲೇಜ್ ನ ವಿದ್ಯಾರ್ಥಿ ಕ್ಲಮೆಂಟಿನ್ ಚಂಬನ್, ಮುಂದೆ ಬಂದಿದ್ದಾಳೆ. ಈಕೆ ಉತ್ತರ ಪ್ರದೇಶದ ಕುಗ್ರಾಮಗಳ ಮನೆಗೆ ಪವರ್ ಕಟ್ ಇಲ್ಲದಂತೆ ಪವರ್ ಒದಗಿಸುವ ಕೆಲಸದಲ್ಲಿ ನಿರತರಾಗಿದ್ದಾಳೆ. ಈಗಾಗಲೇ ಸುಮಾರು 100 ಮನೆಗಳಿಗೆ ಈ ವಿದ್ಯುತ್ ಭಾಗ್ಯ ಸಿಕ್ಕಿದೆ.

ಇದನ್ನು ಓದಿ: ಓದಿದ್ದು ಎಂಬಿಎ, ಆಗಿದ್ದು ಕೋಳಿ ಫಾರ್ಮ್ ಮಾಲೀಕ..!

ಇಂಗ್ಲೆಂಡ್ ನಲ್ಲಿ ಕ್ಲೆಮೆಂಟಿನ್,ಎಂಜಿನಿಯರಿಂಗ್ ನಲ್ಲಿ ಅಂತಿಮ ವರ್ಷದ ಪಿಎಚ್ ಡಿ ಮಾಡುತ್ತಿದ್ದಾಳೆ. ಊರ್ಜಾ ಸೋಶಿಯಲ್ ವೆಂಚರ್ ಸ್ಟಾರ್ಟ್ ಅಪ್ ಜೊತೆ ಕೈ ಜೋಡಿಸಿ ಸಾಮಾಜಿಕ ಕೆಲಸಗಳನ್ನು ಕೂಡ ಮಾಡುತ್ತಿದ್ದಾಳೆ.ಮಿನಿ ಸೋಲಾರ್ ಗ್ರಿಡ್ ಸ್ಥಾಪಿಸಿ, ಸುಮಾರು 1000 ಮನೆಗಳಿಗೆ ವಿದ್ಯುತ್ ಒದಗಿಸುವ ಸೌಲಭ್ಯವನ್ನು ಮಾಡುತ್ತಿದ್ದಾಳೆ.

ವಿದ್ಯುತ್ ಹೊರತು ಪಡಿಸಿ ಸೋಲಾರ್ ಎಜರ್ನಿಯನ್ನು ಬಳಸಿಕೊಳ್ಳುವ ಬಗ್ಗೆಯೂ ಪ್ಲಾನ್ ಗಳು ನಡೆಯುತ್ತಿವೆ. ಸೋಲಾರ್ ಶಕ್ತಿಗೆ ಹೆಚ್ಚು ಮಾರ್ಕೆಟ್ ಕೂಡ ಸಿಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ, ಭಾರತ ಸುಮಾರು 10,000 ಮೆಗಾವ್ಯಾಟ್ ಗಿಂತ ಅಧಿತ ವಿದ್ಯುತ್ ಅನ್ನು ಸೊಲಾರ್ ಮೂಲಕ ಉತ್ಪಾದಿಸಿದೆ. ಮುಂದಿನ ಮೂರು ವರ್ಷಗಳಲ್ಲಿ ಇದರ ಪ್ರಮಾಣ ಸುಮಾರು 20,000 ಮೆಗಾ ವ್ಯಾಟ್ ತಲುಪುವ ಸಾಧ್ಯತೆ ನಿಚ್ಚಳವಾಗಿದೆ.

ವಿದ್ಯುತ್ ಭಾಗ್ಯ ಪಡೆದ ಜನರ ಮುಖದಲ್ಲಿ ನಗು ಕಾಣುವುದೇ ಕ್ಲೆಮೆಂಟಿನ್​ಗೆ  ಹೆಚ್ಚು ಸಂತಸ ತಂದುಕೊಡುತ್ತಿದೆ. ವಿದ್ಯುತ್ ಸಂಪರ್ಕದಿಂದಾಗಿ ಮಕ್ಕಳ ಓದು ಕೂಡ ಸುಗಮವಾಗುತ್ತಿದೆ. ಈ ಗ್ರಾಮಗಳಲ್ಲಿರುವ ಶಾಲೆಗಳಿಗೆ ನೀಡಿದ ವಿದ್ಯುತ್ ಸಂಪರ್ಕದಿಂದಾಗಿ ಮುಂದಿನ ದಿನಗಳಲ್ಲಿ ಕಂಪ್ಯೂಟರ್ ಸೇರಿದಂತೆ ಉತ್ತಮ ಶಿಕ್ಷಣ ಸಿಗಲಿದೆ ಎಂದು ನಂಬಲಾಗಿದೆ.

ಉತ್ತರ ಪ್ರದೇಶದ ಹಲವು ಗ್ರಾಮಮಗಳಲ್ಲಿ ಕೃಷಿ ಮತ್ತು ಪಶುಸಂಗೋಪನೆಯೇ ಪ್ರಮುಖ ಜೀವನಾಧಾರದ ಕೆಲಸವಾಗಿದೆ. ಸೊಲಾರ್ ಶಕ್ತಿಯ ಬಳಕೆಯಿಂದ ಗ್ರಾಮಗಳಲ್ಲಿ ಡಿಸೇಲ್ ಪಂಪ್ ಗಳ ಬಳಕೆ ಕಡಿಮೆಯಾಗಲಿದೆ. ಜನರು ಇಲ್ಲಿ ತನಕ ಡಿಸೇಲ್ ಪಂಪ್ ಗಳ ಮೂಲಕ ತಮ್ಮ ಕೃಷಿ ಚಟುವಟಿಕೆಗಳಿಗೆ ನೀರು ಸರಬರಾಜು ಮಾಡುತ್ತಿದ್ದರು. ಡಿಸೇಲ್ ದರ ಹೆಚ್ಚಾದಾಗ ಕೃಷಿಕರಿಗೂ ತೊಂದರೆಯಾಗುತ್ತಿತ್ತು. ಆದ್ರೆ ಈಗ ಆ ಸಮಸ್ಯೆ ಕೂಡ ದೂರವಾಗಿದೆ ಎಂದು ಕ್ಲೆಮೆಂಟಿನ್ ಹೆಮ್ಮೆಯಿಂದ ಹೇಳುತ್ತಿದ್ದಾಳೆ.

ಈಗಾಗಲೇ ಕ್ಲೆಮೆಂಟಿನ್ ಸಾಕಷ್ಟು ಕೆಲಸಗಳನ್ನು ಮಾಡಿ ಮುಗಿಸಿದ್ದಾಳೆ. ಆದ್ರೆ ಇಷ್ಟಕ್ಕೇ ತೃಪ್ತರಾಗಿಲ್ಲ. ಸಾಧ್ಯವಾದಷ್ಟು ಮನೆಗಳಿಗೆ ವಿದ್ಯುತ್ ಸಂಪರ್ಕ ಕೊಡಿಸುವ ಪಣ ತೊಟ್ಟಿದ್ದಾಳೆ. ವಿದ್ಯುತ್ ಶಕ್ತಿಯ ಜೊತೆಗೆ ಸೊಲಾರ್ ಪ್ಲಾಂಟ್ ಗಳನ್ನು ಜೋಡಿಸಿ, ಗ್ರಾಮಗಳಲ್ಲಿ ಪವರ್ ಕಟ್ ಇಲ್ದೇ ಇರುವಂತೆ ಮಾಡುವ ಯೋಚನೆಗಳಿವೆ. ಒಟ್ಟಿನಲ್ಲಿ ಉತ್ತರ ಪ್ರದೇಶದ ಹಲವು ಮನೆಗಳಲ್ಲಿ ಈಗ ಹಬ್ಬದ ಸಂಭ್ರಮವಿದೆ. 

ಇದನ್ನು ಓದಿ:

1. ಹೆಂಗಸರಿಗೆ ತಪ್ಪಿಲ್ಲ ನೀರಿನ ಬವಣೆ- ಆಗಬೇಕಿದೆ ವ್ಯವಸ್ಥೆಯಲ್ಲಿ ಭಾರೀ ಸುಧಾರಣೆ

2. ಆ್ಯಪ್​ನಲ್ಲೇ ಪಠ್ಯ, ಆ್ಯಪ್​ನಲ್ಲೇ ಓದು- ಇದು ಬಡ ಮಕ್ಕಳ ನೆರವಿಗೆ ನಿಂತ ಶಂಕರ್ ಯಾದವ್ ಕಥೆ

3. ಅಡಕೆ ಕೊಯ್ಲಿನ ಚಿಂತೆ ಬಿಡಿ- ಹೊಸ ಯಂತ್ರದ ಬಗ್ಗೆ ತಿಳಿದುಕೊಳ್ಳಿ..!

Related Stories