ಇಂಟರ್​ನೆಟ್ ಸ್ಪೀಡ್ ವಿಚಾರದಲ್ಲಿ ಭಾರತ ಹಿಂದೆ- ಡಿಜಿಟಲ್ ಕ್ರಾಂತಿಗೆ ಇಂಟರ್​ನೆಟ್ ವೇಗದಿಂದ ಹಿನ್ನಡೆ

ಟೀಮ್​ ವೈ.ಎಸ್​. ಕನ್ನಡ

ಇಂಟರ್​ನೆಟ್ ಸ್ಪೀಡ್ ವಿಚಾರದಲ್ಲಿ ಭಾರತ ಹಿಂದೆ- ಡಿಜಿಟಲ್ ಕ್ರಾಂತಿಗೆ ಇಂಟರ್​ನೆಟ್ ವೇಗದಿಂದ ಹಿನ್ನಡೆ

Monday June 05, 2017,

2 min Read

ಇಂಟರ್​ನೆಟ್​​ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಭಾರತದ ಡಿಜಿಟಲ್ ಕ್ರಾಂತಿ ನಿಜಕ್ಕೂ ಅಭಿವೃದ್ಧಿಯ ಕನಸುಗಳನ್ನು ಹುಟ್ಟುಹಾಕಿದೆ. ಮೊಬೈಲ್ ಕ್ಷೇತ್ರ ಸೇರಿದಂತೆ, ಎಲ್ಲಾ ಕಡೆಯೂ ಇಂಟರ್​ನೆಟ್​​ ಬಳಕೆ ಹೆಚ್ಚುತ್ತಿದೆ. ಸ್ಮಾರ್ಟ್​ಫೋನ್ ಜಮಾನದಲ್ಲಿ ಇಂಟರ್ ನೆಟ್ ಅಗತ್ಯ ಬೇಡಿಕೆಗಳ ಪಟ್ಟಿ ಸೇರಿಕೊಂಡಿದೆ. ಭಾರತದ ಬಹುತೇಕ ಸ್ಮಾರ್ಟ್ ಫೋನ್ ಬಳಕೆದಾರರು ಇಂಟರ್​​ನೆಟ್ ಸಂಪರ್ಕವನ್ನು ಹೊಂದಿದ್ದಾರೆ.

image


ಅಚ್ಚರಿ ಅಂದ್ರೆ ಭಾರತದ ಇಂಟರ್​ನೆಟ್​​ ಬಳಕೆ ಜಗತ್ತಿನ ಉಳಿದ ದೇಶಗಳ ಬಳಕೆಗಿಂತ ಸಾಕಷ್ಟು ಕಡಿಮೆ ಇದೆ. ಅಷ್ಟೇ ಅಲ್ಲ ಇಂಟರ್​ನೆಟ್​​ ಸ್ಪೀಡ್ ವಿಷಯದಲ್ಲೂ ಹಿಂದಿದೆ. ಭಾರತ ಸುಮಾರು 6.5 ಎಂಬಿಪಿಎಸ್ ಇಂಟರ್​​ನೆಟ್​​ ಸ್ಪೀಡ್ ಅನ್ನು ಹೊಂದಿದ್ದು, ವಿಶ್ವದಲ್ಲಿ 89ನೇ ಸ್ಥಾನ ಪಡೆದುಕೊಂಡಿದೆ. ಅಚ್ಚರಿ ಅಂದ್ರೆ ವಿಯೆಟ್ನಾಂ ಮತ್ತು ಇಂಡೋನೇಷಿಯಾದಲ್ಲಿ ಇಂಟರ್​ನೆಟ್ ಭಾರತಕ್ಕಿಂತಲೂ ಹೆಚ್ಚು ವೇಗವನ್ನು ಪಡೆದುಕೊಂಡಿದೆ.

ವಿಯೆಟ್ನಾಂ ಸುಮಾರು 9.5 ಎಂಬಿಪಿಎಸ್ ಇಂಟರ್​ನೆಟ್ ವೇಗವನ್ನು ಹೊಂದಿದ್ದು, 58ನೇ ಸ್ಥಾನ ಪಡೆದುಕೊಂಡಿದೆ. ಇಂಡೋನೇಷಿಯಾದಲ್ಲಿ ಸರಾಸರಿ ಇಂಟರ್​ನೆಟ್​​ ವೇಗ ಸುಮಾರು 7.3 ಎಂಬಿಪಿಎಸ್ ಇದ್ದು 77ನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದೊಂದು ವರ್ಷದಲ್ಲಿ ಭಾರತ ಇಂಟರ್​ನೆಟ್​​ ವೇಗದಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ಉಳಿದೆಲ್ಲಾ ದೇಶಗಳಿಗಿಂತ ಹೆಚ್ಚು ಸ್ಪೀಡ್​​ನ ಇಂಟರ್​ನೆಟ್​​ ಬಳಕೆಯತ್ತ ಚಿತ್ತ ನೆಟ್ಟಿದೆ.

ಇದನ್ನು ಓದಿ: ಅಪ್ರಾಪ್ತ ಮಕ್ಕಳಿಗಾಗಿ ಹೊಸ ಆ್ಯಪ್- ಪೋಷಕರ ಚಿಂತೆ ದೂರ ಮಾಡಲಿದೆ ಫೇಸ್​ಬುಕ್..!

ಭಾರತದಲ್ಲಿ ಇಂಟರ್​ನೆಟ್ ಬಳಕೆ ಹೆಚ್ಚಾಗುತ್ತಿದೆ. ಡೇಟಾ ಬಳಕೆ ಮತ್ತು ಟ್ರಾಫಿಕ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಡಿಜಿಟಲ್ ಇಂಡಿಯಾ ಕಾನ್ಸೆಪ್ಟ್ ಇಂಟರ್​ನೆಟ್ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸುತ್ತಿದೆ. ಅಷ್ಟೇ ಅಲ್ಲ ಆನ್​ಲೈನ್ ಮೂಲಕ ಎಷ್ಟು ಹೆಚ್ಚು ಮತ್ತು ಉತ್ತಮವಾಗಿ ಪ್ರಯೋಜನ ಪಡೆಯಬಹುದೋ ಅಷ್ಟು ದೊಡ್ಡದಾಗಿ ಉದ್ದಿಮೆಗಳು ಬೆಳೆಯುತ್ತಿವೆ. ಇವತ್ತಿನ ಚಿಕ್ಕ ಮತ್ತು ಮಧ್ಯಮ ಉದ್ದಿಮೆಗಳು ಭವಿಷ್ಯದಲ್ಲಿ ದೊಡ್ಡ ಉದ್ದಿಮೆಗಳಾಗುವತ್ತ ದಿಟ್ಟ ಹೆಜ್ಜೆ ಇಡುತ್ತಿವೆ. ಇದಕ್ಕೆಲ್ಲಾ ಇಂಟರ್​ನೆಟ್​ನ ಬಳಕೆ ಪ್ರಮುಖ ಕಾರಣವಾಗುತ್ತಿದೆ.

ವಿಶ್ವದಲ್ಲಿ ದಕ್ಷಿಣ ಕೊರಿಯಾ ಅತ್ಯಂತ ವೇಗದ ಇಂಟರ್ ನೆಟ್ ಸಂಪರ್ಕವನ್ನು ಹೊಂದಿದೆ. ದಕ್ಷಿಣ ಕೊರಿಯಾದಲ್ಲಿ ಸರಿಸುಮಾರು 38.6 ಎಂಬಿಪಿಎಸ್ ವೇಗದಲ್ಲಿ ಇಂಟರ್​​ನೆಟ್ ಲಭ್ಯವಿದೆ. ಪೀಕ್ ಕನೆಕ್ಷನ್​ನಲ್ಲಿ ಸಿಂಗಪೂರ ಮೊದಲ ಸ್ಥಾನ ಪಡೆದಿದ್ದು ಅದರ ವೇಗ 184.5 ಎಂಬಿಪಿಎಸ್ ನಷ್ಟಿದೆ. ಬ್ರಿಟನ್​ನಲ್ಲಿ ಸರಸಾರಿ ಇಂಟರ್​ನೆಟ್​​ ವೇಗ 26 ಎಂಬಿಪಿಎಸ್​ನಷ್ಟಿದೆ. ಮತ್ತೊಂದೆಡೆ ಕೇವಲ 2.8 ಎಂಬಿಪಿಎಸ್ ವೇಗವನ್ನು ಹೊಂದಿರುವ ವೆನಿಝುವೆಲಾ ಅತ್ಯಂತ ಕಡಿಮೆ ಶ್ರೇಯಾಂಕವನ್ನು ಪಡೆದಿದೆ.

ಭಾರತ ಮೊಬೈಲ್ ಬ್ರಾಡ್​ಬ್ಯಾಂಡ್ ಕನೆಕ್ಟಿವಿಟಿಯನ್ನು ಸರಿಯಾಗಿ ಬಳಸಿಕೊಳ್ಳುವ ಹಾದಿಯಲ್ಲಿದೆ. ಸುಮಾರು 1 ಮಿಲಿಯನ್​ಗೂ ಅಧಿಕ ಜನರು ಪ್ರತಿದಿನ ಹೊಸದಾಗಿ ಮೊಬೈಲ್​ನಲ್ಲಿ ಇಂಟರ್ನೆಟ್ ಬಳಕೆ ಮಾಡುತ್ತಿದ್ದಾರೆ. 2016ರಲ್ಲಿ ಸುಮಾರು 460 ಮಿಲಿಯನ್ ಮೊಬೈಲ್ ಇಂಟರ್​ನೆಟ್​​ ಬಳಕೆದಾರರಿದ್ದರು. ಇತ್ತೀಚಿನ ದಿನಗಳಲ್ಲಿ ಗ್ರಾಹಕರು ಆನ್​ಲೈನ್ ಮತ್ತು ಡಿಜಿಟಲ್ ವ್ಯವಸ್ಥೆಗಳಿಗೆ ಹೆಚ್ಚಾಗಿ ಹೊಂದಿಕೊಳ್ಳುತ್ತಿದ್ದಾರೆ. ಹೀಗಾಗಿ ಉದ್ದಿಮೆದಾರರು ಅನ್ಯಮಾರ್ಗವಿಲ್ಲದೆ ಆನ್​ಲೈನ್ ಕಡೆಗೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಮಾರ್ಕೆಟಿಂಗ್, ಸೇಲ್ಸ್, ಪೇಮೆಂಟ್ಸ್ ಮತ್ತು ಕಸ್ಟಮರ್ ಸರ್ವೀಸ್​ಗಳೆಲ್ಲವೂ ಬಹುತೇಕವಾಗಿ ಈಗ ಆನ್ ಲೈನ್ ಆಗಿಬಿಟ್ಟಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಭಾರತದ ಇಂಟರ್​ನೆಟ್​ ಬಳಕೆ ಟ್ರಾಫಿಕ್​ ಮತ್ತು ವೇಗ ಹೆಚ್ಚಾಗುವುದು ಖಚಿತ.

ಇದನ್ನು ಓದಿ:

1. ಸ್ಟಾರ್ಟ್ಅಪ್ ಲೋಕದಲ್ಲಿ ಹೊಸ ಪ್ರಯೋಗ- ಸದ್ದು ಮಾಡುತ್ತಿದೆ ನಿಕಿತಾ ಲಲ್ವಾನಿಯ ಸೈಕಲ್ ಸಿಟಿ 

2. ಬದಲಾಗಿದೆ ಶಿಕ್ಷಣ ವ್ಯವಸ್ಥೆ- ಭಾರತದ ಅಭಿವೃದ್ಧಿಗೆ ಕನಸು ಬಿತ್ತಿದೆ ಡಿಜಿಟಲ್​ ಕ್ರಾಂತಿ 

3. ಗಾಯಗೊಂಡ ಪ್ರಾಣಿಗಳಿಗೆ ಆಶ್ರಯ ತಾಣ- ವಿರಾಟ್​ ಕೊಹ್ಲಿ ಭೇಟಿ ಬಳಿಕ ಬದಲಾಗಿದೆ ಅದೃಷ್ಟ