ಟೇಸ್ಟ್​ನಲ್ಲಿ ಸೂಪರ್, ಆರೋಗ್ಯಕ್ಕೆ ಕೊಡುತ್ತೆ ಎಕ್ಸಟ್ರಾ ಪವರ್- ಇದು ಸಿರಿಧಾನ್ಯಗಳ ಖದರ್

ಟೀಮ್​ ವೈ.ಎಸ್​.ಕನ್ನಡ

1

ಧಾನ್ಯಗಳನ್ನು, ಕಾಳುಗಳನ್ನು ಭಾರತದಲ್ಲಿ ಹೆಚ್ಚಾಗಿ ಬಳಸಿಕೊಳ್ಳುತ್ತಾರೆ. ಆಹಾರಗಳ ಉಪಯೋಗಳಲ್ಲಂತೂ ಸಿರಿಧಾನ್ಯಗಳು ಹೆಚ್ಚಾಗಿರುತ್ತದೆ. ಜೋಳ ಮತ್ತು ರಾಗಿ ಪ್ರಧಾನ ಆಹಾರವಾಗಿದೆ. ಆಯಾ ಪ್ರದೇಶಗಳಲ್ಲಿ ಹೇರಳವಾಗಿ ಬೆಳೆಯುವ ಧಾನ್ಯಗಳು, ಆಯಾ ಪ್ರದೇಶಗಳಲ್ಲಿ ಹೆಚ್ಚು ಬಳಕೆಯಾಗುತ್ತಿದೆ. ಅಚ್ಚರಿ ಅಂದ್ರೆ ಈ ಧಾನ್ಯಗಳ ಕೃಷಿ ಭಾರತದಲ್ಲಿ ಇನ್ನೂ ಕೂಡ ಪ್ರಧಾನ ಕೃಷಿಯಾಗಿ ಬದಲಾಗಿಲ್ಲ. ಧಾನ್ಯಗಳು ಕೇವಲ ಆರೋಗ್ಯಕಾರಿ ಮಾತ್ರವಲ್ಲ, ಅವುಗಳನ್ನು ಕಡಿಮೆ ನೀರಿನಲ್ಲಿ ಬೆಳೆಯಬಹುದು. ಅಷ್ಟೇ ಅಲ್ಲ ಹೆಚ್ಚು ಕಾಲ ಧಾನ್ಯಗಳನ್ನು ಮತ್ತು ಕಾಳುಗಳನ್ನು ಸಂಗ್ರಹಿಸಿಡಬಹುದು.

ಕಳೆದ ಕೆಲವು ದಶಕಗಳಿಂದ ಸಿರಿಧಾನ್ಯಗಳ ಬಳಕೆ ಮತ್ತು ಅವುಗಳನ್ನು ಬೆಳೆಯುವ ಪ್ರಕ್ರಿಯೆಯಲ್ಲಿ ಸಾಕಷ್ಟು ಹಿನ್ನಡೆಯಾಗಿದೆ. ಭತ್ತ ಮತ್ತು ಗೋಧಿಯ ಬಳಕೆ ಆ ಬೆಳೆಗಳನ್ನು ಹೆಚ್ಚು ಬೆಳೆಯುವಱಮತೆ ಮಾಡಿದೆ. 1960ರ ಹಸಿರು ಕ್ರಾಂತಿಯ ಬಳಿಕ ಸಿರಿಧಾನ್ಯಗಳ ಕೃಷಿ ಶೇಕಡಾ 40ಕ್ಕಿಂತ ಶೇಕಡಾ 20ಕ್ಕೆ ಇಳಿದು ಬಿಟ್ಟಿದೆ. ಸರಕಾರ ರೂಪಿಸಿದ ನಿಯಮಗಳು ಮತ್ತು ನಗರ ಪ್ರದೇಶದ ಜನರು ಸಿರಿಧಾನ್ಯಗಳ ಬಳಕೆ ಕೇವಲ ಬಡವರಿಗೆ ಮಾತ್ರ ಮೀಸಲು ಅನ್ನುವ ಹಾಗೇ ಯೋಚನೆ ಮಾಡುತ್ತಿರುವು ಈ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ.

ಇದನ್ನು ಓದಿ: ಮರೆತುಹೋಗಿದ್ದ ಆರೋಗ್ಯಕರ ಆಹಾರ : ಸಿರಿಧಾನ್ಯಗಳ ಬಗ್ಗೆ ಜಾಗೃತಿ ಮೂಡಿಸುತ್ತಿದೆ ಕರ್ನಾಟಕ ಸರ್ಕಾರ

ಇವತ್ತು ಎಲ್ಲವೂ ಬದಲಾಗಿದೆ. ಆರೋಗ್ಯಯುತ ಜೀವನಕ್ಕಾಗಿ ಧಾನ್ಯಗಳ ಅವಶ್ಯಕತೆ ಇದೆ ಅನ್ನುವುದು ಜನರ ಗಮನಕ್ಕೆ ಬಂದಿದೆ. ಹೀಗಾಗಿ ಇವುಗಳಿಗೆ ಹೆಚ್ಚು ಬೇಡಿಕೆ ಬಂದಿದೆ. ಕರ್ನಾಟಕ ಸರಕಾರವಂತೂ ರಾಷ್ಟ್ರೀಯ ಸಿರಿಧಾನ್ಯ ಮೇಳವನ್ನು ಆಯೋಸಿ, ರೈತರಿಗೆ ಹಾಗೂ ಗ್ರಾಹಕರ ನಡುವಿನ ಅಂತರವನ್ನು ಕಡಿಮೆ ಮಾಡಿದೆ.

ಸಿರಿಧಾನ್ಯಗಳ ಬಳಕೆಯಿಂದ ಹಲವು ರೀತಿಯ ಆಹಾರಗಳನ್ನು ತಯಾರು ಮಾಡಬಹುದು. ಅಷ್ಟೇ ಅಲ್ಲ ಅಕ್ಕಿ, ಗೋಧಿಗಳಿಗಿಂತ ರುಚಿಯಾದ ಆಹಾರವನ್ನು ಕೂಡ ತಯಾರು ಮಾಡಬಹುದು. ಸಿರಿಧಾನ್ಯಗಳಿಂದ ತಯಾರು ಮಾಡಬಹುದಾದ ಕೆಲವೇ ಕೆಲವು ಆಹಾರಗಳು ಬಗ್ಗೆ ನೀವು ಓದಿಕೊಳ್ಳಿ.

1. ಏಕದಳ ಗಂಜಿ: ಇದು ಧಾನ್ಯಗಳು ಸೇವಿಸಲು ಇರುವ ಸಾಮಾನ್ಯ ವಿಧಾನವಾಗಿದೆ. ಧಾನ್ಯಗಳನ್ನು ಬೇಯಿಸಿ, ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಹುಳಿ, ಖಾರಗಳನ್ನು ಸೇರಿಸಿಕೊಂಡು ತಿನ್ನುವ ವಿಧಾನವಾಗಿದೆ. ಇದರ ಜೊತೆಗೆ ತಾಜಾಹಣ್ಣುಗಳನ್ನು ಕೂಡ ಸೇರಿಸಿಕೊಳ್ಳಬಹುದು.

2. ಉಪ್ಮ: ದಕ್ಷಿಣ ಭಾರತದ ಪ್ರಸಿದ್ಧ ಬೆಳಗ್ಗಿನ ಉಪಹಾರವಾಗಿದೆ. ಸಾಮಾನ್ಯವಾಗಿ ಉಪ್ಮವನ್ನು ರವೆಯ ಮೂಲಕ ತಯಾರಿಸುತ್ತಾರೆ. ಆದ್ರೆ ಕಾಳುಗಳ ಮೂಲಕವೂ ಇದನ್ನು ತಯಾರಿಸಬಹುದು. ಅಷ್ಟೇ ಅಲ್ಲ ಧಾನ್ಯಗಳ ಮೂಲಕ ತಯಾರಿಸಿದ ಉಪ್ಮ ಆರೋಗ್ಯಕಾರಿಯಾಗಿರುತ್ತದೆ.

3. ಪಿಜ್ಹಾಗಳು: ಹೌದು, ನೀವು ಓದುತ್ತಿರುವುದು ನಿಜ. ರುಚಿಗಾಗಿ ಅನಾರೋಗ್ಯಕಾರಿ ಆಹಾರ ತಿನ್ನುವುದನ್ನು ಬಿಟ್ಟುಬಿಡಲು ಇದು ಪರ್ಯಾಯ ವ್ಯವಸ್ಥೆ. ಧಾನ್ಯಗಳಿಂದ ಪಿಜ್ಹಾಗಳನ್ನು ತಯಾರು ಮಾಡಬಹುದು. ಮೈದಾನಗಳಿಂದ ಪಿಜ್ಹಾ ತಯಾರು ಮಾಡುವುದು ಸಾಮಾನ್ಯ. ಆದ್ರೆ ಮೈದಾ ಬದಲು ಧಾನ್ಯಗಳಿಂದ ತಯಾರು ಮಾಡಿದ ಹಿಟ್ಟುಗಳನ್ನು ಪಿಜ್ಹಾ ತಯಾರಿಸಲು ಬಳಸಿಕೊಳ್ಳಬಹುದು. ಆರೋಗ್ಯದ ಜೊತೆ ಉತ್ತಮ ರುಚಿಯನ್ನು ಕೂಡ ನೀಡುತ್ತದೆ.

4. ಕರಿದ ತಿಂಡಿಗಳು: ಧಾನ್ಯಗಳಿಂದ ಕರಿದ ತಿಂಡಿಗಳನ್ನು ಕೂಡ ತಯಾರಿಸಬಹುದು. ಇವುಗಳು ಕಡಿಮೆ ಎಣ್ಣೆಯ ಅಂಶಗಳನ್ನು ಹೊಂದಿದ್ದು ಆರೋಗ್ಯಕ್ಕೆ ಹೆಚ್ಚು ಉಪಯೋಗಕಾರಿಯಾಗಿವೆ.

5. ರಾಗಿ ಅಂಬಲಿ ಮತ್ತು ಮಜ್ಜಿಗೆ: ಇದು ದೇಹವನ್ನು ತಂಪಾಗಿಡಲು ಸಹಕಾರಿ. ಅಷ್ಟೇ ಅಲ್ಲ ದೇಹದಲ್ಲಿ ನೀರಿನ ಅಂಶವನ್ನು ಅತೀ ಹೆಚ್ಚು ಕಾಲ ಇರುವಂತೆ ಮಾಡುತ್ತದೆ. ಕೇವಲ ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲದೆ ರುಚಿಯಲ್ಲೂ ಸಖತ್ ಟೇಸ್ಟೀಯಾಗಿರುತ್ತದೆ.

6. ಹಲ್ವಾ: ರಾಗಿಯನ್ನು ಹಲ್ವಾ ಮಾಡಲು ಕೂಡ ಬಳಸಿಕೊಳ್ಳಬಹುದು. ಅಷ್ಟೇ ಅಲ್ಲ ರಾಗಿ ಹಲ್ವಾಕ್ಕೆ ಬೇರೆ ಬೇರೆ ಹಣ್ಣುಹಂಪಲುಗಳನ್ನು ಕೂಡ ಸೇರಿಸಿಕೊಳ್ಳಬಹುದು.

7. ಬಿರಿಯಾನಿ, ಪೊಂಗಲ್ ಮತ್ತು ಕಿಚ್ಡಿ: ಬೇರೆ ಬೇರೆ ಧಾನ್ಯಗಳನ್ನು ಬಳಸಿಕೊಂಡು, ಅಕ್ಕಿಯ ಬದಲು ರಾಗಿಯನ್ನು ಬಳಸಿಕೊಂಡು ಬಿರಿಯಾನಿ, ಪೊಂಗಲ್ ಮತ್ತು ಕಿಚ್ಡಿಗಳನ್ನು ತಯಾರು ಮಾಡಬಹುದು.

ಈ ಆಹಾರಗಳು ಧಾನ್ಯಗಳಿಂದ ಏನೇನು ತಯಾರು ಮಾಡಬಹುದು ಅನ್ನುವುದಕ್ಕೆ ಕೇವಲ ಉದಾಹರಣೆಗಳಷ್ಟೇ. ಆದ್ರೆ ನಮ್ಮ ಲೈಫ್ ಸ್ಟೈಲ್​ಗೆ  ಅನುಸಾರವಾಗಿ ಮತ್ತು ಆಯಾ ವಲಯಗಳಿಗೆ ಅನುಸಾರವಾಗಿ ಹಲವು ಆಹಾರಗಳನ್ನು ಧಾನ್ಯಗಳ ಮೂಲಕ ತಯಾರು ಮಾಡಬಹುದು. ಆರೋಗ್ಯವನ್ನು ಕಾಪಾಡುವ ಧಾನ್ಯಗಳಿಂದ ಆಹಾರ ತಯಾರು ಮಾಡಿ ಹೊಟ್ಟೆ ತುಂಬಿಸಿಕೊಂಡ್ರೆ ಕಾಯಿಲೆಗಳಿಂದ ದೂರವಾಗಬಹುದು.

ಇದನ್ನು ಓದಿ:

1. ಓಟ್ಸ್ ಬಗ್ಗೆ ತಿಳಿದುಕೊಂಡವರು ಧಾನ್ಯಗಳ ಬಗ್ಗೆ ಯಾಕೆ ತಿಳಿದುಕೊಂಡಿಲ್ಲ..?ಸಿರಿಧಾನ್ಯಗಳು ಇವತ್ತಿಗೂ “ವಿಶೇಷ” ಆಹಾರ..! 

2. ರಾಷ್ಟ್ರೀಯ ಮಟ್ಟದ ಸಿರಿಧಾನ್ಯ ಮೇಳದ ಯಶಸ್ಸಿನ ನಂತರ ಹೊಸ ಕನಸು- ಅಂತರಾಷ್ಟ್ರೀಯ ಮಟ್ಟದ ಮೇಳದ 

ಆಯೋಜನೆಗೆ ಪ್ಲಾನಿಂಗ್

3. ಸಿರಿಧಾನ್ಯ ಮೇಳಗಳಲ್ಲಿ ಮಿಂಚಿದ “ಕನಸಿನ ಮರ”- ಗ್ರಾಹಕರ ಅಭಿಮತಗಳೇ ಸರಕಾರಕ್ಕೆ ವರ..!

Related Stories