ವಿಮಾನದಲ್ಲಿ ಪ್ರಯಾಣಿಲು 'ಆಧಾರ್' ಆಧಾರ..!

ಟೀಮ್​ ವೈ.ಎಸ್​. ಕನ್ನಡ

ವಿಮಾನದಲ್ಲಿ ಪ್ರಯಾಣಿಲು 'ಆಧಾರ್' ಆಧಾರ..!

Friday April 07, 2017,

2 min Read

ಆಧಾರ್ ಕಾರ್ಡ್. ಇವತ್ತು ಎಲ್ಲಾ ರೀತಿಯಿಂದಲೂ ಬಳಕೆಗೆ ಬರುತ್ತಿದೆ. ಐಟಿ ರಿಟರ್ನ್ಸ್​​ನಿಂದ ಹಿಡಿದು, ಗ್ಯಾಸ್ ಸಬ್ಸಿಡಿ ಪಡೆಯಲು, ಬ್ಯಾಂಕ್ ಖಾತೆ ತೆರೆಯುವಲ್ಲಿಂದ ಹಿಡಿದು, ಪಾನ್ ಕಾರ್ಡ್ ಅಪ್ಲಿಕೇಷನ್ ತುಂಬುವ ತನಕ ಎಲ್ಲವೂ ಆಧಾರ್ ನಂಬರ್ ಆಧಾರದ ಮೇಲೆಯೇ ನಡೆಯುತ್ತಿದೆ. ಈಗ ಇದಕ್ಕೊಂದು ಹೊಸ ಸೇರ್ಪಡೆಯಾಗಿದೆ. ಮುಂದಿನ ಕೆಲವೇ ತಿಂಗಳುಗಳಲ್ಲಿ ವಿಮಾನದಲ್ಲಿ ಪ್ರಯಾಣ ಮಾಡಬೇಕಾದ್ರೂ ಆಧಾರ್ ಇರಲೇಬೇಕಾಗುತ್ತದೆ. ಕೇಂದ್ರ ಸರಕಾರ ವಿಮಾನದಲ್ಲಿ ಪ್ರಯಾಣಿಸಲು ಆಧಾರ್ ಕಡ್ಡಾಯ ಮಾಡುವ ಯೋಜನೆಯೊಂದನ್ನು ಸಿದ್ಧಪಡಿಸಿದೆ. ಆಧಾರ್​ನಲ್ಲಿ ಈಗಾಗಲೇ ಕಾರ್ಡ್ ಹೊಂದಿರುವವರ ಫಿಂಗರ್ ಪ್ರಿಂಟ್ ಇದ್ದೇ ಇದೆ. ಈಗ ವಿಮಾನ ಪ್ರಯಾಣಕ್ಕೆ ಇದನ್ನು ಬಳಸಿಕೊಳ್ಳಲು ಪ್ಲಾನ್​ಗಳು ಸಿದ್ಧಗೊಳ್ಳುತ್ತಿವೆ. ಐಟಿ ವಲಯದ ಪ್ರಮುಖ ಸಂಸ್ಥೆ ವಿಪ್ರೋ ಆಧಾರ್ ಆಧರಿತ ಬಯೋಮೆಟ್ರಿಕ್ ವ್ಯವಸ್ಥೆ ಬಗ್ಗೆ ಬ್ಲೂ ಪ್ರಿಂಟ್ ಮಾಡಲಿದ್ದು, ಇದು ಭಾರತದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಕೆಲವೇ ತಿಂಗಳುಗಳಲ್ಲಿ ಜಾರಿಗೆ ಬರಲಿದೆ.

image


ವಿಪ್ರೋ ಸಂಸ್ಥೆ ಕೆಲವೇ ತಿಂಗಳುಗಳಲ್ಲಿ ಆಧಾರ್ ಆಧರಿತ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಎಲ್ಲಾ ಏರ್​ಪೋರ್ಟ್​ಗಳಿಗೂ ಒದಗಿಸಿಕೊಡಲಿದೆ. ಎಲ್ಲಾ ಹಂತಗಳು ಮುಗಿದ ಮೇಲೆ ವಿಮಾನದಲ್ಲಿ ಪ್ರಯಾಣಿಸಲು ಥಂಬ್ ಇಂಪ್ರೆಷನ್ ಅನ್ನು ಬಳಸಿಕೊಳ್ಳಲಾಗುತ್ತದೆ. ಈ ಥಂಬ್ ಇಂಪ್ರೆಷನ್ ಆಧಾರ್ ನೊಂದಣಿವೇಳೆಯಲ್ಲಿ ದಾಖಲಾಗಿದ್ದ ಬೆರಳಚ್ಚಿಗೆ ಹೊಂದಿಕೆ ಆಗುತ್ತದೆ. ದೇಶೀಯ ವಿಮಾನ ಪ್ರಯಾಣಕ್ಕೆ ಇದು ಕಡ್ಡಾಯವಾಗಿದೆ. ಅಂತರಾಷ್ಟ್ರೀಯ ಪ್ರಯಾಣಕ್ಕೆ ಪಾಸ್​ಪೋರ್ಟ್ ಇರಲೇಬೇಕು.

ಇದನ್ನು ಓದಿ: ಆಧಾರ್ ಕಾರ್ಡ್ ಇಲ್ಲದೇ ಇದ್ರೆ ಮಧ್ಯಾಹ್ನ ಊಟದ ಯೋಜನೆ ಲಾಭ ಸಿಗಲ್ಲ

ಈ ಮಧ್ಯೆ ಆಧಾರ್ ನಂಬರ್ ಅನ್ನು ಏರ್ ಟ್ರಾವೆಲ್ ಬುಕ್ಕಿಂಗ್ ವೇಳೆ ಲಿಂಕ್ ಮಾಡುವ ಬಗ್ಗೆಯೂ ಯೋಚನೆಗಳು ನಡೆಯುತ್ತಿವೆ. ಅನೇಕ ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರದ ಜೊತಗೆ ಹಲವು ಸುತ್ತಿನ ಮಾತುಕತೆಗಳು ಕೂಡ ಶೀಘ್ರದಲ್ಲೇ ನಡೆಯಲಿದೆ. ವಿಪ್ರೋ ಸಂಸ್ಥೆ ಕೂಡ ಈ ಬಗ್ಗೆ ವಿವಿಧ ಪ್ಲಾನ್ಗಳನ್ನು ನೀಡಲಿದೆ.

“ ವಿಮಾನ ಪ್ರಯಾಣಿಕರು ಟಿಕೆಟ್ ಬುಕ್ಕಿಂಗ್ ಮಾಡುವ ವೇಳೆಯಲ್ಲಿ ಆಧಾರ್ ನಂಬರ್ ನೀಡುತ್ತಾರೆ. ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಎಂಟ್ರಿಯಾದ ಮೇಲೆ ಥಂಬ್ ಇಂಪ್ರೆಷನ್ ಮೂಲಕ ಪ್ರಯಾಣ ಮಾಡಬಹುದು. ಬೇರೆ ಬೇರೆ ವಿಮಾನ ನಿಲ್ದಾಣಗಳಲ್ಲೂ ಈ ಪ್ರಕ್ರಿಯೆ ನಡೆಯಲಿದೆ. ವಿಮಾನದಲ್ಲಿ ಅತೀ ಸುಲಭವಾದ ಮತ್ತು ಮನಸ್ಸಿಗೆ ಖುಷಿ ನೀಡುವ ಪ್ರಯಾಣವನ್ನು ಪ್ರಯಾಣಿಕರು ಮಾಡಬೇಕು ಅನ್ನುವುದು ನಮ್ಮ ಬಯಕೆ ”
- ಗುರುಪ್ರಸಾದ್ ಮೊಹಪಾತ್ರ, ಚೇರ್ಮನ್, ಏರ್​ಪೋರ್ಟ್ ಅಥಾರಿಟಿ ಆಫ್ ಇಂಡಿಯಾ

ಈ ಮಧ್ಯೆ ವಿಮಾನ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಎಂಟ್ರಿಕೊಡುವಾಗ ಭದ್ರತಾ ದೃಷ್ಟಿಯಿಂದ ಗುರುತುಪತ್ರ ಮತ್ತು ಟಿಕೆಟ್ ಕಾಪಿಯನ್ನು ತೋರಿಸಬೇಕಾಗುತ್ತದೆ. ಸರಕಾರ ಕೆಲ ದಿನಗಳ ಹಿಂದೆ ಇ-ರಿಟರ್ನ್ಸ್ ಫೈಲ್ ಮಾಡುವುದಕ್ಕಿಂತ ಮುನ್ನ ಮೊಬೈಲ್ ನಂಬರ್ ಪರಿಶೀಲನೆಗೆ ಸೂಚಿಸಿತ್ತು. ಮೊಬೈಲ್ ಸರ್ವಿಸ್ ಪ್ರೊವೈಡರ್​ಗಳು ಕೂಡ ಆಧಾರ್ ನ್ನು 2018ರ ಫೆಬ್ರವರಿ ಒಳಗೆ ಕಡ್ಡಾಯ ಮಾಡಲೇಬೇಕಿದೆ. ಈಗ ವಿಮಾನ ಪ್ರಯಾಣಕ್ಕೂ ಆಧಾರ್ ಬೇಕಾಗುತ್ತದೆ. ಆಧಾರ್ ಇನ್ನುಮುಂದೆ ಎಲ್ಲಾ ಕಾರ್ಯಕ್ಕೂ ಆಧಾರವಾಗಲಿದೆ.

ಇದನ್ನು ಓದಿ:

1. ಭಾರತದ ವಾರೆನ್ ಬಫೆಟ್ ಕಥೆ ಗೊತ್ತಾ..? ಅಂಬಾನಿ ಸಂಪತ್ತಿಗೆ ಸವಾಲೆಸೆದ “ಧಮನಿ”..!

2. ಇಲ್ಲಿ ದುಡ್ಡಿದ್ದರೂ ಕೇಳೋಕೆ ಜನರೇ ಇಲ್ಲ..!

3. ಡಿಜಿಟಲ್​ ಲೆಕ್ಕದಲ್ಲಿ ಹಿಂದೆ ಬಿದ್ದ ಭಾರತ- ಮೋದಿ ಕನಸಿಗೆ ಪೆಟ್ಟು ಕೊಡುತ್ತಿದೆ ಹಾರ್ಡ್​ಕ್ಯಾಶ್​..!