ಹೆಂಗಸರಿಗೆ ತಪ್ಪಿಲ್ಲ ನೀರಿನ ಬವಣೆ- ಆಗಬೇಕಿದೆ ವ್ಯವಸ್ಥೆಯಲ್ಲಿ ಭಾರೀ ಸುಧಾರಣೆ

ಟೀಮ್​ ವೈ.ಎಸ್​. ಕನ್ನಡ

0

ಭಾರತದಲ್ಲಿ ಕುಡಿಯುವ ನೀರಿಗಾಗಿ ನಡೆಯುತ್ತಿರುವ ವಾದ-ವಿವಾದ ಅಷ್ಟಿಷ್ಟಲ್ಲ. ರಾಜ್ಯಗಳ ನಡುವೆ ನೀರಿನ ಹಂಚಿಕೆ ವಿಚಾರ ಹೆಚ್ಚು ಸುದ್ದಿ ಮಾಡ್ತಿದೆ. ಆದ್ರೆ ಅದಕ್ಕಿಂತಲೂ ಆಘಾತಕಾರಿ ವಿಷಯವೊಂದು ಹೊರಬಿದ್ದಿದೆ. ಯುನೈಟೆಡ್ ನೇಷನ್ಸ್ ಚಿಲ್ಡ್ರನ್ಸ್ ಫಂಡ್ (UNICEF)ವರದಿ ಪ್ರಕಾರ ಭಾರತದಲ್ಲಿ ನೀರಿಗಾಗಿಯೇ ಹೆಣ್ಣುಮಕ್ಕಳು ಪ್ರತಿದಿನ ಸರಿಸುಮಾರು 200 ಮಿಲಿಯನ್ ಗಂಟೆಗಳನ್ನು ವ್ಯರ್ಥಮಾಡುತ್ತಿದ್ದಾರೆ. ಇದು ಬೇರೆ ಬೇರೆ ರೂಪದಲ್ಲಿ ಇದ್ರೂ, ಭಾರತದ ಕೋಟ್ಯಾಂತರ ಹೆಣ್ಣುಮಕ್ಕಳು ನೀರಿಗಾಗಿ ಸಮಯವ್ಯರ್ಥಮಾಡುವುದು ಪ್ರತಿದಿನದ ಪರಿಪಾಠವಾಗಿದೆ. 

“ ಒಂದು ದಿನಕ್ಕೆ 200 ಮಿಲಿಯನ್ ಗಂಟೆಗಳು, ಅಂದ್ರೆ 8.3 ಮಿಲಿಯನ್ ದಿನಗಳು ಅಥವಾ 22,800 ವರ್ಷಗಳು. ಇದು ಒಂದು ರೀತಿಯಲ್ಲಿ ಶಿಲಾಯುಗದ ಮಹಿಳೆ ಖಾಲಿ ಬಕೆಟ್ ಹಿಡಿದುಕೊಂಡು ನೀರಿಗಾಗಿ ಹೋದವಳು, 2016 ಬಂದ್ರೂ ವಾಪಾಸ್ ಬಾರದ ಹಾಗೇ ಆಗಿದೆ. ಭಾರತ ಮಾತ್ರ ಈ ವಿಷಯದಲ್ಲಿ ಸಾಕಷ್ಟು ಹಿಂದೆ ಉಳಿದಿದೆ. ಜಗತ್ತಿನ ಬಹುತೇಕ ರಾಷ್ಟ್ರಗಳು ಇಷ್ಟೊಂದು ಸಮಯವನ್ನು ವ್ಯರ್ಥ ಮಾಡುತ್ತಿಲ್ಲ. ಈ ಸಮಯವನ್ನು ಮಹಿಳೆಯರು ಸದುಪಯೋಗಪಡಿಸಿಕೊಂಡಿದ್ರೆ ಏನೆಲ್ಲಾ ಬದಲಾವಣೆ ಆಗುತ್ತಿತ್ತು ಅನ್ನೋದನ್ನ ಕೂಡ ಯೋಚಿಸಬೇಕಿದೆ. ನಮ್ಮ ಸುತ್ತಮುತ್ತ ನೀರು ಸಿಗದೇ ಇದ್ದಾಗ ಮಹಿಳೆಯೇ ಅದನ್ನು ಸಂಗ್ರಹಿಸುವ ಕೆಲಸ ಮಾಡುವುದು ಮಾಮೂಲಿ. ಹೀಗಾಗಿ ಆಕೆ ಬಹಳಷ್ಟು ಸಮಯವನ್ನು ವ್ಯರ್ಥಮಾಡಿದ್ದಾಳೆ. ತನ್ನ ಸಾಧನೆಯ ಹಾದಿಗೆ ಆಕೆಯ ಕೆಲಸಗಳೇ ಅಡ್ಡವಾಗಿದೆ. ”
- ಸಂಜಯ್ ವಿಜೆಸೆಕರ, ಗ್ಲೋಬಲ್ ಹೆಡ್, ವಾಟರ್, ಸ್ಯಾನಿಟೇಷನ್ ಹೆಡ್ ಯುನಿಸೆಫ್

ಯುನಿಸೆಫ್ 2030ರ ಹೊತ್ತಿಗೆ ಜಗತ್ತಿನ ಎಲ್ಲಾ ರಾಷ್ಟ್ರಗಳು ನೀರಿಗಾಗಿ ಸಮಯ ವ್ಯರ್ಥಮಾಡುವುದನ್ನು ತಡೆಯುವಂತೆ ಮಾಡೋದಿಕ್ಕೆ ಹಲವು ಯೋಜನೆಗಳನ್ನು ಆರಂಭಿಸುವ ಪ್ಲಾನ್ ಮಾಡಿಕೊಂಡಿದೆ. ಇದ್ರ ಮೊದಲ ಹೆಜ್ಜೆಯಾಗಿ 30 ನಿಮಿಷಗಳಲ್ಲಿ ನೀರು ಸಿಗುವಂತೆ ಮಾಡುವ ಯೋಜನೆಯನ್ನೂ ಶೀಘ್ರದಲ್ಲೇ ಜಾರಿಗೆ ತರಲಿದೆ. ಅಷ್ಟೇ ಅಲ್ಲ ಮನೆಬಳಕೆಗೆ ಬೇಕಾದ ನೀರನ್ನು ಮನೆ ಮುಂದೆಯೇ ಸಿಗುವಂತೆ ಮಾಡುವ ಉದ್ದೇಶವನ್ನೂ ಇಟ್ಟುಕೊಂಡಿದೆ.

ಇದನ್ನು ಓದಿ: ಕಥೆ ಬದಲಾಗಲು ಇನ್ನೆಷ್ಟು ವರ್ಷ ಬೇಕು..?

ಯುನಿಸೆಫ್ ವರದಿ ಪ್ರಕಾರ ಮನೆಗೆ ವಾಟರ್ ಲೈನ್ ಕನೆಕ್ಷನ್ ಇಲ್ಲದೇ ಹೋದ್ರೆ, ಅದ್ರಿಂದ ಬಳಲುವುದು ಹೆಂಗಸರು ಮತ್ತು ಮಕ್ಕಳು. ಅದ್ರಲ್ಲೂ ಹೆಣ್ಣುಮಕ್ಕಳು ನೀರಿಗಾಗಿ ಸಾಕಷ್ಟು ಸರ್ಕಸ್ ಮಾಡುತ್ತಾರೆ. 24 ಸಬ್ ಸಹರಾ ದೇಶಗಳಲ್ಲಿನ ಅಧ್ಯಯನದ ಪ್ರಕಾರ, ಅಲ್ಲಿ ಕೂಡ ನೀರಿನ ಸಂಗ್ರಹಕ್ಕಾಗಿ 30ನಿಮಿಷಕ್ಕಿಂತ ಹೆಚ್ಚು ಕಾಲವನ್ನು ವ್ಯಯಿಸಬೇಕಾಗುತ್ತದೆ. ಅಲ್ಲಿ ಸರಿಸುಮಾರು 3.36 ಮಿಲಿಯನ್ ಮಕ್ಕಳು ಮತ್ತು 13.54 ಮಿಲಿಯನ್ ಹೆಂಗಸರು ನೀರಿನ ಸಂಗ್ರಹದ ಹೊಣೆ ಹೊತ್ತಿದ್ದಾರೆ.

ಮಲಾವಿ ದೇಶದಲ್ಲಿ ಮಹಿಳೆಯರು ನೀರಿನ ಸಂಗ್ರಹಕ್ಕಾಗಿ ಸರಿಸುಮಾರು 54 ನಿಮಿಷಗಳನ್ನು ವ್ಯಯ ಮಾಡಿದ್ರೆ, ಪುರುಷರು ನೀರಿನ ಸಂಗ್ರಹಕ್ಕೆ ಮೀಸಲಿಡುವುದು ಕೇವಲ 6 ನಿಮಿಷಗಳನ್ನು ಮಾತ್ರ. ಯು.ಎನ್. ವರದಿ ಪ್ರಕಾರ ಮಹಿಳೆಯರೇ ನೀರಿನ ಸಂಗ್ರಹದ ಹೊಣೆಯನ್ನು ಹೆಚ್ಚಾಗಿ ಹೊತ್ತಿರೋದ್ರಿಂದ, ಅವ್ರ ಸಮಯ ಪುರುಷರು ವ್ಯಯಿಸುವ ಒಟ್ಟಾರೆ ಸಮಯಕ್ಕಿಂತ ಹತ್ತು ಪಟ್ಟು ಹೆಚ್ಚಿದೆ.

“ನೀರಿನ ಬವಣೆ, ಹೆಂಗಸರ ಸಮಯವನ್ನು ತಿನ್ನುತ್ತಿದೆ. ಇದು ಕುಟುಂಬದ ಜೊತೆ ಮತ್ತು ಮಕ್ಕಳ ಜೊತೆ ಹೆಚ್ಚಿನ ಸಮ ಕಳೆಯುವುದಕ್ಕೆ ಅವಕಾಶವನ್ನು ಕಡಿಮೆ ಮಾಡುತ್ತದೆ. ಮಕ್ಕಳು ನೀರಿನ ಸಂಗ್ರಹ ಮಾಡುವುದರಿಂದ ಇದು ಅವರ ಶಿಕ್ಷಣದ ಮೇಲೆ ಪ್ರಭಾವ ಬೀರಿದೆ. ಅಷ್ಟೇ ಅಲ್ಲ ಕೆಲವು ಮಕ್ಕಳ ಶಾಲಾ ಜೀವನವನ್ನು ಹಾಳು ಮಾಡಿದೆ”
- ಯುನಿಸೆಫ್

ನೀರಿನ ಸಂಗ್ರಹದ ಕಷ್ಟ ಒಂದೆಡೆಯಾದ್ರೆ, ಮತ್ತೊಂದೆಡೆ ಶುದ್ಧ ನೀರು ಸಿಗುವುದು ಕೂಡ ಕಷ್ಟದ ಮಾತೇ ಆಗಿದೆ. ಹೀಗಾಗಿ ನೀರಿನಿಂದ ಹರಡುವ ಕಾಯಿಲೆಗಳು ಚಿಕ್ಕ ಮಕ್ಕಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ನೀರಿನಿಂದ ಹರಡುವ ಕಾಯಿಲೆಗಳು, ಮಕ್ಕಳು ಸಾವನ್ನಪ್ಪುತ್ತಿರುವ ಕಾರಣಗಳ ಪೈಕಿ 4ನೇ ಸ್ಥಾನ ಪಡೆದುಕೊಂಡಿದೆ. ಪ್ರತಿದಿನ 800ಕ್ಕೂ ಅಧಿಕ 5ವರ್ಷಕ್ಕಿಂ ಕೆಳಗಿನ ಮಕ್ಕಳು ನೀರಿನಿಂದ ಹರಡುವ ಕಾಯಿಲೆಗಳಿಂದ ಮರಣ ಹೊಂದುತ್ತಿದ್ದಾರೆ. ಒಟ್ಟಾರೆ ಯುನಿಸೆಫ್ ಮುಂದಿನ ದಿನಗಳಲ್ಲಿ ಶುದ್ಧ ಕುಡಿಯುವ ನೀರಿನ ಜೊತೆಗೆ ಅವುಗಳು ಅತೀ ಶೀಘ್ರದಲ್ಲಿ ಸಿಗುವಂತೆ ಮಾಡುವ ಯೋಜನೆಗಳನ್ನು ಕೂಡ ಮಾಡಿದೆ. ಯುನಿಸೆಫ್ನ ಈ ಹೆಜ್ಜೆಗಳು ಯಶಸ್ವಿಯಾದ್ರೆ, ಭಾರತದಲ್ಲಿ ಕೋಟ್ಯಾಂತರ ಮಹಿಳೆಯರು ನಿಟ್ಟುಸಿರು ಬಿಡುವುದು ಗ್ಯಾರೆಂಟಿ.

ಇದನ್ನು ಓದಿ:

1. ಆ್ಯಪ್​ನಲ್ಲೇ ಪಠ್ಯ, ಆ್ಯಪ್​ನಲ್ಲೇ ಓದು- ಇದು ಬಡ ಮಕ್ಕಳ ನೆರವಿಗೆ ನಿಂತ ಶಂಕರ್ ಯಾದವ್ ಕಥೆ

2. ಅಡಕೆ ಕೊಯ್ಲಿನ ಚಿಂತೆ ಬಿಡಿ- ಹೊಸ ಯಂತ್ರದ ಬಗ್ಗೆ ತಿಳಿದುಕೊಳ್ಳಿ..!

3. ಶಿಕ್ಷಣಕ್ಕೆ ಸಿಕ್ಕಿದೆ ಹೊಸ ಅವತಾರ- ಪ್ರಾಕ್ಟೀಕಲ್​ನಲ್ಲೇ ಅಡಗಿದೆ ಭವಿಷ್ಯ..! 

Related Stories